ಸಾವನ್ನಪ್ಪಿದ ಸ್ಥಿತಿಯಲ್ಲಿ ಮರಿ ಆನೆ ಪತ್ತೆ

ಸಾವನ್ನಪ್ಪಿದ ಸ್ಥಿತಿಯಲ್ಲಿ ಮರಿ ಆನೆ ಪತ್ತೆ


ಸುಳ್ಯ: ಸುಳ್ಯದ ಅರಂತೋಡು ಗ್ರಾಮದ ಆಡ್ತಲೆ ಬಳಿಯ ಬೆದ್ರುಪಾಣೆ ಎಂಬಲ್ಲಿ ಒಂದು ವರ್ಷದ ಮರಿ ಆನೆಯೊಂದು ಸಾವನಪ್ಪಿರುವ ಘಟನೆ ಇಂದು ನಡೆದಿದೆ. 

ಅಡ್ತಲೆಯ ಸ್ಥಳೀಯ ಗೋಪಾಲಕೃಷ್ಣರಿಗೆ ಸೇರಿದ ಅಡಿಕೆ ತೋಟವೊಂದರಲ್ಲಿ ಮರಿ ಆನೆಯ ಮೃತದೇಹ ಪತ್ತೆಯಾಗಿದೆ. ಈ ಹಿನ್ನಲೆಯಲ್ಲಿ ಸ್ಥಳೀಯರು ಅರಣ್ಯ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಅಧಿಕಾರಿಗಳು ಸುಳ್ಯ ಎಸಿಎಫ್ ಪ್ರಶಾಂತ್ ಪೈ ಸೂಚನೆಯಂತೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸುಳ್ಯ ವಲಯ ಅರಣ್ಯಾಧಿಕಾರಿ ಮಂಜುನಾಥ್ ನೇತೃತ್ವದಲ್ಲಿ ತಂಡ ಆನೆಯ ಶವಪರೀಕ್ಷೆಗೆ ವ್ಯವಸ್ಥೆಯನ್ನು ಮಾಡಿದ್ದು, ಗಂಡು ಆನೆಯೊಂದು ಈ ಮರಿ ಆನೆಗೆ ತನ್ನ ದಂತದಿಂದ ತಿವಿದ ಹಿನ್ನಲೆಯಲ್ಲಿ ಮರಿ ಆನೆ ಸಾವನ್ನಪ್ಪಿರುವ ಸಾಧ್ಯತೆಯಿದೆ ಎಂದು ಮೇಲ್ನೋಟಕ್ಕೆ ಕಂಡುಬಂದಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article