ವಾಮಂಜೂರು ಮೇ ದಿನಾಚರಣೆಯ ಭಾಗವಾಗಿ ಸಂಗಾತಿ ಪ್ರೀಮಿಯರ್ ಲೀಗ್
Sunday, April 19, 2026
ಮಂಗಳೂರು: ಅಂತರಾಷ್ಟ್ರೀಯ ಕಾರ್ಮಿಕ ದಿನದ ಅಂಗವಾಗಿ ವಾಮಂಜೂರು ಬೊಂಡಂತಿಲ ಇಲ್ಲಿ ಇಂದು ಮೇ ದಿನಾಚರಣಾ ಸಮಿತಿ ವಾಮಂಜೂರು ಇದರ ನೇತೃತ್ವದಲ್ಲಿ ಸಂಗತಿ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟವು ನಡೆಯಿತು.
ಈ ಕ್ರಿಕೆಟ್ ಪಂದ್ಯಾಟವನ್ನು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್ ಡಿ ವೈ ಎಫ್ ಐ ನ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಮತ್ತು ಸಿಐಟಿಯುನ ಗುರುಪುರ ವಲಯ ಕಾರ್ಯದರ್ಶಿಯಾದ ನೋಣಯ ಗೌಡ ಇವರು ಕ್ರಿಕೆಟ್ ಆಡುವ ಮೂಲಕ ಉದ್ಘಾಟಿಸಿದರು.
ಕ್ರೀಡಾಪಟುಗಳನ್ನು ಉದ್ದೇಶಿಸಿ ಸಂತೋಷ್ ಬಜಾಲ್ ಅವರು ಮಾತನಾಡಿ, ಕ್ರೀಡೆ ಪ್ರೀತಿಯನ್ನು ಬಿತ್ತರಿಸುವ ಮತ್ತು ಪರಸ್ಪರ ಬಾಂಧವ್ಯವನ್ನು ಹೆಚ್ಚಿಸುವ ಒಂದು ಮಾಧ್ಯಮ ಆದರೆ ಇತ್ತೀಚಿನ ದಿನಗಳಲ್ಲಿ ಕ್ರಿಕೆಟ್ ಮೂಲಕವೇ ಹತ್ಯೆಗಳಾಗಿರುವುದು ಒಂದು ದುರಂತ. ಮೇ ದಿನದ ಘೋಷಣೆಯಂತೆ ಎಂಟು ಗಂಟೆಯ ದುಡಿಮೆ ಎಂಟು ಗಂಟೆಯ ವಿಶ್ರಾಂತಿ ಎಂಟು ಗಂಟೆಯ ನಿದ್ದೆ ಇವು ಮನುಷ್ಯನ ಜೀವನದಾರ ಸೂತ್ರವಾಗಿದ್ದು ಇಂದಿನ ಸರಕಾರಗಳು ದುಡಿಮೆಯ ಅವಧಿಯನ್ನು ಮಾಲಕರ ಪರವಾಗಿ ಹೆಚ್ಚಿಸುವ ಕೆಲಸವನ್ನು ಮಾಡುತ್ತಿವೆ ಎಂದರು.
ದುಡಿಮೆಯು 12 ರಿಂದ 16 ಗಂಟೆಯವರೆಗೂ ತಲುಪಿದೆ. ಕನಿಷ್ಠ ಕೂಲಿ ಕೇಳಿದರೆ ಜೈಲು ಸೇರುವ ಪರಿಸ್ಥಿತಿ ಇದೆ. ಇನ್ನು ಕಾರ್ಮಿಕರ ಆರೋಗ್ಯದ ಆಧಾರವಾಗಿದ್ದ ಕಾರ್ಮಿಕ ಆರೋಗ್ಯ ನಿಧಿಯನ್ನು ಕಾರ್ಮಿಕರಿಂದ ಕಸಿದುಕೊಳ್ಳಲಾಗಿದೆ. ಹಾಗಾಗಿ ಯುವಜನರಾಗಿದ್ದರೂ ಈ ದೇಶದ ಕಾರ್ಮಿಕ ವರ್ಗವನ್ನು ಪ್ರತಿನಿಧಿಸುವ ನಾವುಗಳು ಈ ಸರಕಾರದ ಅವ್ಯವಸ್ಥೆಯ ವಿರುದ್ಧ ಧ್ವನಿ ಎತ್ತಬೇಕಾಗಿದೆ ಎಂದರು.
ಈ ಸಂಗಾತಿ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟದ ಉದ್ಘಾಟನಾ ಸಮಾರಂಭದಲ್ಲಿ ಹೋನ್ನಯ ಅಮೀನ್ ಅಧ್ಯಕ್ಷರು ಮೇ ದಿನಾಚರಣಾ ಸಮಿತಿ ವಾಮಂಜೂರು. ಬಾಬು ಸಾಲ್ಯಾನ್ ಕಾರ್ಯದರ್ಶಿ ಮೇ ದಿನಾಚರಣಾ ಸಮಿತಿ ವಾಮಂಜೂರು. ಅಶೋಕ್ ಬಂಗೇರ ಕೋಶಾಧಿಕಾರಿ ಮೇ ದಿನಾಚರಣಾ ಸಮಿತಿ ವಾಮಂಜೂರು, ಕಾರ್ಮಿಕ ಮುಖಂಡರಾದ ಹೊನ್ನಯ ಅಂಚನ್, ಜಯಶೀಲ ಕರ್ಕೇರ, ರೖತ ಮುಖಂಡರಾದ ಬೋಜ ದೇವಸ, ಶೇಕರ ಗಂಪ, ಯುವಜನ ಮುಖಂಡರಾದ ದಿನೇಶ್ ಬೊಂಡಂತಿಲ, ಚಂದ್ರಹಾಸ್ ತಾರಿಗುಡ್ಡೆ,ಪ್ರವೀಣ್ ಕುಮಾರ್, ಸಮುದಾಯ ಸಾಂಸ್ಕೃತಿಕ ಸಂಘಟನೆಯ ರಾಜ್ಯ ಕಾರ್ಯದರ್ಶಿಯಾದ ಮನೋಜ್ ವಾಮಂಜೂರ್ ಮೊದಲಾದವರು ಉಪಸ್ಥಿತರಿದ್ದರು.
ಸಂಗಾತಿ ಪ್ರೀಮಿಯರ್ ಲೀಗ್ ನ ಕ್ರಿಕೆಟ್ ಪಂದ್ಯಾಟದ ಅಂತಿಮ ಹನಾಹಣೆಯಲ್ಲಿ ಯಂಗ್ ಬಾಯ್ ಕ್ರಿಕೆಟರ್ಸ್ ತಂಡ ಪ್ರಥಮ ಸ್ಥಾನವನ್ನು ಪಡೆದರೆ ಬೊಂಡಂತಿಲ ಸ್ರೖಕರ್ಸ್ ತಂಡವು ದ್ವಿತಿಯ ಸ್ಥಾನವನ್ನು ಪಡೆದುಕೊಂಡಿತು.


