ಸುವಣ೯ಕನಾ೯ಟಕ ರಾಜ್ಯ ಸಮಿತಿಯಿಂದ ಅಂಬೇಡ್ಕರ್ ಅವರ 135ನೇ ಜಯಂತಿ ಆಚರಣೆ
ಬಿಜೆಪಿ ಮುಖಂಡ ಕೆ.ಪಿ. ಜಗದೀಶ ಅಧಿಕಾರಿ ಅವರು ದೀಪ ಬೆಳಗಿಸಿ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾಚ೯ನೆಗೈದು, ಮಾತನಾಡಿ ಪ್ರಪಂಚಕ್ಕೆ ಅದ್ಭುತವಾದ ಕೊಡುಗೆ ನೀಡಿದವರು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಅವರ ವಿಚಾರಧಾರೆಗಳು ಎಲ್ಲಾ ಕಾಲಕ್ಕೂ ಪ್ರಸ್ತುತ. ನಾವು ಸಂವಿಧಾನಕ್ಕೆ, ಕಾನೂನಿಗೆ, ದೇಶಕ್ಕೆ, ಪ್ರಜಾಪ್ರಭುತ್ವ ವ್ಯವಸ್ಥೆಗೆ ಗೌರವ ನೀಡುತ್ತಿದ್ದರೆ ಅದಕ್ಕೆ ಮೂಲ ಕಾರಣ ಅವರೇ.
ಸಂಘಟನೆಯ ರಾಜ್ಯಾಧ್ಯಕ್ಷ ವತೂ೯ರು ಮಂಜುನಾಥ್ ಅಧ್ಯಕ್ಷತೆ ವಹಿಸಿ ಈವರೆಗೆ ನಡೆಸಿರುವ ಕಾಯ೯ಕ್ರಮಗಳು ಕೈಗೊಂಡಿರುವ ಸಮಾಜ ಸೇವೆಯ ಬಗ್ಗೆ ವಿವರಿಸಿದರು.
ಈ ಸಾಲಿನಲ್ಲಿ ಎಸ್ಸೆಎಸ್ಸೆಎಲ್ಸಿ ಮತ್ತು ಪಿಯುಸಿಯಲ್ಲಿ ಉತ್ತಮ ಅಂಕಗಳನ್ನು ಗಳಿಸಿರುವ 13 ವಿದ್ಯಾರ್ಥಿಗಳಿಗೆ ಸನ್ಮಾನಿಸಿ, ಪ್ರೋತ್ಸಾಧನವನ್ನು ವಿತರಿಸಲಾಯಿತು.
ಉದ್ಯಮಿಗಳಾದ ಕುಮಾರ್, ಹೈದರ್, ಸಾಹುಲ್ ಹಮೀದ್, ರಾಜ್ಯ ಪ್ರಧಾನ ಕಾಯ೯ದಶಿ೯ ಕೃಷ್ಣಪ್ಪ ಕಾಶಿಪಟ್ಣ, ಬಾಗಲ್ ಕೋಟೆ ಜಿಲ್ಲಾ ಅಧ್ಯಕ್ಷ ಮಂಜುನಾಥ ಮಾದರ, ದ. ಕ. ಜಿಲ್ಲಾ ಉಪಾಧ್ಯಕ್ಷ ಸುನೀಲ್ ಕುಮಾರ್, ಬೆಂಗಳೂರು ನಗರ ಜಿಲ್ಲಾಧ್ಯಕ್ಷ ಮನೋಜ್, ಕಾಕ೯ಳ ತಾಲೂಕು ಘಟಕದ ಅಧ್ಯಕ್ಷ ಶಶಿಧರ್, ಮೂಡುಬಿದಿರೆ ತಾಲೂಕು ಘಟಕದ ಅಧ್ಯಕ್ಷ ಪ್ರವೀಣ್, ಮಹಿಳಾ ಘಟಕದ ತಾಲೂಕು ಅಧ್ಯಕ್ಷೆ ಶಕುಂತಳಾ, ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ತಾಲೂಕು ಉಪಾಧ್ಯಕ್ಷ ರಂಜಿತ್ ಉಪಸ್ಥಿತರಿದ್ದರು.
ಪೂಣಿ೯ಮಾ ಕಾಯ೯ಕ್ರಮ ನಿರೂಪಿಸಿದರು. ಸಭಾ ಕಾಯ೯ಕ್ರಮದ ಮೊದಲು ಮೂಡುಬಿದಿರೆ ಪೇಟೆಯಲ್ಲಿ ಮೆರವಣಿಗೆ ನಡೆಯಿತು. ನಂತರ ವಿವಿಧ ಸಾಸ್ಕೃತಿಕ ಕಾಯ೯ಕ್ರಮಗಳು ನಡೆದವು.
