ದ್ವೈತ ವೇದಾಂತದಲ್ಲಿ ವಿದ್ವಾನ್ ಎಂ. ಪವನ್ ಭಟ್ ಅವರಿಗೆ ಸ್ವರ್ಣ ಪದಕ ಗೌರವ

ದ್ವೈತ ವೇದಾಂತದಲ್ಲಿ ವಿದ್ವಾನ್ ಎಂ. ಪವನ್ ಭಟ್ ಅವರಿಗೆ ಸ್ವರ್ಣ ಪದಕ ಗೌರವ


ಮೂಡುಬಿದಿರೆ: ಎಸ್.ಎಂ.ಎಸ್.ಪಿ. ಸಂಸ್ಕೃತ ಸ್ನಾತಕ-ಸ್ನಾತಕೋತ್ತರ ಅಧ್ಯಯನ ಕೇಂದ್ರದ ವಿದ್ಯಾರ್ಥಿಯಾಗಿದ್ದ ಮೂಡುಬಿದಿರೆ ಶ್ರೀ ವೆಂಕಟರಮಣ ಮತ್ತು ಶ್ರೀ ಹನುಮಂತ ದೇವಸ್ಥಾನದ ಪ್ರಧಾನ ಅರ್ಚಕ ವೇ.ಮೂ. ಎಂ. ಹರೀಶ್ ಭಟ್  ಮತ್ತು ಸಹನಾ ಭಟ್ ದಂಪತಿಯ ಪುತ್ರ ವಿದ್ವಾನ್ ಎಂ.ಪವನ್ ಭಟ್ ಅವರಿಗೆ 2024-25ನೇ ಸಾಲಿನ ಆಚಾರ್ಯ (ಎಂ.ಎ) ದ್ವೈತ ವೇದಾಂತದಲ್ಲಿ ಅತೀ ಹೆಚ್ಚು ಅಂಕಗಳೊಂದಿಗೆ ಉತೀರ್ಣರಾಗಿರುವುದಕ್ಕಾಗಿ 'ಶ್ರೀ ಸತ್ಯ ಪ್ರಮೋದ ತೀರ್ಥ ಸ್ವಾಮೀಜಿ ಸ್ವರ್ಣಪದಕ ' ಮತ್ತು ' ಶ್ರೀ ರಾಘವೇಂದ್ರ ತೀರ್ಥ ಸ್ವಾಮೀಜಿ ಸ್ವರ್ಣಪದಕ ' ಪುರಸ್ಕಾರ ದೊರೆತಿದೆ.

ಬೆಂಗಳೂರಿನಲ್ಲಿ ಮಂಗಳವಾರ ಕರ್ನಾಟಕದ ರಾಜ್ಯಪಾಲ , ವಿವಿಯ ಕುಲಾಧಿಪತಿ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯಯದ ಕುಲಾಧಿಪತಿಗಳೂ ಆದ ಶ್ರೀ ಥಾವರ್ ಚಂದ್ ಗೆಹ್ಲೋತ್  ಅಧ್ಯಕ್ಷತೆಯಲ್ಲಿ ಜರಗಿದ ವಿಶ್ವವಿದ್ಯಾಲಯದ ಹನ್ನೆರಡು ಮತ್ತು ಹದಿಮೂರನೆಯ ದೀಕ್ಷಾಂತ ಘಟಿಕೋತ್ಸವದಲ್ಲಿ ಪವನ್ ಭಟ್ ಅವರು ರಾಜ್ಯಪಾಲರಿಂದ ಈ ಗೌರವ ಸ್ವೀಕರಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article