ಎಸ್‌ಡಿಎಂ ಸ್ನಾತಕೋತ್ತರ ಮನೋವಿಜ್ಞಾನ ಸಂಶೋಧನಾ ವಿಭಾಗಕ್ಕೆ ರಾಷ್ಟ್ರೀಯ ಮಟ್ಟದ ಪ್ರಶಸ್ತಿ

ಎಸ್‌ಡಿಎಂ ಸ್ನಾತಕೋತ್ತರ ಮನೋವಿಜ್ಞಾನ ಸಂಶೋಧನಾ ವಿಭಾಗಕ್ಕೆ ರಾಷ್ಟ್ರೀಯ ಮಟ್ಟದ ಪ್ರಶಸ್ತಿ


ಉಜಿರೆ: ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು(ಸ್ವಾಯತ್ತ)ಸ್ನಾತಕೋತ್ತರ ಅಧ್ಯಯನದ ಮನೋವಿಜ್ಞಾನ ಸಂಶೋಧನಾ  ವಿಭಾಗಕ್ಕೆ ರಾಷ್ಟ್ರೀಯ ಮಟ್ಟದ ಪಶಸ್ತಿ ಲಭಿಸಿದೆ.

ಭಾರತೀಯ ಶಾಲಾ ಮನೋವಿಜ್ಞಾನ ಸಂಘಟನೆ ನೀಡುವ ‘ಇನ್ ಸ್ಪಾ ಎಜುಕೇಷನಲ್ ಎಕ್ಸಲೆನ್ಸ್ ಅವಾರ್ಡ್-2026’ ಪ್ರಶಸ್ತಿಗೆ ಈ ವಿಭಾಗ ಭಾಜನವಾಗಿದೆ.

ಶಾಲಾ ಮನೋವಿಜ್ಞಾನ ಕ್ಷೇತ್ರದಲ್ಲಿ ನೀಡಿರುವ ಗಮನಾರ್ಹ ಸೇವೆಗಳು ಮತ್ತು ಕೊಡುಗೆಯನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಈ ಸಾಧನೆ ಕಾಲೇಜಿನ ಶೈಕ್ಷಣಿಕ ಗುಣಮಟ್ಟ ಹಾಗೂ ಸಮಾಜಮುಖಿ ಸೇವೆಯನ್ನು ಪ್ರತಿಬಿಂಬಿಸುತ್ತದೆ. ಈ ಪ್ರಶಸ್ತಿ 16ನೇ ಇನ್ ಸ್ಪಾ ಅಂತರರಾಷ್ಟ್ರೀಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನವಾಗಲಿದ್ದು, ಆ.5 ರಂದು ಎನ್‌ಕೆಟಿ ನ್ಯಾಷನಲ್ ಕಾಲೇಜ್ ಓಫ್ ಎಜುಕೇಶನ್‌ನಲ್ಲಿ ನಡೆಯಲಿದೆ.

ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಡೀನ್ ಅವರ ನಿರಂತರ ಬೆಂಬಲವನ್ನು ವಿಭಾಗವು ಕೃತಜ್ಞತೆಯಿಂದ ಸ್ಮರಿಸಿದೆ. ಕಾಲೇಜಿನ ಈ ಸಾಧನೆಗೆ  ವಿದ್ಯಾರ್ಥಿಗಳು, ಹಳೆಯ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕ ವಲಯದಿಂದ ಶ್ಲಾಘನೆ ವ್ಯಕ್ತವಾಗಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article