ಮ್ಯೂಸಿಕ ಸುಪ್ರಿಯ ಅವರಿಗೆ ಡಾಕ್ಟರೇಟ್ ಪದವಿ

ಮ್ಯೂಸಿಕ ಸುಪ್ರಿಯ ಅವರಿಗೆ ಡಾಕ್ಟರೇಟ್ ಪದವಿ


ಮಂಗಳೂರು: ಮಣಿಪಾಲದ ಮಾಹೆ ವಿಶ್ವವಿದ್ಯಾಲಯದ ಎಂ.ಐ.ಟಿ.ಯ ಸ್ಕೂಲ್ ಆಫ್ ಕಂಪ್ಯೂಟರ್ ಇಂಜಿನಿಯರಿಂಗ್‌ನಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿ ಸೇವೆ ಸಲ್ಲಿಸುತ್ತಿರುವ ಮ್ಯೂಸಿಕ ಸುಪ್ರಿಯ ಅವರು ಮಂಡಿಸಿದ ‘ಎ ಮಷೀನ್ ಟ್ರಾನ್ಸ್ಲೇಷನ್ ಸಿಸ್ಟಮ್ ಫಾರ್ ಕನ್ನಡ ಟು ಇಂಗ್ಲಿಷ್ ಅಂಡ್ ಇಂಗ್ಲಿಷ್ ಟು ಕನ್ನಡ’ ಎಂಬ ಮಹಾಪ್ರಬಂಧಕ್ಕೆ ಮಾಹೆ ವಿಶ್ವವಿದ್ಯಾಲಯವು ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ. 

ಅವರು ಎಂ.ಐ.ಟಿ.ಯ ಸ್ಕೂಲ್ ಆಫ್ ಕಂಪ್ಯೂಟರ್ ಇಂಜಿನಿಯರಿಂಗಿನ ಡಾ. ದಿನೇಶ್ ಆಚಾರ್ಯ ಯು. ಹಾಗೂ ಡಾ. ಆಶಾಲತಾ ನಾಯಕ್ ಅವರ ಮಾರ್ಗದರ್ಶನದಲ್ಲಿ  ಸಂಶೋಧನೆಯನ್ನು ನಡೆಸಿರುತ್ತಾರೆ. 

ಅವರು ಸುಜಯ ಕೆ.ಎಸ್. ಹಾಗೂ ಎಸ್.ಎ. ಕೃಷ್ಣಯ್ಯ ಇವರ ಸುಪುತ್ರಿ ಹಾಗೂ ಅಭಿಜಿತ್ ಎಲ್. ಕೋಟ್ಯಾನ್ ಅವರ ಧರ್ಮಪತ್ನಿ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article