ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಆಳ್ವಾಸ್ ಪ್ರೌಢಶಾಲೆಯ 139 ವಿದ್ಯಾರ್ಥಿಗಳಿಗೆ ಶೇ.95ಕ್ಕಿಂತ ಅಧಿಕ ಅಂಕ: 75 ವಿದ್ಯಾರ್ಥಿಗಳಿಗೆ 600ಕ್ಕಿಂತ ಅಧಿಕ ಅಂಕ
Thursday, April 23, 2026
ಮೂಡುಬಿದಿರೆ: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಆಳ್ವಾಸ್ ಶಾಲೆಯ 75 ವಿದ್ಯಾರ್ಥಿಗಳು 625ರಲ್ಲಿ 600ಕ್ಕೂ ಹೆಚ್ಚು ಅಂಕ ಪಡೆಯುವ ಮೂಲಕ ಸಾಧನೆ ಮಾಡಿದ್ದಲ್ಲದೆ 139 ವಿದ್ಯಾರ್ಥಿಗಳು ಶೇ.95ಕ್ಕಿಂತ ಅಂಕವನ್ನು ಗಳಿಸಿದ್ದಾರೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಾಧ್ವಿ ಪಿ.ವಿ (622), ಪ್ರಥ್ವಿರಾಜ್ ರೆಡ್ಡಿ (621), ಆದರ್ಶ (620), ಲಕ್ಷ್ಮಿ(619), ಪವನ್ ಕುಮಾರ್ (619), ಶಾಂಭವಿ (618), ಅನ್ವಿತಾ ಬಿ(617), ಶಂಕರ ಗೌಡ(617), ಶ್ರೇಯಾ (616), ಸುಶ್ಮಿತಾ (616), ದಿಲೀಪ್ (615), ಕೇಶವ (615), ಪ್ರಿಯಾಂಕ (615), ಸ್ವಾತಿ (615), ವೀರೇಶ್(615) ಅಂಕಗಳನ್ನು ಪಡೆಯುವುದಿದ್ದಾರೆ.
300 ವಿದ್ಯಾರ್ಥಿಗಳು ಶೇ90ಕ್ಕೂ ಅಧಿಕ, 432 ವಿದ್ಯಾರ್ಥಿಗಳು ಶೇ 85ಕ್ಕೂ ಅಧಿಕ ಅಂಕ ಪಡೆದಿದ್ದಾರೆ. ನಾಲ್ಕು ವಿಷಯಗಳಲ್ಲಿ 5 ವಿದ್ಯಾರ್ಥಿಗಳು, ಮೂರು ವಿಷಯಗಳಲ್ಲಿ 13, ಎರಡು ವಿಷಯಗಳಲ್ಲಿ 37, ಹಾಗೂ 1 ವಿಷಯದಲ್ಲಿ 85 ವಿದ್ಯಾರ್ಥಿಗಳು ಶೇ.100 ಅಂಕಗಳನ್ನು ಗಳಿಸಿದ್ದಾರೆ.
ಆಳ್ವಾಸ್‌ನ ಒಟ್ಟು ಪ್ರೌಢಶಾಲಾ ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕ ಪ್ರಶಾಂತ್ ಬಿ., ಆಳ್ವಾಸ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿ ವಿಜಯಾ ಟಿ. ಮೂರ್ತಿ, ಆಡಳಿತಾಧಿಕಾರಿ ಪ್ರೀತಂ ಕುಂದರ್, ಸಹಾಯಕ ಆಡಳಿತಾಧಿಕಾರಿ ರಾಜೇಶ್ ಕುಮಾರ್ ಶೆಟ್ಟಿ ಸುದ್ದಿಗೋಷ್ಠಿಯಲ್ಲಿದರು.