ಪಿಯುಸಿ ಪರೀಕ್ಷೆ: ರಾಜ್ಯದಲ್ಲಿ ಫಿಲೋಮಿನಾ ಕಾಲೇಜಿಗೆ 4 ರ‍್ಯಾಂಕ್

ಪಿಯುಸಿ ಪರೀಕ್ಷೆ: ರಾಜ್ಯದಲ್ಲಿ ಫಿಲೋಮಿನಾ ಕಾಲೇಜಿಗೆ 4 ರ‍್ಯಾಂಕ್


ಪುತ್ತೂರು: 2025-26ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ಪುತ್ತೂರಿನ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿಗೆ ಶೇ.96 ಫಲಿತಾಂಶ ಲಭಿಸಿದೆ ಮಾತ್ರವಲ್ಲ ವಿಜ್ಞಾನ ವಿಭಾಗದಲ್ಲಿ 1 ಮತ್ತು ವಾಣಿಜ್ಯ ವಿಭಾಗದಲ್ಲಿ 3 ರ‍್ಯಾಂಕ್‌ಗಳನ್ನು ತನ್ನದಾಗಿಸಿಕೊಂಡಿದೆ.

ಶೇಕಡ 95ಕ್ಕಿಂತ ಹೆಚ್ಚಿನ ಅಂಕಗಳನ್ನು ಈ ಬಾರಿ ಕಾಲೇಜಿನ 42 ಮಂದಿ ವಿದ್ಯಾರ್ಥಿಗಳು ಪಡೆದುಕೊಂಡಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಅಪೂರ್ವ 595 (ಕಾವು ನಿವಾಸಿ ವಸಂತ ಸಲ್ವಂಕರ್ ಮತ್ತು ಅರುಣ ಪಿ.ಕೆ. ದಂಪತಿಗಳ ಪುತ್ರಿ) ಅಂಕಗಳನ್ನು ಪಡೆದು ರಾಜ್ಯದಲ್ಲಿ 5ನೇ ರ‍್ಯಾಂಕ್ ಮತ್ತು ವಾಣಿಜ್ಯ ವಿಭಾಗದಲ್ಲಿ ಸಪೀದಾ 595 (ಮುಕ್ವೆ ನಿವಾಸಿ ಎಂ ಹಾಜಿ ಮೊಹಮ್ಮದ್ ಕುಂಞ ಮತ್ತು ಜಮೀಲಾ ದಂಪತಿಗಳ ಪುತ್ರಿ)

ಅಂಕಗಳನ್ನು ಪಡೆದು ರಾಜ್ಯದಲ್ಲಿ 6ನೇ ರ‍್ಯಾಂಕ್, ಸೋನಿಕಾ ಕುಟಿನ್ನಾ 592 (ಚಿಕ್ಕ ಮುಡ್ನೂರು ನಿವಾಸಿ ಮೌರೀಸ್ ಕುಟಿನ್ನಾ ಮತ್ತು ಜ್ಯೋತಿ ಕುಟಿನ್ನಾ ದಂಪತಿಗಳ ಪುತ್ರಿ) ಅಂಕಗಳನ್ನು ಪಡೆದು ರಾಜ್ಯದಲ್ಲಿ 9ನೇ ರ‍್ಯಾಂಕ್, ದೀಪ್ತಿ ಕೆ.ಎಸ್ 591 (ಮಾಡಾವು ನಿವಾಸಿ ಚಂದ್ರಶೇಖರ ಕೆ.ಎಸ್. ಮತ್ತು ಪುಷ್ಪಲತಾ ದಂಪತಿಗಳ ಪುತ್ರಿ) ಅಂಕಗಳನ್ನು ಪಡೆದು ರಾಜ್ಯದಲ್ಲಿ 10ನೇ ರ‍್ಯಾಂಕ್, ಬಿ.ವಿ. ಅನು 590, ಆಯಿಷಾ ಮಹಪೂಲ 590 ಮತ್ತು ಪ್ರಣಮ್ 590 ಅಂಕಗಳನ್ನು ಪಡೆದುಕೊಂಡಿದ್ದಾರೆ. ಕಲಾ ವಿಭಾಗದಲ್ಲಿ ಅಶ್ವಿನ್ ಜಾರ್ಜ್ ಅವರು 580 ಅಂಕಗಳನ್ನು ಗಳಿಸಿ ಕಾಲೇಜಿಗೆ ಪ್ರಥಮರೆನಿಸಿಕೊಂಡಿದ್ದಾರೆ.

ಒಟ್ಟು 682 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಸರಾಸರಿ ಶೇಕಡ ಫಲಿತಾಂಶ 96% ಹೊಂದಿದ್ದು, ಇದರಲ್ಲಿ 214 ಮಂದಿ ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ, 362 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುತ್ತಾರೆ. ಕಲಾ ವಿಭಾಗದಲ್ಲಿ ಶೇ.95, ವಾಣಿಜ್ಯ ವಿಭಾಗದಲ್ಲಿ ಶೇ.98 ಮತ್ತು ವಿಜ್ಞಾನ ವಿಭಾಗದಲ್ಲಿ ಶೇ.94 ಫಲಿತಾಂಶ ಬಂದಿರುತ್ತದೆ ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article