ಕಾರು ಬೈಕ್ ಅಪಘಾತ,ಚಿಕಿತ್ಸೆ ಫಲಿಸದೇ ಪೋಟೋಗ್ರಾಫರ್ ಸಾವು

ಕಾರು ಬೈಕ್ ಅಪಘಾತ,ಚಿಕಿತ್ಸೆ ಫಲಿಸದೇ ಪೋಟೋಗ್ರಾಫರ್ ಸಾವು


ಬೆಳ್ತಂಗಡಿ: ಕಾರು ಮತ್ತು ಬೈಕ್ ನಡುವೆ ನಡೆದ  ರಸ್ತೆ ಅಪಘಾತದಲ್ಲಿ ಗಂಭಿರವಾಗಿ ಗಾಯಗೊಂಡಿದ್ದ ಯುವ ಪೋಟೋಗ್ರಾಫ‌ರ್ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.

ಬೆಳ್ತಂಗಡಿ ತಾಲೂಕಿನ ಕಳೆಂಜ ಅಶ್ವತ್ತಡಿ ಮನೆಯ ನಿವಾಸಿ ನೋಣಯ್ಯ ಗೌಡ ಅವರ ಪುತ್ರ, ಯುವ ಪೋಟೋಗ್ರಾಫ‌ರ್ ಗಣೇಶ್ ಗೌಡ (36) ಮೃತ ವ್ಯಕ್ತಿಯಾಗಿದ್ದಾರೆ.

ಇವರು ಮೇ 24 ರಂದು ಉಜಿರೆಯಿಂದ ಕಕ್ಕಿಂಜೆ ಕಡೆಗೆ ಬೈಕ್ ನಲ್ಲಿ ಹೋಗುತ್ತಿದ್ದ ವೇಳೆ ಸೋಮಂತಡ್ಕ ಬಳಿ ಎದುರಿನಿಂದ‌ ಬಂದ ಕಾರಿಗೆ ಡಿಕ್ಕಿಹೊಡೆದಿದ್ದು ರಸ್ತೆಗೆ ಎಸೆಯಲ್ಪಟ್ಟು ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಅವರನ್ನು ಮಂಗಳೂರಿನ ಆಸ್ಪತ್ರೆಗೆ ಕೊಂಡೊಯ್ದು ಚಿಕಿತ್ಸೆ ನೀಡಿದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತ ಪಟ್ಟಿದ್ದಾರೆ. ಬೆಳ್ತಂಗಡಿ ಸಂಚಾರಿ ಠಾಣೆಯಲ್ಲಿ ಪ್ರಕರಣ‌ ದಾಖಲಿಸಲಾಗಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article