ಊರಿನ ಹಿರಿಮೆ ಹೆಚ್ಚಿಸಲು "ಬೆದ್ರ ಉತ್ಸವ" ಕಾಯ೯ಕ್ರಮ ಮಾದರಿ: ಸಂಸದ ಬ್ರಿಜೇಶ್
ಅವರು ಮೂಡುಬಿದಿರೆಯ ಸ್ವರಾಜ್ಯ ಮೈದಾನದಲ್ಲಿ ಏಪ್ರಿಲ್ 9 ರಿಂದ 12ರ ವರೆಗೆ ನಡೆಯಲಿರುವ ಮನರಂಜನಾ ಆಟಗಳು, ಆಹಾರ ಮಳಿಗೆಗಳು ಹಾಗೂ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳ ಸಮ್ಮಿಲನದ 'ಬೆದ್ರ ಉತ್ಸವ'ವನ್ನು ಶುಕ್ರವಾರ ರಾತ್ರಿ ಉದ್ಘಾಟಿಸಿ ಮಾತನಾಡಿದರು.
ಸಮಾರಂಭ ಶುಕ್ರವಾರ ರಾತ್ರಿ ನಡೆಯಿತು.
ಎಂ.ಸಿ.ಎಸ್. ಬ್ಯಾಂಕ್ ಅಧ್ಯಕ್ಷ ಬಾಹುಬಲಿ ಪ್ರಸಾದ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಮೂಡುಬಿದಿರೆ ಜೈನ ಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ ಅವರು ಆಶೀರ್ವಚನ ನೀಡಿ
ಬೆದ್ರ ಉತ್ಸವ ಎನ್ನುವುದು ಕೇವಲ ಆಚರಣೆಯಲ್ಲ, ಅದು ಇಲ್ಲಿನ ಸಾಂಸ್ಕೃತಿಕ ಚೌಕಟ್ಟುಗಳ ಪ್ರತೀಕವಾಗಿದೆ. ಆಧುನಿಕ ಪ್ರಜ್ಞೆ ಬೆಳೆದಂತೆ ಮೂಡುಬಿದಿರೆ ಶೈಕ್ಷಣಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಮಾದರಿಯಾಗಿ ಬೆಳೆದಿದೆ. ಈ ಉತ್ಸವವು ಸಾಂಸ್ಕೃತಿಕ, ಧಾರ್ಮಿಕ ಹಾಗೂ ಸಾಮಾಜಿಕವಾಗಿ ಮನಸ್ಸನ್ನು ಅರಳಿಸುವ ಕೆಲಸ ಮಾಡಲಿ. ಜಾತಿ-ಮತ ಭೇದವಿಲ್ಲದೆ ಎಲ್ಲರೂ ಒಗ್ಗೂಡಿ ಈ ಹಬ್ಬವನ್ನು ಆಚರಿಸುತ್ತಿರುವುದು ಸಾಮರಸ್ಯದ ಸಂಕೇತವಾಗಿದೆ ಎಂದು ಹಾರೈಸಿದರು.
ಕಟಪಾಡಿ ದ್ವಾರಕಮಯಿ ಮಠದ ಸಾಯಿ ಈಶ್ವರ ಗುರೂಜಿ ಸಂದೇಶ ನೀಡಿ , ಇಡೀ ವಿಶ್ವವೇ ಇಂದು ಬೆದ್ರ ಉತ್ಸವವನ್ನು ಕುತೂಹಲದಿಂದ ನೋಡುತ್ತಿದೆ. ಸಾಧಕರನ್ನು ಗುರುತಿಸಿ ಗೌರವಿಸುವ ಕಾರ್ಯ ಇಲ್ಲಿ ನಡೆಯುತ್ತಿದೆ. ಸಮಾಜದ ಹಿತಕ್ಕಾಗಿ ಕೆಲಸ ಮಾಡುವಾಗ ಭಗವಂತನ ಕೃಪೆ ಲಭಿಸುತ್ತದೆ. ಇನ್ನೊಬ್ಬರ ನೋವಿಗೆ ಸ್ಪಂದಿಸುವುದು ನಿಜವಾದ ಸಾಧನೆಯಾಗಿದೆ ಎಂದು ಅಭಿಪ್ರಾಯಪಟ್ಟರು.
ಪ್ರೋತ್ಸಾಹಕ ಅಬುಲ್ ಅಲಾ ಪುತ್ತಿಗೆ, ಪುರಸಭೆಯ ಮಾಜಿ ಸದಸ್ಯರಾದ ರಾಜೇಶ್ ನಾಯ್ಕ್, ಕೊರಗಪ್ಪ,ಸುರೇಶ್ ಕೋಟ್ಯಾನ್, ಉದ್ಯಮಿಗಳಾದ ತಿಮ್ಮಯ್ಯ ಶೆಟ್ಟಿ, ಶ್ರೀಪತಿ ಭಟ್, ನಾರಾಯಣ ಪಿ. ಎಂ,ನಂದಕುಮಾರ್ ಕುಡ್ವ, ಬಿಜೆಪಿ ಮುಖಂಡರಾದ ಕೆ. ಪಿ.ಜಗದೀಶ್ ಅಧಿಕಾರಿ, ಕೃಷ್ಣರಾಜ್ ಹೆಗ್ಡೆ, ರಂಜಿತ್ ಪೂಜಾರಿ, ಮೇಘನಾದ್ ಶೆಟ್ಟಿ, ಬೆದ್ರ ಮಾರಿಗುಡಿಯ ಸುಂದರ್ ಭೋವಿ, ವಕೀಲ ಮಯೂರಕೀರ್ತಿ, ತ್ರಿವೇಣಿ ಗಣೇಶ್ ಶೆಟ್ಟಿ, ಪ್ರೆಸ್ ಕ್ಲಬ್ ಅಧ್ಯಕ್ಷ ಬಿ.ಸೀತಾರಾಮ ಆಚಾರ್ಯ, ಆನಂದ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.
ಬೆದ್ರ ಉತ್ಸವ ಸಮಿತಿಯ ಸಂಚಾಲಕ ಹರೀಶ್ ದೇವಾಡಿಗ, ಪ್ರಧಾನ ಕಾರ್ಯದರ್ಶಿ ಗೋಪಾಲ ಶೆಟ್ಟಿಗಾರ್, ಕೋಶಾಧಿಕಾರಿ ನಾಗೇಶ್ ಬಂಗೇರ ಹಾಗೂ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ಸಮಿತಿಯ ಉಪಾಧ್ಯಕ್ಷ ಸುದಶ೯ನ್ ಎಂ. ಸ್ವಾಗತಿಸಿದರು. ಗಣೇಶ್ ಬಿ.ಅಳಿಯೂರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ನಂತರ ಚೇತನ್ ಜೈ ನ್ ಅವರ ಆಂಗಿಕಂ ತಂಡದಿಂದ ನೃತ್ಯ ಪ್ರದಶ೯ನ ಹಾಗೂ ಮೋಹನ್ ಹೊಸ್ಮಾರ್ ತಂಡದಿಂದ "ಸಾಂಸ್ಕೃತಿಕ ವೈಭವ" ನಡೆಯಿತು.
