ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷರಾಗಿ ವಾಸುದೇವ ನಾಯ್ಕ್  ಆಯ್ಕೆ

ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷರಾಗಿ ವಾಸುದೇವ ನಾಯ್ಕ್ ಆಯ್ಕೆ


ಮೂಡುಬಿದಿರೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಮೂಡುಬಿದಿರೆ ತಾಲೂಕು ತಾಲೂಕು ಅಧ್ಯಕ್ಷರಾಗಿ ವಾಸುದೇವ ನಾಯ್ಕ್ ಮುಂದಿನ 2 ವರ್ಷಗಳ ಅವಧಿಗೆ ಆಯ್ಕೆಯಾಗಿದ್ದಾರೆ.  ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಮೂಡುಬಿದಿರೆಯ ಸಮಾಜ ಮಂದಿರದಲ್ಲಿ ನಡೆಯಿತು.    


ನಿರ್ಗಮನ ಅಧ್ಯಕ್ಷರಾದ  ಸುಭಾಸ್ಚಂದ್ರ ಚೌಟ, ದ.ಕ 1 ಜಿಲ್ಲಾ ನಿರ್ದೇಶಕರಾದ  ದಿನೇಶ್ ಡಿ, ಎಲ್ಲಾ ವಲಯಗಳ   ಜನಜಾಗೃತಿ ವೇದಿಕೆಯ ಅಧ್ಯಕ್ಷರು, ಪದಾಧಿಕಾರಿಗಳು, ಜನಜಾಗೃತಿ ವೇದಿಕೆ ಪ್ರಾದೇಶಿಕ ವ್ಯಾಪ್ತಿಯ  ಯೋಜನಾಧಿಕಾರಿ  ಗಣೇಶ್, ಮೂಡುಬಿದಿರೆ ಯೋಜನಾ ವ್ಯಾಪ್ತಿಯ ಯೋಜನಾಧಿಕಾರಿ ಧನಂಜಯ ಬಿ. ತಾಲೂಕಿನ ಮೇಲ್ವಿಚಾರಕ ಶ್ರೇಣಿಯ ಕಾರ್ಯಕರ್ತರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article