ಮೇ.27 ರಂದು ಮಂಗಳೂರು ವಿವಿಯಲ್ಲಿ ‘ಆನು ಒಲಿದಂತೆ ಹಾಡುವೆ’ ಪ್ರೊ. ಬಿ.ಎ. ವಿವೇಕ ರೈ ಸಮಗ್ರ ಸಾಹಿತ್ಯ ಅವಲೋಕನ ಹಾಗೂ ಸಂವಾದ

ಮೇ.27 ರಂದು ಮಂಗಳೂರು ವಿವಿಯಲ್ಲಿ ‘ಆನು ಒಲಿದಂತೆ ಹಾಡುವೆ’ ಪ್ರೊ. ಬಿ.ಎ. ವಿವೇಕ ರೈ ಸಮಗ್ರ ಸಾಹಿತ್ಯ ಅವಲೋಕನ ಹಾಗೂ ಸಂವಾದ

ಕೊಣಾಜೆ: ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಕನ್ನಡ ಸಾಹಿತ್ಯ ಅಧ್ಯಯನ ವಿಭಾಗ, ಮಂಗಳೂರು ವಿಶ್ವವಿದ್ಯಾನಿಲಯದ ಎಸ್‌ವಿಪಿ ಕನ್ನಡ ಅಧ್ಯಯನ ಸಂಸ್ಥೆ, ಬೆಂಗಳೂರಿನ ಅಭಿನವ ಹಾಗೂ ಎಸ್‌ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳ ವೇದಿಕೆ ‘ಗಿಳಿವಿಂಡು’ ಇವುಗಳ ಸಂಯುಕ್ತ ಆಶ್ರಯದಲ್ಲಿ ‘ಆನು ಒಲಿದಂತೆ ಹಾಡುವೆ’ ಸರಣಿಯ ಐದನೇ ಕಾರ್ಯಕ್ರಮವು ಮೇ.27 ಎಂದು ಬೆಳಗ್ಗೆ 10 ಗಂಟೆಯಿಂದ ಮಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ಪ್ರೊ. ಬಿ.ಎ. ವಿವೇಕ ರೈ ವೇದಿಕೆಯಲ್ಲಿ ನಡೆಯಲಿದೆ.

ಈ ಕಾರ್ಯಕ್ರಮದಲ್ಲಿ ಹಿರಿಯ ವಿದ್ವಾಂಸ ಪ್ರೊ. ಬಿ.ಎ. ವಿವೇಕ ರೈ ಅವರ ಸಮಗ್ರ ಸಾಹಿತ್ಯ ಅವಲೋಕನ ಹಾಗೂ ಸಂವಾದ ಕಾರ್ಯಕ್ರಮ ನಡೆಯಲಿದೆ.

ಬೆಳಗ್ಗೆ 10 ಗಂಟೆಗೆ ಹಂಪಿ ಕನ್ನಡ ವಿವಿಯ ಕುಲಪತಿ ಪ್ರೊ. ಡಿ.ವಿ. ಪರಮಶಿವಮೂರ್ತಿ, ಮಂಗಳೂರು ವಿ.ವಿ. ಕುಲಪತಿ ಪ್ರೊ. ಪಿ.ಎಲ್. ಧರ್ಮ, ಕರ್ನಾಟಕ ಸರಕಾರದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಪುರುಷೋತ್ತಮ ಬಿಳಿಮಲೆ, ಎಸ್‌ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷ ನಾಗಪ್ಪಗೌಡ, ಹಂಪಿ ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದ ಅಧ್ಯಕ್ಷ ಪ್ರೊ. ವೆಂಕಟಗಿರಿ ದಳವಾಯಿ, ಬೆಂಗಳೂರಿನ ಅಭಿನವದ ರವಿಕುಮಾರ್ ಹಾಗೂ ಗಿಳಿವಿಂಡು ವೇದಿಕೆ ಅಧ್ಯಕ್ಷ ಪ್ರೊ. ಬಿ. ಶಿವರಾಮ ಶೆಟ್ಟಿ ಮತ್ತಿತರರು ಭಾಗವಹಿಸಲಿದ್ದಾರೆ.

ಬಳಿಕ ನಡೆಯುವ ‘ಪ್ರೊ. ಬಿ.ಎ. ವಿವೇಕ ರೈ ಅವರ ಸಮಗ್ರ ಸಾಹಿತ್ಯ ಅವಲೋಕನ’ ಕಾರ್ಯಕ್ರಮದಲ್ಲಿ ಹಂಪಿಯ ಪ್ರೊ. ವಿಜಯ ಪೂಣಚ್ಚ, ಕುಂದಾಪುರದ ಡಾ. ರೇಖಾ ಬನ್ನಾಡಿ ಹಾಗೂ ಮೈಸೂರಿನ ಡಾ. ಆರ್. ಸತೀಶ್ ಅವರು ವಿಚಾರ ಮಂಡನೆ ನಡೆಸಲಿದ್ದಾರೆ.

ಅಪರಾಹ್ನ ನಡೆಯುವ ‘ಪ್ರೊ. ಬಿ.ಎ. ವಿವೇಕ ರೈ ಅವರೊಂದಿಗೆ ಸಂವಾದ’ ಕಾರ್ಯಕ್ರಮದಲ್ಲಿ ಪ್ರೊ. ಕೆ. ಚಿನ್ನಪ್ಪಗೌಡ ಸಮನ್ವಯಕಾರರಾಗಿದ್ದು, ಡಾ. ತಾಳ್ತಜೆ ವಸಂತಕುಮಾರ್, ಡಾ. ಅಭಯಕುಮಾರ್, ಡಾ. ನರಸಿಂಹಮೂರ್ತಿ, ಡಾ. ಇಂದಿರಾ ಹೆಗಡೆ, ರಾಜಶೇಖರ ಹಳೆಮನೆ, ಡಾ. ಚೇತನ್ ಸೋಮೇಶ್ವರ, ಪ್ರೊ. ಸೋಮಣ್ಣ ಹೊಂಗಳ್ಳಿ, ಡಾ. ಸಂಪತ್ ಕುಮಾರ್, ನಾಗರಾಜ್ ಹೆಗಡೆ ಅಪಗಾಲ, ಶಶಿರಾಜ್ ಕಾವೂರು ಹಾಗೂ ಚಂದ್ರಕಲಾ ನಂದಾವರ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಎಸ್‌ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷ ಪ್ರೊ. ನಾಗಪ್ಪಗೌಡ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article