ಹುಬ್ಬಳ್ಳಿಯ ಜಿಮ್‌ಗಳಲ್ಲಿ ಸಂಘಟಿತ ಲೈಂಗಿಕ ಶೋಷಣೆ ಮತ್ತು ಲವ್ ಜಿಹಾದ್ ಘಟನೆಗೆ ಕಠಿಣ ಕ್ರಮಕ್ಕೆ ಒತ್ತಾಯ

ಹುಬ್ಬಳ್ಳಿಯ ಜಿಮ್‌ಗಳಲ್ಲಿ ಸಂಘಟಿತ ಲೈಂಗಿಕ ಶೋಷಣೆ ಮತ್ತು ಲವ್ ಜಿಹಾದ್ ಘಟನೆಗೆ ಕಠಿಣ ಕ್ರಮಕ್ಕೆ ಒತ್ತಾಯ


ಮಂಗಳೂರು: ಹುಬ್ಬಳ್ಳಿಯ ಫಿಟ್ನೆಸ್ ಜಿಮ್‌ನಲ್ಲಿ ನಡೆದಿರುವ ಸಂಘಟಿತ ಲೈಂಗಿಕ ಶೋಷಣೆ ಮತ್ತು ಲವ್ ಜಿಹಾದ್ ಪ್ರಕರಣವು ರಾಜ್ಯದಾದ್ಯಂತ ಆತಂಕಕ್ಕೆ ಕಾರಣವಾಗಿದೆ. ಈ ಪ್ರಕರಣದಲ್ಲಿ ಸಮೀರ್ ಮುಲ್ಲಾ ಮತ್ತು ಅವನ ಸಹೋದರಿ ತೈಸೀಮ್ ಮುಲ್ಲಾ ಪ್ರಮುಖ ಕಿಂಗ್‌ಪಿನ್ ಆಗಿದ್ದಾರೆ.

ಮಾಹಿತಿಯ ಪ್ರಕಾರ, ಜಿಮ್ ನಡೆಸುತ್ತಿದ್ದ ಸಮೀರ್ ಮುಲ್ಲಾ ಹಿಂದೂ ಯುವತಿಯರೊಂದಿಗೆ ಸ್ನೇಹ ಬೆಳೆಸಿ, ಅವರಿಗೆ ಪಾನೀಯಗಳಲ್ಲಿ ಮದ್ದು ಬೆರೆಸಿ ಅತ್ಯಾಚಾರ ನಡೆಸಿ, ನಗ್ನ ಫೋಟೋ/ವೀಡಿಯೊಗಳನ್ನು ತೆಗೆದು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾನೆ ಹಾಗೂ ಮತಾಂತರಕ್ಕೆ ಒತ್ತಾಯ ಮಾಡುತ್ತಿದ್ದಾನೆ. ತೈಸೀಮ್ ಮುಲ್ಲಾ ಈ ಕೃತ್ಯಗಳಲ್ಲಿ ಪ್ರಮುಖ ಪಾತ್ರವಹಿಸಿ, ಯುವತಿಯರನ್ನು ಪರಿಚಯಿಸಿ ಹಾಗೂ ಮೋಸದಿಂದ ಪ್ರಭಾವಿಸಿ ಈ ಜಾಲದಲ್ಲಿ ಸಿಲುಕಿಸುತ್ತಿದ್ದಾಳೆ.


ಪೊಲೀಸರ ತನಿಖೆಯಲ್ಲಿ ಸಮೀರ್ ಮುಲ್ಲಾದ ಮೊಬೈಲ್‌ನಲ್ಲಿ ಹಲವು ಯುವತಿಯರ ಅರೆನಗ್ನ ಚಿತ್ರಗಳು ಪತ್ತೆಯಾಗಿರುವುದು ಹಾಗೂ ಅನೇಕ ಪೀಡಿತರು ಮುಂದೆ ಬರುತ್ತಿರುವುದು ಗಂಭೀರ ಸಂಗತಿಯಾಗಿದೆ. ಅದಲ್ಲದೇ ಮತ್ತೋರ್ವ ಮಹಿಳೆಯು ಸಮೀರ್ ಮುಲ್ಲಾ ತನ್ನ ಖಾಸಗಿ ವಿಡಿಯೋ ಇಟ್ಟುಕೊಂಡು ಲಕ್ಷಾಂತರ ರೂಪಾಯಿ ವಸೂಲಿ ಮಾಡಿದ್ದಾನೆ. ಹಿಂದೂ ಯುವತಿಯರನ್ನು ಎಟಿಮ್ ತರಹ ಉಪಯೋಗ ಮಾಡಿ, ಲಕ್ಷರಿ ಜೀವನ ಮಾಡುತ್ತಿದ್ದಾನೆ ಎಂದು ಹೇಳಿಕೆ ನೀಡಿದ್ದಾಳೆ. ಅದಲ್ಲದೇ ಇದೇ ಜಿಮ್‌ನಲ್ಲಿ ಮತ್ತೊಬ್ಬ ಯುವಕನು ಸಹ ಇದೇ ರೀತಿಯ ವಿಧಾನವನ್ನು ಅನುಸರಿಸಿ ಅತ್ಯಾಚಾರ ಮಾಡಿದ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವುದು ಈ ಘಟನೆಗಳ ಗಂಭೀರತೆಯನ್ನು ಹೆಚ್ಚಿಸಿದೆ.

ಇಂತಹ ಪ್ರಕರಣಗಳು ದೇಶದ ವಿವಿಧ ಭಾಗಗಳಲ್ಲಿ ಹಿಂದೆಯೂ ವರದಿಯಾಗಿವೆ. ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ ಜಿಮ್ ಜಾಲವನ್ನು ಪೊಲೀಸರು ಭೇದಿಸಿ ಅನೇಕ ಪಿಟ್‌ನೆಸ್ ಕೇಂದ್ರಗಳನ್ನು ಸೀಲ್ ಮಾಡಿ ಆರೋಪಿಗಳನ್ನು ಬಂಧಿಸಿದ್ದಾರೆ. ಮಧ್ಯ ಪ್ರದೇಶ, ಗುಜರಾತ್, ಮಹಾರಾಷ್ಟ್ರ ಮತ್ತು ಪಶ್ಚಿಮ ಬಂಗಾಳದಲ್ಲಿಯೂ ಇದೇ ರೀತಿಯ ಘಟನೆಗಳು ವರದಿಯಾಗಿವೆ.

ಈ ಹಿನ್ನೆಲೆಯಲ್ಲಿ ಜಿಮ್‌ಗಳು ಫಿಟ್ನೆಸ್ ಕೇಂದ್ರಗಳ ಹೆಸರಿನಲ್ಲಿ ಮತಾಂತರ ಕೇಂದ್ರ ನಡೆಸುತ್ತಿರುವ ಬಗ್ಗೆ ಗಂಭೀರ ಆತಂಕ ವ್ಯಕ್ತವಾಗುತ್ತಿದೆ. ಮಹಿಳೆಯರ ಮೇಲೆ ಅಸಭ್ಯ ವರ್ತನೆ, ಲೈಂಗಿಕ ಕಿರುಕುಳ, ಬ್ಲ್ಯಾಕ್‌ಮೇಲ್, ಹಣ ಹಾಗೂ ಆಭರಣ ದೋಚುವುದು ಮತ್ತು ಮೋಸದಿಂದ ಮತಾಂತರ ಮಾಡುವಂತಹ ಪ್ರಕರಣಗಳು ಹೆಚ್ಚುತ್ತಿದೆ.

ಇಂತಹ ಲವ್ ಜಿಹಾದ್ ಹಾಗೂ ಲೈಂಗಿಕ ಶೋಷಣೆ ಕುರಿತು ಸಮಗ್ರ ತನಿಖೆ ಮಾಡಿ ಕಠಿಣ ಕ್ರಮ ತೆಗೆದುಕೊಳ್ಳಲು ಹಿಂದೂ ಜನಜಾಗೃತಿ ಸಮಿತಿಯ ರಣರಾಗಿಣಿ ಶಾಖೆಯಿಂದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಅವರಿಗೆ ಮನವಿ ನೀಡಲಾಯಿತು. 

ಕಾತ್ಯಾಯಿನಿ ರಾವ್ ಮತ್ತು ಗಣೇಶ್, ಗೀತಾ ಶೆಟ್ಟಿ, ಸುಮಂಗಲಾ, ತೀರ್ಥೇಶ್, ವಿಜಯಶ್ರೀ, ರಣರಾಗಿಣಿಯ ಪವಿತ್ರಾ ಕುಡ್ವ ಮತ್ತು ನ್ಯಾ.ಜ್ಯೋತಿ, ಸುಮನಾ, ಲಲಿತ ಉಪಾಧ್ಯಾಯ ಮತ್ತು ಮಂಗಳ ಜೋಶಿ, ಬ್ರೀಥಿಂಗ್ ಹಿಸ್ಟ್ರಿಯ ಚೇತನ ಉಪಾಧ್ಯಾಯ, ಯೋಗೀಶ್ ರೈ, ರಾಮನಾಥ್, ಸತೀಶ್ ಮತ್ತು ಸೂರ್ಯ, ಸುರೇಂದ್ರ ಜಪ್ಪಿನಮೊಗರು, ವಿಜಯ್ ಕುಮಾರ್, ಲೋಹಿತ್ ಸುವರ್ಣ, ಲೋಕೇಶ್ ಕುತ್ತಾರ್, ಜಯಪ್ರಕಾಶ್, ಗಿರಿಧರ್ ಪರ್ಜಿಲ, ಶ್ರೀಪತಿ ಕದ್ರಿ, ಚಂದ್ರಕಾಂತ್ ವಾಮಂಜೂರು ಮತ್ತಿತರರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article