ಕಾರಿನೊಳಗೆ ಸಿಲುಕಿದ ಮಗು ರಕ್ಷಣೆ
Monday, May 25, 2026
ಬೆಳ್ತಂಗಡಿ: ಬೆಳ್ತಂಗಡಿ ಕುವೆಟ್ಟು ಗ್ರಾಮದ ಮದ್ದಡ್ಕದಲ್ಲಿ ಕಾರಿನ ಡೋರ್ ಲಾಕ್ ಆಗಿ ಮಗು ಕಾರಿನೊಳಗೆ ಸಿಲುಕಿಕೊಂಡ ಘಟನೆ ಮೇ 25ರಂದು ನಡೆದಿದೆ.
ಕಾರಿನ ಚಾಲಕ ಕಾರು ನಿಲ್ಲಿಸಿ ಅಂಗಡಿಗೆ ತೆರಳಿದ್ದ ವೇಳೆ ಕಾರಿನ ಲಾಕ್ ಆಟೋಮೆಟಿಕ್ ಆಗಿ ಲಾಕ್ ಆಗಿ ಮಗು ಕಾರಿನೊಳಗೆ ಸಿಲುಕಿಕೊಂಡಿತ್ತು. ಕಾರಿನ ಡೋರ್ ತೆರೆಯಲು ಸಾರ್ವಜನಿಕರು ವಿವಿಧ ರೀತಿಯಲ್ಲಿ ಪ್ರಯತ್ನಪಟ್ಟರೂ ಸಾಧ್ಯವಾಗಲಿಲ್ಲ. ಕೊನೆಗೆ ಕಾರಿನ ಗ್ಲಾಸ್ ಒಡೆದು ಮಗುವನ್ನು ರಕ್ಷಿಸಲಾಯಿತು.