ಏಪ್ರಿಲ್ 2: ಮೂಡುಬಿದಿರೆಯಲ್ಲಿ ನಮ್ಮ ನಾಡ ಒಕ್ಕೂಟದ ನೂತನ ಕೇಂದ್ರ ಉದ್ಘಾಟನೆ

ಏಪ್ರಿಲ್ 2: ಮೂಡುಬಿದಿರೆಯಲ್ಲಿ ನಮ್ಮ ನಾಡ ಒಕ್ಕೂಟದ ನೂತನ ಕೇಂದ್ರ ಉದ್ಘಾಟನೆ


ಮೂಡುಬಿದಿರೆ: ನಮ್ಮ ನಾಡ ಒಕ್ಕೂಟದ ಮೂಡುಬಿದಿರೆ ತಾಲೂಕು ಘಟಕದ ವತಿಯಿಂದ ಎನ್ಎನ್ಒ ಮೂಡುಬಿದಿರೆ ಕಮ್ಯೂನಿಟಿ ಸೆಂಟರ್ ಇದರ ಉದ್ಘಾಟನಾ ಕಾರ್ಯಕ್ರಮವು ಏಪ್ರಿಲ್ 2ರ ಗುರುವಾರ ಸಂಜೆ 4:30ಕ್ಕೆ ಮೂಡುಬಿದಿರೆಯ ಬದ್ರಿಯಾ ಜುಮ್ಮಾ ಮಸೀದಿ ಬಳಿಯ ಎಚ್.ಎಂ ಕಾಂಪ್ಲೆಕ್ಸ್‌ನಲ್ಲಿ ನಡೆಯಲಿದೆ. 

ಕಾರ್ಯಕ್ರಮವನ್ನು ನಮ್ಮ ನಾಡ ಒಕ್ಕೂಟದ ಅಧ್ಯಕ್ಷ ಡಾ. ರಿಜ್ವಾನ್ ಅಹ್ಮದ್ ಉದ್ಘಾಟಿಸಲಿದ್ದಾರೆ. 

ಮುಖ್ಯ ಅತಿಥಿಯಾಗಿ ಎನ್ಎನ್ಒ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಅಧ್ಯಕ್ಷ ಆರಿಫ್ ಮಸೂದ್ ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಒಕ್ಕೂಟದ ಮೂಡುಬಿದಿರೆ ತಾಲೂಕು ಘಟಕದ ಅಧ್ಯಕ್ಷರು, ಕಾರ್ಯದರ್ಶಿ, ಕೋಶಾಧಿಕಾರಿ ಹಾಗೂ ಸರ್ವ ಸದಸ್ಯರು ಉಪಸ್ಥಿತರಿರಲಿದ್ದಾರೆ. 

ಪ್ರಾಪ್ಟೆಕ್ ಪ್ರೈವೇಟ್ ಲಿಮಿಟೆಡ್‌ನ ಶೇಖ್ ಫಹಾದ್ ಸಹಕಾರ ನೀಡಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article