ಪೆಟ್ರೋಲ್-ಡೀಸೆಲ್ ದರ ಏರಿಕೆ: ಜನರಿಗೆ ಅಚ್ಚೇದಿನ್ ತೋರಿಸಿದ ಮೋದಿ ಸರಕಾರ

ಪೆಟ್ರೋಲ್-ಡೀಸೆಲ್ ದರ ಏರಿಕೆ: ಜನರಿಗೆ ಅಚ್ಚೇದಿನ್ ತೋರಿಸಿದ ಮೋದಿ ಸರಕಾರ

ಮಂಗಳೂರು: ಪೆಟ್ರೋಲ್-ಡೀಸೆಲ್ ದರವನ್ನು ಪ್ರತೀ ಲೀಟರ್‌ಗೆ ಮೂರು ರೂ.ನಂತೆ ಹೆಚ್ಚಿಸಿದ್ದು, ದೇಶದ ಜನತೆಗೆ ಕೇಂದ್ರದ ಮೋದಿ ಸರ್ಕಾರ ನಿಜವಾದ ಅಚ್ಚೇದಿನ್ ತೋರಿಸಿದೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇತ್ತೀಚೆಗೆ ವಾಣಿಜ್ಯ ಗ್ಯಾಸ್ ಸಿಲಿಂಡರ್ ದರವನ್ನು 997 ರೂ.ಗೆ ಏರಿಕೆ ಮಾಡುವ ಮೂಲಕ ಜನರಿಗೆ ನಿಜವಾದ ಅಚ್ಚೇದಿನವನ್ನು ತೋರಿಸಿಕೊಟ್ಟ ಬಿಜೆಪಿ ಭಕ್ತರಿಗೆ ಇಂದು ಕಣ್ಣು ತರೆಸುವ ನಿಜವಾದ ಸಂದರ್ಭ ಕಲ್ಪಿಸಿದೆ. ಬಿಜೆಪಿ ಅಡಳಿತ ಬಂದ ಮೇಲೆ ದೇಶದಲ್ಲಿ ಪೆಟ್ರೋಲ್ ಡೀಸೆಲ್ ದರವನ್ನು ಏರಿಕೆ ಮಾಡುವ ಮೂಲಕ ಹಣದುಬ್ಬರವನ್ನು ಸಾಮಾನ್ಯ ಜನರಿಗೆ ಇವತ್ತು ಬೆಲೆ ಏರಿಕೆಯ ರುಚಿಯನ್ನು ತೋರಿಸಿದ್ದಾರೆ.

ಪೆಟ್ರೋಲ್ ಡೀಸೆಲ್ ಏರಿಕೆಯಾಗಿರುವುದರಿಂದ ಜನಸಾಮಾನ್ಯರಿಗೆ ದಿನನಿತ್ಯದ ವಸ್ತುಗಳ ದರ ಏರಿಕೆಯಾಗಿರುವುದು ಮಾತ್ರವಲ್ಲದೇ ಜನರ ಜೀವನವನ್ನೇ ಸಂಕಷ್ಟಕ್ಕೀಡು ಮಾಡಿದೆ. ಬಡವರ ಮೇಲೆ, ರೈತರ ಮೇಲೆ, ಕಾರ್ಮಿಕರ ಮೇಲೆ ನಡೆಸಿದ ಲಾಠಿ ಪ್ರಹಾರ ಇದಾಗಿದೆ.

ಬಿಜೆಪಿ ಅಧಿಕಾರಕ್ಕೆ ಬಂದ ದಿನದಿಂದ ಅಚ್ಚೇದಿನ್ ಬರುತ್ತದೆ ಎಂದು ಹೇಳಿ ಅನೇಕ ಜನರನ್ನು ವಂಚಿಸಿದ ನರೇಂದ್ರ ಮೋದಿ ಕೇಂದ್ರ ಸರಕಾರ ಇವತ್ತು ಪೆಟ್ರೋಲ್, ಡೇಸೆಲ್, ಗ್ಯಾಸ್ ದರವನ್ನು ಏರಿಸುವ ಮೂಲಕ ರಾಷ್ಟ್ರಾದಾದ್ಯಂತ ಹಣಕ್ಕೆ ಬೆಲೆಯೇ ಇಲ್ಲದಂತೆ ಮಾಡಿರುವುದು, ಕೇಂದ್ರದಲ್ಲಿ ಅಧಿಕಾದಲ್ಲಿರುವುದು ದುರಾದೃಷ್ಟಕರ.  ಪ್ರತಿಯೊಂದು ಮಾತಿನುದ್ದಕ್ಕೂ ಸಾಮಾನ್ಯ ಜನರ ಹಿತ ಕಾಪಾಡಿಕೊಂಡು ಬರುತ್ತಿರುವುದೆಂದು ಹೇಳಿಕೆ ನೀಡಿ ಅಧಿಕಾರಕ್ಕೆ ಬಂದ ಕೇಂದ್ರ ಸರ್ಕಾರ ಇವತ್ತು ಜನರು ಬೆಲೆ ಏರಿಕೆ ಮಾಡಿದರಿಂದ ತತ್ತರಿಸಿ ಹೋಗಿದ್ದಾರೆ. ಇದನ್ನು ಕೂಡಲೇ ಇಳಿಕೆ ಮಾಡದೇ ಇದ್ದಲ್ಲಿ ತೀವ್ರ ಹೋರಾಟ ಮಾಡಲಾಗುವುದು. 

ವಿಶ್ವಗುರು ಎಂಬ ಕೀರೀಟವನ್ನು ನರೇಂದ್ರಮೋದಿಯವರು ವಿಶ್ವದಲ್ಲಿಯೇ ದುಬಾರಿ ಡೀಸೆಲ್-ಪೆಟ್ರೋಲ್ ಎಲ್.ಪಿ.ಜಿ. ದರ ಏರಿಸುವ ಮೂಲಕ ಭಾರತ ದೇಶಕ್ಕೆ ನರಕದ ಗುರುವಾಗಿ ಮಾರ್ಪಟ್ಟಿದ್ದಾರೆ. ಹಾಗಾಗಿ ದೇಶದ ಅರ್ಥಿಕ ಪರಿಸ್ಥಿತಿಯನ್ನು ಮತ್ತು ಜನಸಾಮಾನ್ಯರನ್ನು ಬದುಕಿನಲ್ಲಿ ತೊಂದರೆಯನ್ನು ಉಂಟು ಮಾಡಿದ ಬಿಜೆಪಿ ಸರಕಾರ ಜನರ ಕ್ಷಮೆಯಾಚನೆ ಮಾಡಬೇಕು ಮತ್ತು ಅಚ್ಚೇದಿನ್ ಎಂಬ ಶಬ್ದವು ಹಳೆದಿನಗಳನ್ನು ನೆನಪು ಮಾಡಿದೆ ಎಂದು ಐವನ್ ಡಿ’ಸೋಜಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article