ಯಕ್ಷಗಾನ ಪಕ್ಷಗಾನವಾಗದಿರಲಿ: ತಾರನಾಥ ಗಟ್ಟಿ
ಮಹಾವೀರ ಕಾಲೇಜಿನಲ್ಲಿ ಮಿಜಾರು ಅಣ್ಣಪ್ಪ ಸಂಸ್ಮರಣೆ
ಉದ್ಯಮಿ ಕೆ. ಶ್ರೀಪತಿ ಭಟ್ ಕಾಯ೯ಕ್ರಮವನ್ನು ಉದ್ಘಾಟಿಸಿ ಮಾತನಾಡಿ ಹಾಸ್ಯ ಕಲಾವಿದ ಮಿಜಾರು ಅಣ್ಣಪ್ಪ ಅವರು ಯಕ್ಷರಂಗದಲ್ಲಿ ಹಾಸ್ಯ ಮಾಡುವ ಮೂಲಕ ನಮ್ಮ ಹೃದಯದಲ್ಲಿ ಶಾಶ್ವತವಾಗಿ ನೆಲೆ ನಿಂತ ಕಲಾವಿದ. ತುಳುನಾಡಿನ ಭಾಷೆ, ಹಿಂದೂ ಧಮ೯ದ ಶ್ರೇಷ್ಠತೆಯನ್ನು ತೋರಿಸುವ ಕಾಯ೯ಕ್ರಮವು ಇದಾಗಿದೆ ಎಂದರು.
ಯಕ್ಷಗಾನ ಕಲಾವಿದ ಸಂಜಯ ಕುಮಾರ್ ಗೋಣಿಬೀಡು ಮಿಜಾರು ಅಣ್ಣಪ್ಪ ಅವರ ಸಂಸ್ಮರಣೆಗೈದು ಮಿಜಾರು ಎಂಬ ಸಣ್ಣ ಊರಿನ ಹೆಸರನ್ನು ರಾಜ್ಯ ರಾಷ್ಟ್ರಮಟ್ಟದಲ್ಲಿ ಯಕ್ಷಗಾನದ ಮೂಲಕ ಗುರುತಿಸುವಂತೆ ಮಾಡಿದವರು ಮಿಜಾರು ಅಣ್ಣಪ್ಪರು.
ಬಡತನದಲ್ಲಿದ್ದ ಮಿಜಾರು ಅಣ್ಣಪ್ಪ ಅವರು ಸಣ್ಣ ವಯಸ್ಸಿನಲ್ಲಿಯೇ ಬಣ್ಣದ ವೇಷದ ಮೂಲಕ ಯಕ್ಷರಂಗಕ್ಕೆ ಪ್ರವೇಶಿಸಿದರು.ನಂತರ ಮೇಳಕ್ಕೆ ಹಾಸ್ಯ ಕಲಾವಿದನಾಗಿ ಸೇರಿಕೊಂಡರು. ಮಿತಭಾಷಿಗರಾಗಿರುವ ಅಣ್ಣಪ್ಪನವರು ರಂಗದಲ್ಲಿ ಮಾತ್ರ ಹಾಸ್ಯದ ಹೊನಲನ್ನು ಹರಿಸುತ್ತಿದ್ದರು ಆದರೆ ವ್ಯವಹಾರದಲ್ಲಿ ಲೆಕ್ಕಾಚಾರದ ಮನುಷ್ಯನಾಗಿದ್ದರು ಎಂದರು.
ಮುಖ್ಯ ಅತಿಥಿಗಳಾಗಿ ಮಹಾವೀರ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಕೆ. ಅಭಯಚಂದ್ರ ಜೈನ್, ಮಹಾವೀರ ಕಾಲೇಜಿನ ಪ್ರಾಂಶುಪಾಲ ರಾಧಾಕೃಷ್ಣ, ಮಿಜಾರು ಅಣ್ಣಪ್ಪರವರ ಪುತ್ರ ಸದಾಶಿವ ಮಿಜಾರು, ಕಾಲೇಜಿನ ತುಳು ಸಂಘದ ಸಂಚಾಲಕ ಪ್ರವೀಣ್ ಭಂಡಾರಿ, ಅಕಾಡೆಮಿ ಸದಸ್ಯ ಸಂಚಾಲಕ ಬಾಬು ಕೊರಗ ಪಾಂಗಳ ಉಪಸ್ಥಿತರಿದ್ದರು.
ಯಕ್ಷದೇವ ಮಿತ್ರಕಲಾ ಮಂಡಳಿ ಸ್ಥಾಪಕಾಧ್ಯಕ್ಷ ಎಂ. ದೇವಾನಂದ ಭಟ್ ಸ್ವಾಗತಿಸಿದರು. ರವಿಪ್ರಸಾದ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಸಭಾ ಕಾಯ೯ಕ್ರಮದ ನಂತರ "ಕೋಟಿ-ಚೆನ್ನಯ" ನಾಟಕ ಪ್ರದಶ೯ನಗೊಂಡಿತು.

