ಕ್ರಿಯೇಟಿವ್ ಕಾಲೇಜಿಗೆ ಸತತ 5ನೇ ವರ್ಷವೂ ಶೇ.100 ಫಲಿತಾಂಶ: ವಿಜ್ಞಾನ ವಿಭಾಗದಲ್ಲಿ ಪ್ರಾರ್ಥನ ಶೆಟ್ಟಿ, ವಾಣಿಜ್ಯ ವಿಭಾಗದಲ್ಲಿ ಪ್ರೇರಣಾ ರಾಜ್ಯಕ್ಕೆ ಟಾಪರ್
ಈ ಬಾರಿ ವಿಜ್ಞಾನ ವಿಭಾಗದಲ್ಲಿ ಪ್ರಾರ್ಥನ ಶೆಟ್ಟಿ 597 ಅಂಕಗಳನ್ನು ಗಳಿಸಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದರೆ, ವಾಣಿಜ್ಯ ವಿಭಾಗದಲ್ಲಿ ಪ್ರೇರಣಾ ರಾಮಚಂದ್ರ ಹೆಗಡೆ 598 ಅಂಕಗಳೊಂದಿಗೆ ರಾಜ್ಯಕ್ಕೆ ತೃತೀಯ ಸ್ಥಾನ ಗಳಿಸಿದ್ದಾರೆ. ಕಾಲೇಜಿನ ಒಟ್ಟು 56 ವಿದ್ಯಾರ್ಥಿಗಳು ರಾಜ್ಯದ ಟಾಪ್ 10 ರ್‍ಯಾಂಕ್ ಪಟ್ಟಿಯೊಳಗೆ ಸ್ಥಾನ ಪಡೆಯುವ ಮೂಲಕ ಸಂಸ್ಥೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
ವಿಜ್ಞಾನದ ಪಿಸಿಎಂಸಿ ವಿಭಾಗದಲ್ಲಿ ಪ್ರಾರ್ಥನ ಶೆಟ್ಟಿ (597), ಅಧಿತಿ ಹೆಬ್ಬಾರ್ ಸಿ ಯು (596), ಸಾನ್ವಿ ವಿ ಶೆಟ್ಟಿ (596), ಚೇತನಾ ಟಿ ಪಿ (594), ಪ್ರಾರ್ಥನ ಸುರೇಶ್ (594), ಸಾತ್ವಿಕ್ ಪಿ ಎಸ್ (593), ಸಂವಿತ್ ಅಮಿತ್ ಗೋಕರ್ಣ್ (593), ಅಕ್ಷತಾ ಮೋಹನ್ ಹೆಗಡೆ (593), ಪ್ರಜ್ವಲ್ ಭಟ್ (593), ಸಿಂಚನ ಎಸ್ ಭಟ್ (593), ಬಿ ಜಿ ಆದಿತ್ಯ ಗೌಡ (592), ಆದಿತ್ಯ ಗುರುರಾಜ್ ನಾಯಕ್ (592), ಅನ್ವಿತ್ ಮಂಜುನಾಥ್ ಮೊಗೆರ್ (592), ಲಿಖಿತ್ ಕುಮಾರ ಶೇರಿಗಾರ್ (591), ಕವನ (591), ದೀಪಕ್ ಕೆ ಪಿ (591), ಅನಿರುದ್ಧ್ ಉಪಧ್ಯಾಯ (591), ಸಂಸ್ಕೃತಿ ನಾಯಕ್ (591), ಶ್ರೀರಾಮ್ ಕೆ (591), ಡಿ ಎಸ್ ಸ್ಫೂರ್ತಿ (591), ಜಾನ್ವಿ ವಿ ಪಾಟೀಲ್ (591), ನಾಗದೇವ್ ಎಂ ಜಿ (590), ಧನುಷ್ ಆರ್ ಡಿ (590), ಮೇಘಾ ಶೆಟ್ಟಿ (590), ಸುಹಾನ್ ನಾಯಕ್ (590), ಭುವನಾ ಹೆಚ್ ಎನ್ (589), ರಿತನ್ಯಾ ಆರ್ ರಾವ್ (589) ಹಾಗೂ ರಿತಿಕ್ ಎ ಜಿ (589) ಅಂಕಗಳನ್ನು ಪಡೆದು ಸಾಧನೆ ಮಾಡಿದ್ದಾರೆ.
ಪಿಸಿಎಂಬಿ ವಿಭಾಗದಲ್ಲಿ ಶ್ರಾವ್ಯ ಬಾಲಕೃಷ್ಣ (595), ತೇಜಸ್ ಆರ್ ಬಿ (594), ಮೋಕ್ಷ ಬಿ ಎಂ (593), ವರ್ಷಿತಾ ಎನ್ (593), ದಿಶಾ ಎ (592), ಲೇಖನ್ ಕರಿಯಪ್ಪ ಎಂ ಡಿ (592), ಪೂರ್ಣಿಮಾ ಕೆ ಎ (592), ಪ್ರಜ್ಞಾ ಎಸ್ (591), ಅನನ್ಯ ರಾಜಶೇಖರ್ ಬಿ (590), ಧೃವ ವಿ ಬಿ (589), ಬಿಂದು ಪಿ ಗೌಡ (589), ನಾಗಶ್ರೀ ರಾಮಚಂದ್ರ ಗೌಡ (589), ತೇಜಸ್ ಹೆಗ್ಡೆ ಹೆಚ್ ಡಿ (589), ಭೂಮಿಕಾ ಎಸ್ ಪಿ (589), ಅಮೂಲ್ಯ ಹೆಸ್ ಎಸ್ (589), ಅನನ್ಯ (589), ಲವಣ್ ಎ ಪಿ (589) ಹಾಗೂ ಅನುರಾಗ್ ಕೆ ಎಸ್ (589) ಅತ್ಯುತ್ತಮ ಅಂಕ ಗಳಿಸಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ಪ್ರೇರಣ ರಾಮಚಂದ್ರ ಹೆಗಡೆ (598), ಆದ್ಯ ಎಸ್ ಪಡ್ರೆ (596), ಅನಿಕಾ (596), ಕೆ ಪಿ ಸಾಯಿಕೃಷ್ಣ (596), ಸೃಷ್ಟಿ (595), ಪಿ. ಸ್ವರ (594), ದರ್ಶನ್ ಮಲ್ಲಪ್ಪ ಎರಗಲ್ (593), ಸ್ಮೃತಿ ದೊಂಡಿಯಾ ಕೆ (593), ಅಕ್ಷರ್ ಎಸ್ ನಾಯಕ್ (592), ಪವನ್ ಕುಮಾರ್ ಲೋಕೇಶ್ (591), ಭೂಮಿಕ ಸುಬ್ರಾಯ ಹೆಗಡೆ (590), ಚಿರಾಯು ಸಂತೋಷ್ ಶೆಟ್ಟಿ (590) ಹಾಗೂ ಹಿತ ರವಿ ಶೆಟ್ಟಿ (590) ಸಾಧನೆ ಮಾಡಿದ್ದಾರೆ.
ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಯಲ್ಲಿ ಮುಂಚೂಣಿಯಲ್ಲಿರುವ ಕ್ರಿಯೇಟಿವ್ ಕಾಲೇಜು, ತನ್ನ ಕಾರ್ಕಳ, ಉಡುಪಿ ಹಾಗೂ ಹಾಸನ ಶಾಖೆಗಳಲ್ಲೂ ಶೇ. 100 ಫಲಿತಾಂಶ ದಾಖಲಿಸಿದೆ. ಪ್ರಸಕ್ತ ವರ್ಷದಿಂದ ಶಿವಮೊಗ್ಗದಲ್ಲಿಯೂ ಶಿಕ್ಷಣ ಸೇವೆಯನ್ನು ಆರಂಭಿಸಲಾಗಿದ್ದು, ಈ ಮಹೋನ್ನತ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸಂಸ್ಥೆಯ ಪ್ರಾಂಶುಪಾಲರು, ಆಡಳಿತ ಮಂಡಳಿ, ಉಪನ್ಯಾಸಕರು ಹಾಗೂ ಬೋಧಕೇತರ ಅಭಿನಂದಿಸಿದ್ದಾರೆ.