ಸಿಸಿಲಿಯಾ ಫರೀದಾ ಗೋವಿಯಸ್ ಅವರಿಗೆ ಪಿ.ಎಚ್.ಡಿ
Monday, April 13, 2026
ಮಂಗಳೂರು: ಶ್ರೀನಿವಾಸ್ ವಿಶ್ವವಿದ್ಯಾಲಯವು ಸಿಸಿಲಿಯಾ ಫರೀದಾ ಗೋವಿಯಸ್ ಅವರಿಗೆ ಅರ್ಥಶಾಸ್ತ್ರದಲ್ಲಿ ಪಿ.ಎಚ್.ಡಿ ಪದವಿಯನ್ನು ನೀಡಿದೆ.
ಅವರು ಮಂಗಳೂರು ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕರಾದ ಪ್ರೊ. ಡಾ. ಶ್ರೀಪತಿ ಕಲ್ಲೂರಾಯ ಅವರ ಮಾರ್ಗದರ್ಶನದಲ್ಲಿ ‘ದಕ್ಷಿಣ ಕನ್ನಡದ ವಾಣಿಜ್ಯ ಬ್ಯಾಂಕುಗಳು ಒದಗಿಸುವ ಇ-ಬ್ಯಾಂಕಿಂಗ್ ಉತ್ಪನ್ನಗಳು ಮತ್ತು ಸೇವೆಗಳ ಬಗ್ಗೆ ಗ್ರಾಹಕರ ತೃಪ್ತಿ’ ಎಂಬ ವಿಷಯದ ಕುರಿತು ಮಹಾಪ್ರಬಂಧವನ್ನು ಮಂಡಿಸಿದ್ದರು.
ಸಿಸಿಲಿಯಾ ಫರೀದಾ ಗೋವಿಯಸ್ ಅವರು ಪ್ರಸ್ತುತ ಸ್ಕೂಲ್ ಆಫ್ ಸೋಷಿಯಲ್ ವರ್ಕ್ ರೋಶನಿ ನಿಲಯ (ಸ್ವಾಯತ್ತ) ಕಾಲೇಜಿನಲ್ಲಿ ಅರ್ಥಶಾಸ್ತ್ರದ ಸಹ ಪ್ರಾಧ್ಯಾಪಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಇವರು ದಿವಂಗತ ಫ್ರಾನ್ಸಿಸ್ ಪೆರೇರಾ ಮತ್ತು ಕ್ಯಾಥರೀನ್ ಪೆರೇರಾ ದಂಪತಿಗಳ ಪುತ್ರಿ ಹಾಗೂ ಕಾನ್ಫ್ರೆಡ್ ಗೋವಿಯಸ್ ಅವರ ಪತ್ನಿ.