ಹನುಮ ಜಯಂತಿ: ಮೂಡುಬಿದಿರೆ ಹನುಮಂತ ದೇವಳದಲ್ಲಿ ರಾಮಮಂತ್ರ ಹವನ
Thursday, April 2, 2026
ಮೂಡುಬಿದಿರೆ: ಹನುಮ ಜಯಂತಿ ಪ್ರಯುಕ್ತ ಇಲ್ಲಿನ ಶ್ರೀಹನುಮಂತ ದೇವಸ್ಥಾನದಲ್ಲಿ ಸೀಯಾಳಭಿಷೇಕ ಮತ್ತು ರಾಮ ಮಂತ್ರ ಹವನ ಸಹಿತ ವಿಶೇಷ ಧಾರ್ಮಿಕ ಕಾರ್ಯಕ್ರಮ ಗುರುವಾರ ನಡೆದವು.
ಬೆಳಗ್ಗೆಯಿಂದಲೇ ಸನ್ನಿಧಿಯಲ್ಲಿ ಶ್ರೀ ರಾಮಮಂತ್ರ ಹವನ, ಸೀಯಾಳಾಭಿಷೇಕ, ವಿಶೇಷ ಪೂಜೆ ಹಾಗೂ ಭಜನಾ ಸಂಕೀರ್ತನೆಗಳು ಜರುಗಿದವು. ಈ ಧಾರ್ಮಿಕ ಕಾರ್ಯಕ್ರಮಗಳಲ್ಲಿ ದೇವಳದ ಆಡಳಿತ ಮಂಡಳಿಯ ಸದಸ್ಯರು ಹಾಗೂ ನೂರಾರು ಭಕ್ತರು ಪಾಲ್ಗೊಂಡರು.
