ಪಿಯುಸಿ ಪರೀಕ್ಷೆಯಲ್ಲಿ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ಶ್ರೀಕ್ಷಾ 597 ಅಂಕ: ರಾಜ್ಯಕ್ಕೆ 4ನೇ ಸ್ಥಾನ
Wednesday, April 29, 2026
ಮೂಡುಬಿದಿರೆ: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ನಡೆಸಿದ ಪ್ರಸಕ್ತ ವರ್ಷದ ಪಿಯುಸಿ ಪರೀಕ್ಷೆಯಲ್ಲಿ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ಶ್ರೀಕ್ಷಾ 597 ಅಂಕಗಳನ್ನು ಪಡೆದುಕೊಂಡು ರಾಜ್ಯಕ್ಕೆ 4ನೇ ಸ್ಥಾನಿಯಾಗಿದ್ದಾರೆ.
ಎಕನಾಮಿಕ್ಸ್, ಬ್ಯುಸಿನೆಸ್ ಸ್ಟಡೀಸ್, ಅಕೌಂಟೆನ್ಸಿ, ಸ್ಟ್ಯಾಟಿಸ್ಟಿಕ್ಸ್‌ನಲ್ಲಿ ಪೂರ್ಣ ಅಂಕ, ಇಂಗ್ಲೀಷ್‌ನಲ್ಲಿ 99, ಹಿಂದಿಯಲ್ಲಿ 98 ಅಂಕ ಪಡೆದುಕೊಂಡಿದ್ದಾರೆ.
ಇವರು ಬೋರುಗುಡ್ಡೆ ಹರೀಶ್ ಮಡಿವಾಳ ಮತ್ತು ಕುಶಲ ದಂಪತಿಯ ಪುತ್ರಿ.