‘ಬ್ರಾಹ್ಮಣ ಸಮುದಾಯಕ್ಕೆ ಸರ್ಕಾರದ ಸವಲತ್ತುಗಳು’ ಕಾರ್ಯಕ್ರಮ
ಮುಖ್ಯ ಅತಿಥಿಯಾಗಿ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಮಾತನಾಡಿ, ಬ್ರಾಹ್ಮಣ ಅಭಿವೃದ್ಧಿ ನಿಗಮವು 2018ನೇ ಇಸವಿಯಿಂದ ಪ್ರಾರಂಭವಾಗಿದ್ದು, ಈವರೆಗೂ ನಮ್ಮ ಮಂಗಳೂರಿನಲ್ಲಿ ಈ ತರಹ ಮಾಹಿತಿ ಕಾರ್ಯಕ್ರಮ ಯಾವುದು ಸಹ ನಡೆದಿರಲಿಲ್ಲ ಆದರೆ ವಿಶೇಷವಾಗಿ ಆಸಕ್ತಿಯಿಂದ ನಮ್ಮ ಮಂಗಳೂರು ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಿ ಬ್ರಾಹ್ಮಣ ಜನತೆಗೆ ವಿಶೇಷವಾದಂತಹ ಕಾರ್ಯಕ್ರಮ ಸಂಯೋಜಿಸಿದ ಕೂಟ ಮಹಾಜಗತ್ತು ಸಂಸ್ಥೆಯ ಅಧ್ಯಕ ಶ್ರೀಧರ ಹೊಳ್ಳ ಉತ್ತಮ ಮಾಹಿತಿಯನ್ನು ನೀಡಿದ ಬ್ರಾಹ್ಮಣ ಅಭಿವೃದ್ಧಿ ನಿಗಮದ ನಿರ್ದೇಶಕ ಪಿ.ಎಂ. ಮಾಲತೇಶ್ ಅವರಿಗೆ ಅಭಿನಂದಿಸುತ್ತೇನೆ ಹಾಗೆಯೇ ಅವರ ಸಾಮಾಜಿಕ ಕಳಕಳಿಯಿಂದ ಮಾಡುತ್ತಿರುವ ಎಲ್ಲಾ ಕಾರ್ಯಗಳಿಗೂ ನಾನು ಸಂಪೂರ್ಣ ಬೆಂಬಲ ನೀಡುತ್ತೇನೆ ಎಂದರು.
ಮಾಲತೇಶ್ ಅವರು ಸರ್ಕಾರದಿಂದ ಬ್ರಾಹ್ಮಣ ಜನತೆಗೆ ಇರುವ ಸಂಪೂರ್ಣ ಮಾಹಿತಿಗಳನ್ನು ತಿಳಿಸಿದರು.
ಸಂಘಟಕ ಕೂಟ ಮಹಾಜಗತ್ತಿನ ಅಧ್ಯಕ್ಷ ಶ್ರೀಧರ ಹೊಳ್ಳ ಅವರು ಸಭೆಯ ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಂಡು ಕಾರ್ಯಕ್ರಮ ನಿಯೋಜನೆ ಮಾಡಿ ಬ್ರಾಹ್ಮಣ ಸಮುದಾಯದ ಪ್ರೀತಿ ಪಾತ್ರರಾದರು.
ನಮಿತಾ ಡಿ. ರಾವ್ ಮಾತನಾಡಿ, ಸರ್ಕಾರವು ಬ್ರಾಹ್ಮಣರ ಪರ ಜನಪ್ರಿಯ ಕಾರ್ಯಕ್ರಮಗಳನ್ನು ಜಾರಿಗೊಳಿಸಿದ್ದು ಇದನ್ನು ಎಲ್ಲರೂ ಸಮರ್ಪಕವಾಗಿ ಬಳಸಿಕೊಳ್ಳಬೇಕೆಂದು ಮನವಿ ಮಾಡಿದರು.
ಮಂಗಳೂರು ಮಹಾನಗರ ಪಾಲಿಕೆ ಉಪ ಮೇಯರ್ ನಮಿತಾ ಡಿ ರಾವ್, ಸುಬ್ರಹ್ಮಣ್ಯ ಸಭಾಭವನದ ಅಧ್ಯಕ್ಷ ಕೃಷ್ಣ, ಬೆಳ್ತಂಗಡಿ ತಾಲೂಕು ಬ್ರಾಹ್ಮಣ ಮಹಾಸಭಾ ಮುಖಂಡ ಜಿ.ಕೆ. ಶರ್ಮ, ಕೂಟ ಮಹಾಜಗತ್ತಿನ ಕಾರ್ಯದರ್ಶಿ ಜಿ.ಕೆ. ಮಯ್ಯ ಮತ್ತಿತರರು ಉಪಸ್ಥಿತರಿದ್ದರು.