ಮಂಜೇಶ್ವರದಲ್ಲಿ ಕಮಲ ಅರಳಲಿದೆ: ಅಣ್ಣಾಮಲೈ
ಕಾಸರಗೋಡು ಜಿಲ್ಲೆಯ ವಿವಿಧೆಡೆ ನಡೆದ ರೋಡ್ ಶೋ ಮತ್ತು ಬಹಿರಂಗ ಸಭೆಗಳಲ್ಲಿ ಭಾಗವಹಿಸಿದ ಅಣ್ಣಾಮಲೈ, ಮಂಜೇಶ್ವರದಲ್ಲಿ ಈ ಬಾರಿ ಕಮಲ ಅರಳುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಗೆಲುವು ನಿಶ್ಚಿತ..
ಕಳೆದ ಬಾರಿ ಕೂದಲೆಳೆ ಅಂತರದಲ್ಲಿ ಜಯ ತಪ್ಪಿದ್ದ ಕೆ. ಸುರೇಂದ್ರನ್ ಅವರು ಈ ಬಾರಿ ಮಂಜೇಶ್ವರದ ಜನರ ಆಶೀರ್ವಾದದೊಂದಿಗೆ ವಿಧಾನಸಭೆ ಪ್ರವೇಶಿಸಲಿದ್ದಾರೆ ಎಂದು ಅಣ್ಣಾಮಲೈ ಭವಿಷ್ಯ ನುಡಿದರು.
ಕೇರಳವನ್ನು ಆಳುತ್ತಿರುವ ಎಡರಂಗ ಮತ್ತು ಪ್ರತಿಪಕ್ಷ ಯುಡಿಎಫ್‌ಎರಡೂ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಈ ಭ್ರಷ್ಟ ಸರ್ಕಾರಗಳಿಂದ ಕೇರಳದ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಅವರು ಟೀಕಿಸಿದರು.
ಪ್ರತಿಷ್ಠೆಯ ಕಣ..
ಮಂಜೇಶ್ವರ ಕ್ಷೇತ್ರವು ಬಿಜೆಪಿಗೆ ಅತ್ಯಂತ ಪ್ರತಿಷ್ಠೆಯ ಕಣವಾಗಿದೆ. ಕೆ. ಸುರೇಂದ್ರನ್ ಅವರು ಈ ಹಿಂದೆ ಕೇವಲ 89 ಮತಗಳ ಅಂತರದಿಂದ ಸೋತಿದ್ದರು. ಈ ಬಾರಿ ಈ ಅಂತರವನ್ನು ಸರಿಪಡಿಸಿ ದೊಡ್ಡ ಮಟ್ಟದ ಜಯ ಸಾಧಿಸಲು ಬಿಜೆಪಿ ಕೇಂದ್ರ ನಾಯಕರನ್ನು ಪ್ರಚಾರಕ್ಕೆ ಇಳಿಸಿದೆ. ಅಣ್ಣಾಮಲೈ ಅವರು ಪ್ರಚಾರದ ವೇಳೆ ಸ್ಥಳೀಯ ಭಾಷೆಗಳಲ್ಲಿ ಮಾತನಾಡಿ ಮತದಾರರ ಗಮನ ಸೆಳೆದರು.
ಪ್ರಧಾನಿ ನರೇಂದ್ರ ಮೋದಿ ಅವರ ಅಭಿವೃದ್ಧಿ ಕಾರ್ಯಗಳು ಮತ್ತು ರಾಷ್ಟ್ರೀಯ ವಿಚಾರಗಳು ಮಂಜೇಶ್ವರದ ಜನರ ಮೇಲೆ ಬೀರಲಿರುವ ಪ್ರಭಾವ ಈ ಬಾರಿ ಚುನಾವಣಾ ಫಲಿತಾಂಶದಲ್ಲಿ ಪ್ರತಿಫಲಿಸಲಿದೆ ಎಂದು ಅಣ್ಣಾಮಲೈ ಈ ಸಂದರ್ಭದಲ್ಲಿ ಹೇಳಿದರು.