ಚಾರ್ಮಾಡಿ ಘಾಟ್‌ನಲ್ಲಿ ಖಾಸಗಿ ಬಸ್ ಪಲ್ಟಿ: ಹಲವರಿಗೆ ಗಂಭೀರ ಗಾಯ
Sunday, April 26, 2026
ಉಜಿರೆ: ಚಾರ್ಮಾಡಿ ಘಾಟ್‌ನ 4ನೇ ತಿರುವಿನಲ್ಲಿ ಏ.26 ರಂದು ಮಧ್ಯಾಹ್ನ ಖಾಸಗಿ ಬಸ್ ಪಲ್ಟಿಯಾಗಿ 20ಕ್ಕಿಂತಲೂ ಅಧಿಕ ಪ್ರಯಾಣಿಕರು ಗಂಭೀರ ಗಾಯಗೊಂಡ ಘಟನೆ ವರದಿಯಾಗಿದೆ.
ಆಂಧ್ರ ಮೂಲದ ಖಾಸಗಿ ಬಸ್ ಧರ್ಮಸ್ಥಳದಲ್ಲಿ ಮದುವೆ ಕಾರ್ಯಕ್ರಮ ಮುಗಿಸಿಕೊಂಡು ಉಜಿರೆಗಾಗಿ ಕೊಟ್ಟಿಗೆಹಾರ ಮೂಲಕ ಸಂಚರಿಸುತ್ತಿದ್ದು, ಘಾಟ್‌ನ 4ನೇ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿಯಾಗಿದೆಯೆನ್ನಲಾಗಿದೆ. 20ಕ್ಕೂ ಅಧಿಕ ಮಂದಿ ಪ್ರಯಾಣಿಕರಿಗೆ ಗಂಭೀರ ಗಾಯವಾಗಿದ್ದು ಹಲವರನ್ನು ಖಾಸಗಿ ಆಸ್ಪತ್ರೆ ಹಾಗೂ ಗಂಭೀರ ಗಾಯಗೊಂಡ ಕೆಲವರನ್ನು ಮಂಗಳೂರಿನ ಆಸ್ಪತ್ರೆಗೆ ಸಾಗಿಸಲಾಗಿದೆಯೆನ್ನಲಾಗಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಾಗಿದೆ.