ದಿನೇಶ್ ಕುಮಾರ್ ಆನಡ್ಕ ನಿಧನ

ದಿನೇಶ್ ಕುಮಾರ್ ಆನಡ್ಕ ನಿಧನ


ಮೂಡುಬಿದಿರೆ: ಹದಿನೆಂಟು ಬಸದಿಗಳ ಮೊಕ್ತೇಸರ, ಮೂಡುಬಿದಿರೆ ಜೈನ್ ಮಿಲನ್ ನ ನಿಕಟಪೂವ೯ ಅಧ್ಯಕ್ಷ ದಿನೇಶ್ ಕುಮಾರ್ ಆನಡ್ಕ (59) ಅವರು ಅಲ್ಪಕಾಲದ ಅನಾರೋಗ್ಯದಿಂದ ಸೋಮವಾರ ಮುಂಜಾನೆ ನಿಧನ ಹೊಂದಿದರು.

ಪುತ್ತಿಗೆ ಗುಡ್ಡೆಯಂಗಡಿ ದಿ. ಜೀವಾಂದರ್ ಕುಮಾರ್ ಅವರ ಪುತ್ರರಾಗಿರುವ ದಿನೇಶ್ ಕುಮಾರ್ ಅವರು ಧಾಮಿ೯ಕ ಚಟುವಟಿಕೆಗಳಲ್ಲಿ, ಸಾಮಾಜಿಕ ಸೇವೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಅವರು ಉತ್ತಮ ಶಟ್ಲ್ ಬ್ಯಾಡ್ಮಿಂಟನ್ ಪಟುವಾಗಿದ್ದಲ್ಲದೆ ಹಲವಾರು ಮಂದಿಗೆ ತರಬೇತಿ ನೀಡಿದ್ದರು. ಶ್ರೀ ಕ್ಷೇತ್ರ ಧಮ೯ಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜನಜಾಗೃತಿ ವೇದಿಕೆಯ ಪುತ್ತಿಗೆ ವಲಯದ ಅಧ್ಯಕ್ಷರಾಗಿದ್ದರು. ಸತ್ಯನಾರಾಯಣ ಪೂಜಾ ಸಮಿತಿಯ ಸದಸ್ಯರಾಗಿದ್ದರು. 

ಪತ್ನಿ, ಓವ೯ ಪುತ್ರಿ ಮತ್ತು ಪುತ್ರ ಹಾಗೂ ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article