ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಕಚೇರಿಯಲ್ಲಿ ಸ್ಥಾಪನ ದಿನಾಚರಣೆ

ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಕಚೇರಿಯಲ್ಲಿ ಸ್ಥಾಪನ ದಿನಾಚರಣೆ


ಮಂಗಳೂರು: ಏ.6 ರಂದು ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಕಚೇರಿಯಲ್ಲಿ ಪಕ್ಷದ ಸ್ಥಾಪನ ದಿನಾಚರಣೆ ಕಾರ್ಯಕ್ರಮವನ್ನು ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರು ಪಕ್ಷದ ಧ್ವಜವನ್ನು ಹಾರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಸಭೆಯ ಅಧ್ಯಕ್ಷತೆ ವಹಿಸಿದರು.


ವಿಧಾನಪರಿಷತ್‌ನ ಮಾಜಿ ಸದಸ್ಯ ಕೆ. ಮೋನಪ್ಪ ಭಂಡಾರಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಭಾರತೀಯ ಜನತಾ ಪಾರ್ಟಿಯು 1980 ಎಪ್ರಿಲ್ 6 ರಂದು ಅಟಲ್ ಬಿಹಾರಿ ವಾಜಪೇಯಿ ಅವರ ನೇತೃತ್ವದಲ್ಲಿ ಉದಯವಾಯಿತು. ಪಕ್ಷವನ್ನು ಕೇವಲ ಅಧಿಕಾರದ ಆಸೆಗಾಗಿ ಸ್ಥಾಪನೆ ಮಾಡಿದಲ್ಲ ಆ ಸಂದರ್ಭದಲ್ಲಿ ಬಿಜೆಪಿ ದೇಶಕ್ಕೆ ಅನಿವಾರ್ಯವಾಗಿತ್ತು. 

ಇಂದಿರಾಗಾಂದಿ ನೇತೃತ್ವದ ಕಾಂಗ್ರೆಸ್ ಸರಕಾರದ ಸರ್ವಾಧಿಕಾರದ ದೋರಣೆ ಹಾಗೂ ಹಿಂದೂ ವಿರೋಧಿ ವ್ಯವಸ್ಥೆಯ ಕಾಲಗಟ್ಟದಲ್ಲಿ ಈ ದೇಶದ ಹಿತಕ್ಕಾಗಿ ಪಕ್ಷದ ಸ್ಥಾಪನೆಯಾಯಿತು. ಅಂದಿನ ಕಠಿಣ ಸಂದರ್ಭದಲ್ಲಿ ಪಕ್ಷದ ಸಂಘಟನೆ, ಅನೇಕ ನಾಯಕರ ಬಲಿದಾನ, ಹಾಗೂ ಇಂದಿರಾಗಾಂದಿ ಯವರ ತುರ್ತು ಪರಿಸ್ಥಿತಿ ಆಡಳಿತದಲ್ಲಿ ಪಕ್ಷದ ಪ್ರಮುಖರನ್ನು ಜೈಲಿಗೆ ಕಳುಹಿಸಿರುವುದನ್ನು ನೆನಪಿಸಲಾಯಿತು. 

ವ್ಯಕ್ತಿಗಿಂತ ಪಕ್ಷ ದೊಡ್ಡದು, ಪಕ್ಷಕ್ಕಿಂತ ದೇಶ ದೊಡ್ಡದು ಎಂಬ ತತ್ವ ಸಿದ್ದಾಂತ ಭಾಜಪದ್ದು, ಸಾಮಾನ್ಯ ಕಾರ್ಯಕರ್ತ ಕೂಡ ಈ ದೇಶದ ಪ್ರಧಾನಿಯಾಗಬಹುದು, ಭಾಜಪದ ರಾಷ್ಟ್ರೀಯ ಅಧ್ಯಕ್ಷರಾಗಬಹುದು ಎಂದರೆ ಅದು ಭಾರತೀಯ ಜನತಾ ಪಾರ್ಟಿಯಿಂದ ಮಾತ್ರ ಸಾಧ್ಯ. ದೇಶದೆಲ್ಲಡೆ ಬಿಜೆಪಿ ಆಡಳಿತ, ಕೇಂದ್ರದಲ್ಲಿ ನರೇಂದ್ರ ಮೋದಿಜೀಯವರ ಆಡಳಿತ ಜಗತ್ತಿಗೆ ಮೋದಿಯೇ ಅನಿವಾರ್ಯ ಎಂಬ ಪರಿಸ್ಥಿತಿ ಈಗ ಇದೆ. ಹಳ್ಳಿಯಿಂದ ಡಿಲ್ಲಿಯವರೆಗೆ ಬಿಜೆಪಿ ಅಧಿಕಾರ ಕಾರ್ಯಕರ್ತರಿಗೆ ಪಕ್ಷದ ಜವಾಬ್ದಾರಿ ಇದನ್ನೆಲ್ಲಾ ನೋಡಿದಾಗ ಭಾಜಪದ ಕಾರ್ಯಕರ್ತರಾದ ನಾವೆಲ್ಲರೂ ಪುಣ್ಯವಂತರೆಂದು ಅನಿಸುತ್ತದೆ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯರಾದ ಕಿಶೋರ್ ಕುಮಾರ್ ಪುತ್ತೂರು, ವಿಭಾಗ ಸಹಪ್ರಭಾರಿ ಜಯಂತ್ ಕೋಟ್ಯಾನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ ಉಪಸ್ಥಿತರಿದ್ದರು.

ಜಿಲ್ಲಾ ಸಂಚಾಲಕ ದೇವಪ್ಪ ಪೂಜಾರಿ ಕಾರ್ಯಕ್ರಮ ನಿರೂಪಿಸಿ, ಸಹ ಸಂಚಾಲಕಿ ಪೂರ್ಣಿಮ ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article