ನೆಲ್ಲಿಕಾರು: ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರ ಸಮಾರೋಪ

ನೆಲ್ಲಿಕಾರು: ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರ ಸಮಾರೋಪ


ಮೂಡುಬಿದಿರೆ: ನೆಲ್ಲಿಕಾರು ಗ್ರಾಮ ಪಂಚಾಯತ್, ಗ್ರಾಮ ಪಂಚಾಯತ್ ಅರಿವು ಕೇಂದ್ರ ಮತ್ತು ಪಂಚಾಯತ್ ಗ್ರಂಥಾಲಯ ಇವುಗಳ ಜಂಟಿ ಆಶ್ರಯದಲ್ಲಿ  5 ದಿನಗಳ ಕಾಲ ನಡೆದ ಗ್ರಾಮೀಣ ಮಕ್ಕಳ  ಬೇಸಿಗೆ ಶಿಬಿರವು ಸೋಮವಾರ ಸಂಪನ್ನಗೊಂಡಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿದ ಪಂಚಾಯತ್ ಅಭಿವೃದ್ಧಿ ಅಧಿಕಾರಿ  ರಾಜು ಅವರು ಮಾತನಾಡಿ ವಿದ್ಯಾಥಿ೯ಗಳು ತಾವು ತಿನ್ನುವ ಚಾಕಲೇಟ್ ಹಾಗೂ ಪ್ಯಾಕೆಟ್ ತಿಂಡಿಗಳ ಪ್ಲಾಸ್ಟಿಕ್ ಗಳನ್ನು ರಸ್ತೆಯಲ್ಲಿ ಬೀಸಾಡದೆ ಕಸದ ತೊಟ್ಟಿಗಳಿಗೆ ಹಾಕುಲವ ಮೂಲಕ ಸ್ವಚ್ಛತೆಯ ಬಗ್ಗೆ ಗಮನ ಹರಿಸಬೇಕು. ಶಿಬಿರದಲ್ಲಿ ಕಲಿತ ಶಿಸ್ತನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.

ಪಂಚಾಯತ್ ನ  ಮಾಜಿ ಸದಸ್ಯ ಚಾರ್ಲ್ಸ್ ಸಾಂತ್ ಮಯೋರ್, ಮೂಡುಬಿದಿರೆ ಪ್ರೆಸ್ ಕ್ಲಬ್ ನ ಕಾಯ೯ದಶಿ೯ ಪ್ರೇಮಶ್ರೀ ಕಲ್ಲಬೆಟ್ಟು, ಬೋರುಗುಡ್ಡೆ ಶಾಲೆಯ ಶಿಕ್ಷಕಿ ಸೌಮ್ಯ , ಗೌರವ ಶಿಕ್ಷಕಿ ಹರಿಣಾಕ್ಷಿ, ರಾಜ್ಯ ಸಂಪನ್ಮೂಲ ವ್ಯಕ್ತಿ ದೇವಕಿ, ಗೀತಾ, ಸುನೀತಾ, ಗ್ರಂಥಾಲಯ ಸಲಹಾ ಸಮಿತಿ ಯಾ ಸದಸ್ಯೆ ಲತಾ, ಸುಗ್ರಾಮ್ ವೇದಿಕೆಯ ಸದಸ್ಯೆ ಕಮಲಾ,  ಗ್ರಂಥಾಲಯ  ಮೇಲ್ವಿಚಾರಿಕಿ ಪ್ರಮೀಳಾ  ಉಪಸ್ಥಿತರಿದ್ದರು.

ಶಿಬಿರಾಥಿ೯ ಶ್ರೇಯ ಸ್ವಾಗತಿಸಿದರು. ಪಂಚಾಯತ್ ಸಿಬಂದಿ ಪ್ರಶಾಂತ್ ಜೈನ್ ಕಾಯ೯ಕ್ರಮ ನಿರೂಪಿಸಿ, ಬಿಂದು  ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article