ನದಿಗೆ ಕಸ ಬಿಸಾಡಿದವರಿಗೆ ದಂಡ

ನದಿಗೆ ಕಸ ಬಿಸಾಡಿದವರಿಗೆ ದಂಡ


ಸುಬ್ರಹ್ಮಣ್ಯ: ಸುಬ್ರಹ್ಮಣ್ಯದ ಕುಮಾರಧಾರ ನದಿಗೆ ಕಸ ಬಿಸಾಡಿದವರಿಗೆ ಸುಬ್ರಹ್ಮಣ್ಯ ಪಂಚಾಯತ್‌ನಿಂದ ದಂಡ ವಿಧಿಸಿಧ ಘಟನೆ ಏ.8 ರಂದು ನಡೆದಿದೆ.


ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಾಲಯಕ್ಕೆ ಆಗಮಿಸಿದ್ದ ಯಾತ್ರಾರ್ಥಿಗಳ ಟಿ.ಟಿ ವಾಹನವೊಂದರಿಂದ ಕುಮಾರಧಾರ ನದಿಗೆ ಕಸ ಬಿಸಾಡಿದ್ದಾರೆ. ಇದನ್ನು ಸುಬ್ರಹ್ಮಣ್ಯ ಟ್ಯಾಕ್ಸಿ ಯೂನಿಯನ್‌ನ ಸದಸ್ಯರೊಬ್ಬರು ನೋಡಿ ಆಕ್ಷೇಪಿಸಿದ್ದಾರೆ. ಅಲ್ಲದೆ ಈ ಬಗ್ಗೆ ಪಂಚಾಯತ್‌ಗೆ ಮಾಹಿತಿ ನೀಡಿದ್ದು ಇದರ ಆಧಾರದಲ್ಲಿ ಕಸ ಬಿಸಾಡಿದ ವಾಹನದವರಿಗೆ ಗ್ರಾ.ಪಂ.ನ ಕಾರ್ಯದರ್ಶಿ ಮೋನಪ್ಪ ವಿಧಿಸಿರುವುದಾಗಿ ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಶಿವಮೂರ್ತಿ ಬಿಂದಿಗಲ್ಲಿ ಎಂಬವರಿಗೆ 1500 ರೂ. ಪೈನ್ ಹಾಕಿರುವುದಾಗಿ ತಿಳಿದು ಬಂದಿದೆ.

ಏ.7 ರಂದು ಕೂಡ ಇದೇ ರೀತಿ ವಾಹನವೊಂದಕ್ಕೆ ಕಸ ಬಿಸಾಡಿದ ವಿಚಾರವಾಗಿ ಪೈನ್ ಹಾಕಲಾಗಿತ್ತು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article