ಲೇಬರ್ ಕೋಡ್ ವಿರುದ್ಧದ ಹೋರಾಟದ ಗೆಲುವಿನಲ್ಲಿ ಎಡಪ್ರಜಾಸತ್ತಾತ್ಮಕ ರಂಗದ ಗೆಲುವು ಪರಿಣಾಮಕಾರಿಯಾಗಲಿದೆ: ಕೆ.ಎನ್. ಉಮೇಶ್

ಲೇಬರ್ ಕೋಡ್ ವಿರುದ್ಧದ ಹೋರಾಟದ ಗೆಲುವಿನಲ್ಲಿ ಎಡಪ್ರಜಾಸತ್ತಾತ್ಮಕ ರಂಗದ ಗೆಲುವು ಪರಿಣಾಮಕಾರಿಯಾಗಲಿದೆ: ಕೆ.ಎನ್. ಉಮೇಶ್


ಮಂಗಳೂರು: ಕಾಪೊ೯ರೇಟ್ ಪರ ಕಾಮಿ೯ಕ ವಿರೋಧಿ ಲೇಬರ್ ಕೋಡ್ ಗಳ ವಿರುದ್ಧ ರಾಷ್ಟ್ರಾದ್ಯಂತ ಜಂಟಿ ಹೋರಾಟ ನಡೆದಿದೆ. ಮೋದಿ ಸರ್ಕಾರ ಲೇಬರ್ ಕೋಡ್ ಗಳನ್ನು ರೂಪಿಸಿ ಜಾರಿಗೊಳಿಸಿದೆ.ಅದನ್ನು ಜಾರಿಗೊಳಿಸಲು ರಾಜ್ಯಗಳಲ್ಲಿನ ಡಬ್ಬಲ್ ಇಂಜಿನ್ ಬಿಜೆಪಿ ಸಕಾ೯ರಗಳು ತುದಿಗಾಲಲ್ಲಿ ನಿಂತಿವೆ. ರಾಜ್ಯದಲ್ಲಿನ ಕಾಂಗ್ರೆಸ್ ಸಕಾ೯ರ ಕೂಡ ಆದರ ಜಾರಿಗೆ ಮುಂದಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಕೇರಳದ LDF ಸಕಾ೯ರ  ಲೇಬರ್ ಕೋಡ್ಸ್ ಜಾರಿ ಮಾಡದಿರಲು ನಿಣ೯ಯಿಸಿ ಪರಿಹಾರೋಪಾಯ ಸೂಚಿಸಲು ನ್ಯಾಯಮೂರ್ತಿ ವಿ.ಗೋಪಾಲಗೌಡ ನೇತೃತ್ವದ ತಜ್ಞರ ಸಮಿತಿ ರಚಿಸಿದ್ದು. ತಜ್ಞರ ಸಮಿತಿಯ ಶಿಫಾರಸ್ಸಿನಂತೆ ಕೇರಳ ರಾಜ್ಯದ ತಿದ್ದುಪಡಿಗಳನ್ನು ತಂದು ಪಯಾ೯ಯ ಲೇಬರ್ ಕೋಡ್ಸ್ ರೂಪಿಸಿ ಜಾರಿಗೊಳಿಸಲು ನಿಣ೯ಯಿಸಿದೆ. ಈ ಹಿನ್ನೆಯಲ್ಲಿ ಹಾಲಿ ನಡೆಯಲಿರುವ ಚುನಾವಣೆಯಲ್ಲಿ ಕೇರಳದಲ್ಲಿ ಎಲ್ ಡಿ ಎಫ್ ಸಕಾ೯ರದ ಗೆಲುವು ಲೇಬರ್ ಕೋಡ್ಸ್ ವಿರುದ್ಧದ ಕಾಮಿ೯ಕರ ಹೋರಾಟಕ್ಕೆ ಬಲ ಒದಗಿಸಲಿದೆ ಎಂದು ಸಿಐಟಿಯು ರಾಷ್ಟ್ರೀಯ ಕಾಯ೯ದಶಿ೯ ಕೆ.ಎನ್. ಉಮೇಶ್ ಹೇಳಿದರು.


ಅವರು ಮಂಗಳೂರಿನ ಸಂದೇಶ ಸಂಸ್ಥೆಯ ಸಭಾಂಗಣದಲ್ಲಿ ಇಂದಿನಿಂದ ಎರಡು ದಿನಗಳ ಕಾಲ ನಡೆಯುತ್ತಿರುವ ಸಿಐಟಿಯು ರಾಜ್ಯ ಮಟ್ಟದ ಸಂಘಟನಾ ಕಾಯಾ೯ಗಾರವನ್ನು ಉದ್ಘಾಟಿಸುತ್ತಾ, ಈ ಮಾತುಗಳನ್ನು ಹೇಳಿದರು.


ಕಾಮಿ೯ಕ ವಿರೋಧಿ ನೀತಿಗಳ ಹಿಮ್ಮೆಟ್ಟಿಸಲು ಮುಂದೆ ನಡೆಸಬೇಕಾದ ಹೋರಾಟಗಳ ಕುರಿತು ವಿವರಿಸುತ್ತಾ ಸಾಮ್ರಾಜ್ಯಶಾಹಿ ಯುದ್ದದ ವಿರುದ್ದ  ದೃಡ ನಿಲುವು ತೆಗೆದುಕೊಳ್ಳದೆ  ಜನತೆಯ ಮೇಲೆ ಬೆಲೆ ಏರಿಕೆಯ ಹೊರೆ ಹೊರಿಸಿದೆ. ಭಾರತವನ್ನು  ಅಮೇರಿಕಾ ಸಾಮ್ರಾಜ್ಯಶಾಹಿಯ ಕಿರಿಯ ಪಾಲುದಾರನ್ನಾಗಿಸಿದೆ. ಯುದ್ದದ ವಿರುದ್ಧದ ಹೋರಾಟಗಳನ್ನು ದಮನಿಸುವ ಯತ್ನವನ್ನು ರಾಜ್ಯ ಕಾಂಗ್ರೆಸ್ ಸಕಾ೯ರವು ನಡೆಸಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಸಕಾ೯ರಗಳು ಆಳುವ ಕಾಪೋ೯ರೇಟ್ ಬಂಡವಾಳಶಾಹಿಗಳ ಹಿತಾಸಕ್ತಿಯ ರಕ್ಷಣೆಗೆ ಇಂತಹ ಕ್ರಮಗಳಿಗೆ ಮುಂದಾಗಿವೆ ನವಉದಾರವಾದಿ ಬಂಡವಾಳಶಾಹಿಯ ವ್ಯವಸ್ಥಾಗತ ಬಿಕ್ಕಟ್ಟಿನ ಪರಿಣಾಮವಾಗಿ ಅಮೇರಿಕಾವು ಯುದ್ಧವನ್ನು ಜಗತ್ತಿನ ಮೇಲೆ ಹೇರಿದೆ. ಅದರ ಹೊರೆಯನ್ನು ವಿಶ್ವದ ಜನತೆ ಎದುರಿಸುವಂತಾಗಿದೆ. ಇದರ ವಿರುದ್ದ ವಿಶಾಲ ತಳಹದಿಯ ಜಂಟಿ ಹೋರಾಟದ ಅಗತ್ಯವಿದೆ. ಈ ಬಿಕ್ಕಟ್ಟನ್ನು ಸಾಮಾಜಿಕ ಬದಲಾವಣೆಗಾಗಿನ ಉನ್ನತ ಹಂತದ ಪ್ರಜ್ಞೆಯಾಗಿ ಮಾರ್ಪಡಿಸಲು ಸಮರದೀರ ಚಳುವಳಿ ರೂಪಿಸಬೇಕಿದೆ ಎಂದರು.


ಮುಖ್ಯ ಅತಿಥಿಯಾಗಿ ಭಾಗವಹಿಸಿದ CITU ಕರ್ನಾಟಕ ರಾಜ್ಯಾಧ್ಯಕ್ಷ ಮೀನಾಕ್ಷಿ ಸುಂದರಂರವರು ಮಾತನಾಡಿ, ದೇಶವನ್ನಾಳುವ ಸರಕಾರಗಳು ಕೋಟ್ಯಾಂತರ ಜನತೆಯ ಹಿತ ಕಾಪಾಡಬೇಕೇ ಹೊರತು ಕೋಟ್ಯಾಧಿಪತಿಗಳದ್ದಲ್ಲ. ರಾಜ್ಯದ ಕಾಂಗ್ರೆಸ್ ಸರ್ಕಾರವೂ ಕೂಡ ಕನಿಷ್ಠ ಕೂಲಿ ಪರಿಷ್ಕರಣೆಯನ್ನು ಮಾಡುವುದರಲ್ಲಿ ವಿಳಂಬ ನೀತಿಯನ್ನು ಅನುಸರಿಸುತ್ತಿದ್ದು, ಸಂಹಿತೆಗಳ ಜಾರಿಯಲ್ಲಿ ಕೇಂದ್ರ ಸರಕಾರಕ್ಕಿಂತಲೂ ಅತ್ಯಂತ ಅಪಾಯಕಾರಿಯಾಗಿ ವರ್ತಿಸುತ್ತಿದೆ.ಇಂತಹ ಕಾರ್ಮಿಕ ವಿರೋಧಿ ಸರಕಾರಗಳ ವಿರುದ್ದ ಸಮರಶೀಲ ಹೋರಾಟವನ್ನು ರೂಪಿಸಲು ಈ ಕಾರ್ಯಾಗಾರವು ಮಾರ್ಗದರ್ಶನ ನೀಡಲಿದೆ ಎಂದು ಹೇಳಿದರು.


ಪ್ರಾಸ್ತಾವಿಕವಾಗಿ ಮಾತನಾಡಿದ CITU ದ.ಕ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಅವರು ಮಾತನಾಡಿ, ಕಾರ್ಮಿಕ ವರ್ಗದ ಸಂಕಷ್ಟವನ್ನು ವಿವರಿಸಿ,ಅದನ್ನು ಎದುರಿಸಲು ರಾಜ್ಯದೆಲ್ಲೆಡೆ ಬಲಿಷ್ಠವಾದ ಕಾರ್ಮಿಕ ಚಳುವಳಿಯನ್ನು ಕಟ್ಟಲು ಈ ಕಾರ್ಯಾಗಾರವು ಸ್ಪೂರ್ತಿಯಾಗಬೇಕಾಗಿದೆ ಎಂದು ಹೇಳಿದರು.


ಸಭೆಯನ್ನುದ್ದೇಶಿಸಿ CITU ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿಯವರು ಮಾತನಾಡಿದರು. ಸಭೆಯ ಅಧ್ಯಕ್ಷತೆಯನ್ನು ದ.ಕ. ಜಿಲ್ಲೆಯ ಕಾರ್ಮಿಕ ಚಳುವಳಿಯ ಹಿರಿಯ ನೇತಾರರಾದ ಜೆ ಬಾಲಕೃಷ್ಣ ಶೆಟ್ಟಿಯವರು ವಹಿಸಿದ್ದರು. 

ವೇದಿಕೆಯಲ್ಲಿ CITU ಜಿಲ್ಲಾಧ್ಯಕ್ಷರಾದ ಬಿ.ಎಂ. ಭಟ್ ಅವರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ CITU ರಾಜ್ಯ ನಾಯಕರಾದ ಮಹಾಂತೇಶ್,ಪರಮೇಶ್ವರ್, ಸೈಯ್ಯದ್ ಮುಜೀಬ್,ಗೋಪಾಲ ಗೌಡ,ಪ್ರತಾಪ ಸಿಂಹ,ಸುನಂದಾ, ಮಾಲಿನಿ ಮೇಸ್ತಾ, ಸ್ವಾಗತ ಸಮಿತಿಯ ಪ್ರಮುಖರಾದ ಯಶವಂತ ಮರೋಳಿ,ಮುನೀರ್ ಕಾಟಿಪಳ್ಳ,ವಸಂತ ಆಚಾರಿ, ಯಾದವ ಶೆಟ್ಟಿ, ಸುಕುಮಾರ್ ತೊಕ್ಕೋಟು,ಬಿ ಎನ್ ದೇವಾಡಿಗ, ಪುರುಷೋತ್ತಮ ಪೂಜಾರಿ, ಎಂ.ದೇವದಾಸ್,ಯೋಗೀಶ್ ಜಪ್ಪಿನಮೊಗರು,ಡಾ.ಕೃಷ್ಣಪ್ಪ ಕೊಂಚಾಡಿ,ಕೃಷ್ಣ ಇನ್ನಾ,ಶೇಖರ್ ವಾಮಂಜೂರು,ರಮೇಶ್ ಉಳ್ಳಾಲ,ಪ್ರಭಾಕರ ಕಾಪಿಕಾಡ್, ಸುರೇಶ್ ಭಂಡಾರಿ,ಫ್ಲೇವಿಕ್ರಾಸ್ತಾ ಅತ್ತಾವರ,ಪದ್ಮಾವತಿ ಶೆಟ್ಟಿ, ಜಯಂತಿ ಶೆಟ್ಟಿ, ರಮಣಿ,ರಾಧಾ, ವಸಂತಿ,ಮಹಾಬಲ ದೆಪ್ಪಲಿಮಾರ್,ಗಣೇಶ್ ಅಡ್ಯಂತಾಯ ಮುಂತಾದವರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article