ಮಾರೂರು: ಗೋಪಾಲಕೃಷ್ಣ ಕೊಡಮಣಿತ್ತಾಯ ದೇವಸ್ಥಾನ-ನೂತನ ಕೊಡಿಮರ ಸ್ಥಾಪನೆ
ಕ್ಷೇತ್ರದ ಆಸ್ರಣ್ಣರಾದ ವೇದಮೂರ್ತಿ ಮಾರೂರು ಖಂಡಿಗ ರಾಮದಾಸ ಆಸ್ರಣ್ಣ ಅವರು ಪೂಜಾ ವಿಧಿವಿಧಾನವನ್ನು ನೆರವೇರಿಸಿ ಧ್ವಜಸ್ತಂಭ ಸ್ಥಾಪನೆಗೆ ಚಾಲನೆ ನೀಡಿದರು.
ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ, ಶ್ರೀ ಕ್ಷೇತ್ರ ಪಡ್ಯಾರಬೆಟ್ಟದ ಧರ್ಮದರ್ಶಿ ಎ. ಜೀವಂಧರ ಕುಮಾರ್, ದೇವಸ್ಥಾನದ ಆಡಳಿತ ಮೊಕ್ತೇಸರ ಹೊಸಂಗಡಿ ಅರಮನೆ ಸಂಪತ್ ಕುಮಾರ್ ಶೆಟ್ಟಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೆ. ಶ್ರೀಪತಿ ಭಟ್, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮತ್ತು ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಮಾರೂರುಗುತ್ತು ಶಂಭು ಎನ್. ಶೆಟ್ಟಿ, ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ವೆಂಕಟರಾಜ ಆಸ್ರಣ್ಣ, ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವ ಸಮಿತಿಯ ಉಪಾಧ್ಯಕ್ಷರುಗಳಾದ ಲಾಡಿ ಮಾಗಣೆಗುತ್ತು ವೃಷಭರಾಜ ಬಲ್ಲಾಳ್, ಮಿತ್ತಬೆಟ್ಟುಗುತ್ತು ಸುಧಾಕರ ಶೆಟ್ಟಿ, ಮಾರ್ನಾಡ್ ಬೊಳಿಯಾರ್ ಗುತ್ತು ರಾಜೇಶ್ ಬಲ್ಲಾಳ್, ಶ್ರೀಪತಿ ಭಟ್ ಬಡಕೋಡಿ, ಹೊಸಂಗಡಿ ಅರಮನೆ ಸುಕುಮಾರ ಶೆಟ್ಟಿ, ಸ್ವಾಗತ ಸಮಿತಿ ಅಧ್ಯಕ್ಷ ರಮೇಶ್ ಎಸ್. ಶೆಟ್ಟಿ ಮಾರ್ನಾಡ್, ಉಭಯ ಸಮಿತಿಗಳ ಪದಾಧಿಕಾರಿಗಳಾದ ರವಿಪ್ರಸಾದ್ ಕೆ. ಶೆಟ್ಟಿ, ಶಂಕರ ಎ. ಕೋಟ್ಯಾನ್, ಸುನಿಲ್ ಕುಮಾರ್ ಶೆಟ್ಟಿ, ಸುಶಾಂತ್ ಕರ್ಕೇರ, ಧೀರಜ್ ವಿ. ರಾವ್, ನವೀನ್ ಕುಮಾರ್, ಪ್ರಜ್ವಲ್ ಬಂಗೇರ, ವಿವಿಧ ಸಮಿತಿಗಳ ಪದಾಧಿಕಾರಿಗಳು, ನೂತನ ಧ್ವಜಸ್ತಂಭದ ಸೇವಾದಾರರಾದ ಮಾರ್ನಾಡು ಗ್ರಾಮಸ್ಥರು ಹಾಗೂ ಮಾರೂರು ಹೊಸಂಗಡಿ ಮಾಗಣೆಯ ಭಜಕ ವೃಂದದವರು ಉಪಸ್ಥಿತರಿದ್ದರು.