ಎಲ್‌ಪಿಜಿ ಮತ್ತು ಸಿಎನ್‌ಜಿ ಗ್ಯಾಸ್ ಪೂರೈಕೆ ವ್ಯತ್ಯಯ ಖಂಡಿಸಿ ಸುಳ್ಯದಲ್ಲಿ ಯುವ ಕಾಂಗ್ರೆಸ್ ನೇತೃತ್ವದಲ್ಲಿ ಮೆರವಣಿಗೆ ಮತ್ತು ಪ್ರತಿಭಟನಾ ಸಭೆ
ಜ್ಯೋತಿ ವೃತ್ತದ ಬಳಿಯಿಂದ ಬಸ್ ನಿಲ್ದಾಣದ ತನಕ ಮೆರವಣಿಗೆ ನಡೆಯಿತು.
ಬಳಿಕ ಬಸ್ ನಿಲ್ದಾಣದ ಬಳಿಯಲ್ಲಿ ನಡೆದ ಸಭೆಯಲ್ಲಿ ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು, ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ.ಶಶಿಧರ ಮತ್ತಿತರರು ಮಾತನಾಡಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಸ್.ಮಹಮ್ಮದ್, ರಾಜೀವ್ ಗಾಂಧಿ ಪಂಚಾಯತ್‌ರಾಜ್ ಸಂಘಟನೆಯ ದ.ಕ.ಜಿಲ್ಲಾ ಅಧ್ಯಕ್ಷ ಶುಭಾಶ್ಚಂದ್ರ ಕೊಳ್ನಾಡು, ಸೂಡ ಅಧ್ಯಕ್ಷ ಕೆ.ಎಂ.ಮುಸ್ತಫ, ಸುಳ್ಯ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ, ಪ್ರಮುಖರಾದ ಎಂ.ವೆಂಕಪ್ಪ ಗೌಡ, ಇಕ್ಬಾಲ್ ಎಲಿಮಲೆ, ಪಿ.ಎಸ್.ಗಂಗಾಧರ, ಬೆಟ್ಟ ಜಯರಾಮ್ ಭಟ್, ಕೆ.ಗೋಕುಲ್‌ದಾಸ್, ದಿನೇಶ್ ಅಂಬೆಕಲ್ಲು, ಅಬ್ದುಲ್ ಗಫೂರ್ ಕಲ್ಮಡ್ಕ, ರಂಜಿತ್ ರೈ ಮೇನಾಲ, ಫೈಝಲ್ ಕಡಬ, ಧರ್ಮಪಾಲ ಕೊಯಿಂಗಾಜೆ, ರಾಜು ಪಂಡಿತ್, ಶರೀಫ್ ಕಂಠಿ,ಸಚಿನ್‌ರಾಜ್ ಶೆಟ್ಟಿ, ಮಹೇಶ್ ಬೆಳ್ಳಾಳ್ಕರ್, ಭವಾನಿಶಂಕರ ಕಲ್ಮಡ್ಕ, ವಿಜೇಶ್ ಹಿರಿಯಡ್ಕ, ನಂದರಾಜ ಸಂಕೇಶ್, ಸತ್ಯಕುಮಾರ್ ಆಡಿಂಜ, ಆನಂದ ಬೆಳ್ಳಾರೆ ಮತ್ತಿತರರು ಭಾಗವಹಿಸಿದ್ದರು.
ಸುಳ್ಯ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಚೇತನ್ ಕಜೆಗದ್ದೆ ಸ್ವಾಗತಿಸಿದರು.ನಗರ ಕಾಂಗ್ರೆಸ್ ಅಧ್ಯಕ್ಷ ಶಶಿಧರ ಎಂ.ಜೆ. ಕಾರ್ಯಕ್ರಮ ನಿರೂಪಿಸಿದರು.