ರಸ್ತೆಯಲ್ಲೇ ಬೆಂಕಿಗಾಹುತಿಯಾದ ಆಟೋರಿಕ್ಷಾ

ರಸ್ತೆಯಲ್ಲೇ ಬೆಂಕಿಗಾಹುತಿಯಾದ ಆಟೋರಿಕ್ಷಾ


ಬಂಟ್ವಾಳ: ಪುಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯ ಮೂರ್ಜೆ ವಿಶಾಲ್ ನಗರ ಎಂಬಲ್ಲಿ ರಿಕ್ಷಾವೊಂದು ಸಂಪೂರ್ಣ ಬೆಂಕಿಗಾಹುತಿಯಾದ ಘಟನೆ ಶುಕ್ರವಾರ ನಡೆದಿದೆ.

ಬಂಟ್ವಾಳ ತಾಲೂಕಿನ ಬಾಂಬಿಲ ನಿವಾಸಿ ರೇವಣ್ಣ ಎಂಬವರ ಆಟೋರಿಕ್ಷಾ ಬೆಂಕಿಹೆ ಸಂಪೂರ್ಣ ಸುಟ್ಟು ಕರಕಲಾಗಿದ್ದು, ಅಪಾರ ನಷ್ಟ ಉಂಟಾಗಿದೆ.


ಆಟೋ ಗ್ಯಾಸ್ ಸಂಪರ್ಕವನ್ನು ಹೊಂದಿರುವ ಈ ಆಟೋ ರಿಕ್ಷಾದಲ್ಲಿ ಗ್ಯಾಸ್ ಖಾಲಿಯಾಗಿದೆ ಎಂಬ ಕಾರಣಕ್ಕೆ ಪೆಟ್ರೋಲ್ ತುಂಬಿಸಲೆಂದು ಪಂಪ್‌ನತ್ತ ತೆರಳುತ್ತಿದ್ದ ವೇಳೆ ಆಕಸ್ಮಿಕ ಎಂಬಂತೆ ಗ್ಯಾಸ್ ಸೋರಿಕೆಯ ವಾಸನೆ ಬಂದಿತೆನ್ನಲಾಗಿದೆ.

ತಕ್ಷಣ ಚಾಲಕ ರೇವಣ್ಣ ಅವರು ರಿಕ್ಷಾವನ್ನು ರಸ್ತೆ ಬದಿ ನಿಲ್ಲಿಸಿ ಇಳಿಯುತ್ತಿದ್ದಂತೆ ಹಠಾತ್ತನೆ ರಿಕ್ಷಾದಲ್ಲಿ ಬೆಂಕಿ ಕಾಣಿಸಿಕೊಂಡು ಕ್ಷಣ ಮಾತ್ರದಲ್ಲಿ ಪೂರ್ತಿ ರಿಕ್ಷಾವನ್ನು ಅವರಿಸಿಕೊಂಡಿದೆ. ಅದೃಷ್ಟವಶಾತ್ ರಿಕ್ಷಾದಲ್ಲಿ ಪ್ರಯಾಣಿಕರು ಯಾರು ಇರಲಿಲ್ಲ, ಹಾಗಾಗಿ ಅಪಾಯ ಸಂಭವುಸಿಲ್ಲ. ಈ ಬಗ್ಗೆ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article