ಅಕ್ರಮ ಸಕ್ರಮ ಸಮಿತಿ ಸಭೆ ನಡೆಸದೆ ಮೂರು ವಷ೯: ಮಿತ್ತಬೈಲು ವಾಸುದೇವ ನಾಯಕ್ ಆರೋಪ

ಅಕ್ರಮ ಸಕ್ರಮ ಸಮಿತಿ ಸಭೆ ನಡೆಸದೆ ಮೂರು ವಷ೯: ಮಿತ್ತಬೈಲು ವಾಸುದೇವ ನಾಯಕ್ ಆರೋಪ


ಮೂಡುಬಿದಿರೆ: ತಾಲೂಕು ಅಕ್ರಮ ಸಕ್ರಮ ಸಮಿತಿಯು ಅಸ್ತಿತ್ವಕ್ಕೆ ಬಂದು ಮೂರು ವಷ೯ ಕಳೆದರೂ ಸಮಿತಿಯ ಅಧ್ಯಕ್ಷರಾಗಿರುವ ಶಾಸಕ ಉಮಾನಾಥ್ ಕೋಟ್ಯಾನ್ ಅವರು ಒಂದೇ ಒಂದು ಸಭೆಯನ್ನು ನಡೆಸದೆ  ಅಕ್ರಮ-ಸಕ್ರಮದ ಅರ್ಜಿದಾರರನ್ನು ಮತ್ತು ರೈತರನ್ನು ನಿರ್ಲಕ್ಷಿಸುತ್ತಿದ್ದಾರೆ ಎಂದು ಅಕ್ರಮ ಸಕ್ರಮ ಸಮಿತಿ ಸದಸ್ಯ ಮಿತ್ತಬೈಲು ವಾಸುದೇವ ನಾಯಕ್ ಆರೋಪಿಸಿದ್ದಾರೆ. 

ಅವರು ಸೋಮವಾರ ಮೂಡುಬಿದಿರೆ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.

ರಾಜ್ಯ ಸರ್ಕಾರವು 2023 ರಲ್ಲಿ ಮೂಡುಬಿದಿರೆ ಅಕ್ರಮ ಸಕ್ರಮ ಸಮಿತಿಯನ್ನು ನೇಮಿಸಿದ್ದು, ಪ್ರಸ್ತುತ ಸರ್ಕಾರದ ನಿಯಮದಂತೆ ಮಾನ್ಯ ಶಾಸಕರು ಇದರ ಅಧ್ಯಕ್ಷರಾಗಿದ್ದಾರೆ. ಸಭೆ ನಡೆಸದ ಬಗ್ಗೆ 7 ತಿಂಗಳ ಹಿಂದೊಮ್ಮೆ ಪತ್ರಿಕಾಗೋಷ್ಠಿ ನಡೆಸಿದ್ದೇನೆ ಆದರೆ ಸಮಿತಿಯು ಈ ಬಗ್ಗೆ ಯಾವುದೇ ಕ್ರಮ ವಹಿಸದೆ ಬಡ ಜನರಿಗೆ  ಮೋಸ ಮಾಡಲಾಗುತ್ತಿದೆ. ಅಲ್ಲದೆ ಭೂ ಕಬಳಿಕೆ ಮಾಡಿರುವ ಶಾಂತಿ ಪ್ರಸಾದ್ ಹೆಗ್ಡೆ ಅವರು ಕಿಸಾನ್ ಸಂಘಟನೆಯನ್ನು ಕಟ್ಟಿಕೊಂಡು ಅಕ್ರಮ-ಸಕ್ರಮ ಅಜಿ೯ದಾರರನ್ನು ಸೇರಿಸಿಕೊಂಡು ಅಲ್ಲಲ್ಲಿ ಮೀಟಿಂಗ್ ಗಳನ್ನು ನಡೆಸಿ ಬೇರೆ ಬೇರೆ ವಿಷಯಗಳ ಬಗ್ಗೆ ಹೋರಾಟ ಮಾಡುವ ಎಂದು ಹೇಳುತ್ತಿದ್ದಾರೆ ಹೊರತು ಶಾಸಕರ ಬಳಿ ಸಭೆ ಸಡೆಸಿ ಹಕ್ಕುಪತ್ರ ನೀಡುವ ಬಗ್ಗೆ ಒತ್ತಾಯ ಮಾಡದೆ ರಾಜಕಾರಣ ಮಾಡಲಾಗುತ್ತಿದೆ ಎಂದು ಆರೋಪಿಸಿದರು.  

ಕೃಷಿ ಭೂಮಿಯಲ್ಲಿ ಅಕ್ರಮವಾಗಿ ಕೃಷಿ ಚಟುವಟಿಕೆ ನಡೆಸುತ್ತಿರುವ ಕೃಷಿಕರಿಗೆ ಆದಷ್ಟು ಬೇಗ ಅಕ್ರಮ ಸಕ್ರಮ ಸಮಿತಿಯ ಸಭೆ ಕರೆದು ಮೂಡುಬಿದಿರೆ ತಾಲೂಕಿನ ಸಂಬಂಧಪಟ್ಟ ಅರ್ಜಿಗಳನ್ನು ವಿಲೇವಾರಿ ಮಾಡಬೇಕೆಂದು ತಹಶೀಲ್ದಾರರು ಮತ್ತು ಜಿಲ್ಲಾಧಿಕಾರಿಗಳಿಗೆ ಹಲವಾರು ಬಾರಿ ಮನವಿ ಮಾಡಲಾಗಿತ್ತು. ಆದರೂ ಶಾಸಕರು ಯಾವುದೇ ಮುತುವರ್ಜಿ ತೋರಿಸಿಲ್ಲ. ಮನವಿ ಮಾಡಿ ಒಂದು ವರ್ಷ ಕಳೆದರೂ ಯಾವುದೇ ಸಭೆ ನಡೆಸದೆ ಮೂಡುಬಿದಿರೆ ತಾಲೂಕಿನ ರೈತರಿಗೆ ಅನ್ಯಾಯವೆಸಗಲಾಗಿದೆ ಎಂದು ಅವರು ದೂರಿದ್ದಾರೆ.

ಶಾಸಕರಿಗೆ ಈ ಹಿಂದಿನ ಅವಧಿಯಲ್ಲಿಯೂ ರೈತರಿಗೆ ಸಾಗುವಳಿ ಚೀಟಿ ನೀಡುವ ಅವಕಾಶವಿದ್ದರೂ  ಅರ್ಜಿಗಳನ್ನು ಬಾಕಿ ಇರಿಸಿದ್ದು ಯಾವುದೇ ಆಸಕ್ತಿ ತೋರಿಸಿಲ್ಲ. ಶಾಸಕರು ಮೊದಲು ಅಕ್ರಮ ಸಕ್ರಮ ಸಮಿತಿಯನ್ನು ನಡೆಸಿ ನ್ಯಾಯುತವಾಗಿ ರೈತರಿಗೆ ನ್ಯಾಯ ಒದಗಿಸಬೇಕು. ಈ ನಿಟ್ಟಿನಲ್ಲಿ ಸರಿಯಾಗಿ ಸ್ಪಂದಿಸದಿದ್ದರೆ ರೈತರನ್ನು ಒಟ್ಟುಸೇರಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ವಾಸುದೇವ ನಾಯಕ್ ಅವರು  ಎಚ್ಚರಿಸಿದ್ದಾರೆ. 

ಅಕ್ರಮ ಸಮಿತಿ ಸದಸ್ಯರಾದ ಮೆರಿಟಾ‌ ಮೆನೇಜಸ್, ಕರುಣಾಕರ ತೋಡಾರು ಸುದ್ದಿಗೋಷ್ಠಿಯಲ್ಲಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article