ಫಾ.ಮೆಲ್ವಿನ್ ಜೆ ಪಿಂಟೊ ಎಸ್‌ಜೆ ನಿಧನ
ಮಂಗಳೂರಿನ ಸೇಂಟ್ ಅಲೋಶಿಯಸ್‌ನಲ್ಲಿ ತಮ್ಮ ಶಾಲಾ ಮತ್ತು ಕಾಲೇಜು ಶಿಕ್ಷಣವನ್ನು ಪೂರ್ಣಗೊಳಿಸಿದ ಬಳಿಕ ಜೆಸ್ಯೂಟ ಪ್ರಾದಿಯಾಗಿ ಸೇರ್ಪಡೆಗೊಂಡರು. ಅವರು 1996 ಮತ್ತು 1999 ರ ನಡುವೆ ಹಾಸನದ ಸೇಂಟ್ ಜೋಸೆಫ್ ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿದರು. ನಂತರ ಸೇಂಟ ಜೋಸೆಫ್ ಇಂಡಿಯನ್ ಪಿಯು ಕಾಲೇಜನ್ನು ಸ್ಥಾಪಿಸಿದರು.
ಅಲ್ಲಿ ಅವರು 2007 ರವರೆಗೆ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದರು. ನಂತರ ಅವರು 2007 ರಿಂದ 2011 ರವರೆಗೆ ಮಂಗಳೂರಿನ ಸೇಂಟ್ ಅಲೋಶಿಯಸ್ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾಗಿ ಮತ್ತು 2012 ರವರೆಗೆ ಹಾಸನದ ಸೇಂಟ್ ಜೋಸೆಫ್ ಪಿಯು ಕಾಲೇಜಿನ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದರು. ಅವರು ರೋಮ್‌ನಲ್ಲಿ ವ್ಯಾಟಿಕನ್ ಕಮ್ಯುನಿಕೇಷನ್ಸ್ ಮತ್ತು ರೇಡಿಯೊದೊಂದಿಗೆ ಏಷ್ಯಾ ಮತ್ತು ಭಾರತೀಯ ಭಾಷೆಗಳ ವಿಚಾರದಲ್ಲಿ ಕೆಲಸ ಮಾಡಿದ್ದರು.
ಮೃತರ ಪಾರ್ಥಿವ ಶರೀರವನ್ನು ಸಂತ ಅಲೋಶಿಯಸ್ ಕಾಲೇಜಿನ ಚಾಪೆಲ್‌ನಲ್ಲಿ ಏ.13ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 2 ರವರೆಗೆ ಮತ್ತು ಫಾತಿಮಾ ರಿಟ್ರೀಟ್ ಹೌಸ್‌ನ ಡಿವೈನ್ ಮರ್ಸಿ ಚರ್ಚ್ನಲ್ಲಿ ಮಧ್ಯಾಹ್ನ 2.30 ರಿಂದ 3.30 ರವರೆಗೆ ಸಾರ್ವಜನಿಕ ದರ್ಶನಕ್ಕಾಗಿ ಇಡಲಾಗುತ್ತದೆ. ಏ.13ರಂದು ಮಧ್ಯಾಹ್ನ 3.30ಕ್ಕೆ ಸಾಮೂಹಿಕ ಪ್ರಾರ್ಥನೆಯ ನಂತರ ಮಂಗಳೂರಿನ ಜೆಸ್ಯೂಟ್ ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆಸಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.