ಬಡ ಮಹಿಳೆಗೆ ಸೂರು: ಪವರ್ ಫ್ರೆಂಡ್ಸ್ ನಿಂದ ನಾಟಕ ಪ್ರದಶ೯ನ
Tuesday, April 7, 2026
ಮೂಡುಬಿದಿರೆ: ವಿವಿಧ ಸೇವಾ ಚಟುವಟಿಕೆಯ ಸಹಾಯಾಥ೯ ಹಾಗೂ ಪುತ್ತಿಗೆ ಗ್ರಾ. ಪಂ. ವ್ಯಾಪ್ತಿಯ ಬಡ ಕುಟುಂಬಕ್ಕೆ ಗೃಹ ನಿಮಾ೯ಣದ ಅಂಗವಾಗಿ ಪವರ್ ಫ್ರೆಂಡ್ಸ್ ಬೆದ್ರದ ವತಿಯಿಂದ ಸೋಮವಾರ ಸಂಜೆ ಕನ್ನಡ ಭವನದಲ್ಲಿ "ರಾಘು ಮಾಸ್ಟ್ರು" ನಾಟಕ ಪ್ರದಶ೯ನಗೊಂಡಿತು.
ಉದ್ಯಮಿ ಕೆ. ಶ್ರೀಪತಿ ಭಟ್ ಸಭಾ ಕಾಯ೯ಕ್ರಮಕ್ಕೆ ಚಾಲನೆ ನೀಡಿ ಪವರ್ ಫ್ರೆಂಡ್ಸ್ ಸಂಘಟನೆಯು ನಮ್ಮ ದೇಶದ ಸಂಸ್ಕೃತಿಯನ್ನು ಪರಿಚಯಿಸುವ ವಿವಿಧ ಕಾಯ೯ಕ್ರಮಗಳನ್ನು ಹಾಗೂ ಆಧಾರ್ ನೋಂದಾಣಿ, ತಿದ್ದುಪಡಿ ಹಾಗೂ ಆರೋಗ್ಯ ತಪಾಸಣೆಯ ಶಿಬಿರಗಳನ್ನು ಆಯೋಜಿಸುವ ಮೂಲಕ ಜನಪರ ಕೆಲಸಗಳನ್ನು ಮಾಡುತ್ತಾ ಬರುತ್ತಿದೆ. ಇದೀಗ ಬಡ ಮಹಿಳೆಗೆ ಸೂರೊಂದನ್ನು ಕಲ್ಪಿಸಲು ಹೊರಟಿರುವುದು ಶ್ಲಾಘನೀಯ ಎಂದರು.
ಬಿಜೆಪಿಯ ಜಿಲ್ಲಾ ನಿಕಟಪೂವ೯ ಅಧ್ಯಕ್ಷ ಸುದಶ೯ನ್ ಎಂ. ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ ಇದು ಕೇವಲ ನಾಟಕ ಕಾಯ೯ಕ್ರಮವಲ್ಲ ಬದಲಾಗಿ ಓವ೯ ಬಡ ಮಹಿಳೆಯ ಬದುಕನ್ನು ಬದಲಾಯಿಸುವ ಕಾಯ೯ಕ್ರಮ. ಕಳೆದ ನಾಲ್ಕು ವಷ೯ಗಳ ಹಿಂದೆ ಗಣೇಶೋತ್ಸವದ ಸಂದಭ೯ದಲ್ಲಿ ಹುಟ್ಟಿಕೊಂಡ ಪವರ್ ಫ್ರೆಂಡ್ಸ್ ಸಂಘಟನೆಯು ಹಬ್ಬಕ್ಕೆ ಮಾತ್ರ ಸೀಮಿತವಾಗದೆ ಹಲವಾರು ಸಾಮಾಜಿಕ ಸೇವಾ ಚಟುವಟಿಕೆಗಳನ್ನು ಮಾಡುವ ಮೂಲಕ ಗಮನ ಸೆಳೆದಿದೆ. ಮುಂದೆಯೂ ಇಂತಹ ಚಟುವಟಿಕೆಗಳನ್ನು ಮಾಡಲು ಎಲ್ಲರೂ ಕೈ ಜೋಡಿಸಬೇಕಾಗಿದೆ ಎಂದರು.
ವಿವಿಧ ಸಂಘಟನೆಗಳ ಸಹಯೋಗದಲ್ಲಿ ಮೂಡುಬಿದಿರೆಯ ವಿದ್ಯಾಗಿರಿಯಲ್ಲಿ ಮೇ.8,9,10 ರಂದು ನಡೆಯಲಿರುವ "ಹಲಸು ಮೇಳ"ದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು.
ಸಾರಿಗೆ ಉದ್ಯಮಿ ನಾರಾಯಣ ಪಿ. ಎಂ, ವಕೀಲರಾದ ಶರತ್ ಶೆಟ್ಟಿ, ವಂಶಿ ಇವೆಂಟ್ಸ್ ನ ರಮಿತಾ ಕಾಕ೯ಳ, ಶಿಕ್ಷಕ ನವೀನ್, ಉದ್ಯಮಿ ಕುಮಾರ್ ಹಾಗೂ ಪವರ್ ಫ್ರೆಂಡ್ಸ್ ವಿನಯ್ ಕುಮಾರ್ ಈ ಸಂದಭ೯ದಲ್ಲಿದ್ದರು.
ಪವರ್ ಫ್ರೆಂಡ್ಸ್ ನ ಜಯಪ್ರಕಾಶ್ ಭಂಡಾರಿ ಕಾಯ೯ಕ್ರಮ ನಿರೂಪಿಸಿದರು.
