ಕಾಂಗ್ರೆಸ್‌ನ ಮಹಿಳಾ ವಿರೋಧಿ ಧೋರಣೆಯಿಂದ ನಾರಿಶಕ್ತಿ ವಂದನ ಮಸೂದೆಗೆ ಹಿನ್ನಡೆ

ಕಾಂಗ್ರೆಸ್‌ನ ಮಹಿಳಾ ವಿರೋಧಿ ಧೋರಣೆಯಿಂದ ನಾರಿಶಕ್ತಿ ವಂದನ ಮಸೂದೆಗೆ ಹಿನ್ನಡೆ

ಮಂಗಳೂರು: ಮಹಿಳಾ ವಿರೋಧದ ಧೋರಣೆಯ ಕಾಂಗ್ರೆಸ್‌ನಿಂದ ನಾರಿಶಕ್ತಿ ವಂದನ್ ಮಸೂದೆಗೆ ಸಂಸತ್ ಅಧಿವೇಶನಲ್ಲಿ ಹಿನ್ನಡೆಯಾಗಿದೆ ಎಂದು ಸಂಸದ ಬ್ರಿಜೇಶ್ ಚೌಟ ಆರೋಪಿಸಿದರು.

ಅವರು ಇಂದು ನಗರದ ಬಿಜೆಪಿ ಭವನದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿ, ೨2029ರ ಮೊದಲು ಈ ಮಸೂದೆಯನ್ನು ದೇಶದಲ್ಲಿ ಜಾರಿಗೆ ತರಬೇಕು ಎಂದು ಪ್ರಧಾನಿ ಯವರ ಉದ್ದೇಶವಾಗಿತ್ತು. ಆದರೆ ಈ ಬಗ್ಗೆ ಕಾಂಗ್ರೆಸ್ ಮತ್ತು ಕೆಲವು ವಿಪಕ್ಷಗಳು ದಕ್ಷಿಣದ ರಾಜ್ಯಗಳಿಗೆ ಸೀಟು ಕಡಿತವಾಗುತ್ತದೆ ಎಂದು ಅಪಪ್ರಚಾರ ನಡೆಸಿವೆ. ಆದರೆ ವಾಸ್ತವದಲ್ಲಿ ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆಯ ಮೂಲಕ ದಕ್ಷಿಣ ಭಾರತದ ರಾಜ್ಯಗಳ ಕ್ಷೇತ್ರಗಳ ಸಂಖ್ಯೆ ಹೆಚ್ಚಳವಾಗಲಿದೆ ಎಂದು ತಿಳಿಸಿದರು.

ಕರ್ನಾಟಕದ ಕ್ಷೇತ್ರಗಳ ಸಂಖ್ಯೆ 28ರಿಂದ 42ಕ್ಕೆ ಏರಿಕೆಯಾಗಲಿದೆ. ಆಂಧ್ರಪ್ರದೇಶದ ಸಂಖ್ಯೆ 28ರಿಂದ 42ಕ್ಕೆ ಏರಿಕೆಯಾಗಲಿದೆ. ತಮಿಳುನಾಡಿನಲ್ಲಿ 39ರಿಂದ 59 ಕ್ಕೆ ಏರಿಕೆಯಾಗಲಿದೆ. ಕೇರಳದಲ್ಲಿ 20ರಿಂದ 30ಕ್ಕೆ ಏರಿಕೆಯಾಗಲಿದೆ. 2023ರಲ್ಲಿ ಈ ಮಸೂದೆ ಜಾರಿ ಮಾಡಲು ಕಾಂಗ್ರೆಸ್ ಒಪ್ಪಿಕೊಂಡು ಇದೀಗ ಕಾಂಗ್ರೆಸ್ ಮಹಿಳಾ ವಿರೋಧಿ ಮಾನಸಿಕತೆಯನ್ನು ಪ್ರದರ್ಶಿ ಸುತ್ತಿರುವುದು ವಿಷಾದಕರ ಸಂಗತಿಯಾಗಿದೆ ಎಂದರು.

ಬಿಜೆಪಿ ಪಕ್ಷದ ಆಂತರಿಕ ಘಟಕ ಗಳಲ್ಲಿ ಈಗಾಗಲೇ ಶೇ.33 ಮೀಸಲಾತಿಯನ್ನು ಜಾರಿಮಾಡಿ ಮಹಿಳೆಯರಿಗೆ ಅವಕಾಶ ನೀಡಿದೆ.ದೇಶದಲ್ಲೂ ಮೀಸಲಾತಿ ಮಸೂದೆ ಜಾರಿ ಮಾಡುವಲ್ಲಿ ಹಿನ್ನಡೆಯಾದರೂ ಪ್ರಯತ್ನ ಮುಂದುವರಿಯಲಿದೆ ಎಂದು ಚೌಟ ತಿಳಿಸಿದ್ದಾರೆ.

ಬಿಜೆಪಿ ಮುಖಂಡರಾದ ಜಯಂತ ಕೋಟ್ಯಾನ್, ಶಾಂತಿ ಪ್ರಸಾದ್ ಹೆಗ್ಡೆ, ನಂದನ್ ಮಲ್ಯ, ಸಂಜಯ ಪ್ರಭು, ಡಾ.ಮಂಜುಳಾ ರಾವ್ ಮೊದಲಾದವರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article