ಶಾಲೆಗಳಲ್ಲಿ ಹಿಜಾಬ್‌ಗೆ ಅವಕಾಶ, ಕಾಂಗ್ರೆಸ್‌ನ ಮುಸ್ಲಿಂ ತುಷ್ಠಿಕರಣದ ಪರಮಾವದಿ: ಸತೀಶ್ ಕುಂಪಲ

ಶಾಲೆಗಳಲ್ಲಿ ಹಿಜಾಬ್‌ಗೆ ಅವಕಾಶ, ಕಾಂಗ್ರೆಸ್‌ನ ಮುಸ್ಲಿಂ ತುಷ್ಠಿಕರಣದ ಪರಮಾವದಿ: ಸತೀಶ್ ಕುಂಪಲ

ಮಂಗಳೂರು: ಶಾಲೆಗಳಲ್ಲಿ ಹಿಜಾಬ್ ಧರಿಸಲು ಅವಕಾಶವನ್ನು ನೀಡುವ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರ ಅನಗತ್ಯ ಸಂಘರ್ಷಕ್ಕೆ ಎಡೆ ಮಾಡಿದೆ. ಇದು ಕಾಂಗ್ರೆಸ್‌ನ ಮುಸ್ಲಿಂ ತುಷ್ಠೀಕರಣದ ಪರಮಾಧಿ ಮತ್ತು ನ್ಯಾಯಾಲಯದ ಆದೇಶದ ಉಲ್ಲಂಘನೆ ಎಂದು ದ.ಕ. ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದು ಸರ್ಕಾರದ ವೈಪಲ್ಯ, ಪಕ್ಷದ ನಾಯಕತ್ವದ ಗೊಂದಲ ಮತ್ತು ಶಿಸ್ತು ಕ್ರಮದ ಹೆಸರಲ್ಲಿ ಕಾಂಗ್ರೆಸ್‌ನ ಮುಸ್ಲಿಂ ನಾಯಕರನ್ನು ವಜಾ ಗೊಳಿಸಿರುವುದರಿಂದ ವ್ಯಗ್ರಗೊಂಡಿರುವ ಮುಸ್ಲಿಂ ಸಮುದಾಯವನ್ನು ಸಮಾಧಾನ ಪಡಿಸಲು ಶಿಕ್ಷಣ ಕ್ಷೇತ್ರವನ್ನು ಬಳಸಿರುವುದು ರಾಜ್ಯಕ್ಕೆ ಕಾಂಗ್ರೆಸ್‌ನಿಂದ ಬಂದಿರುವ ದುರ್ದೈವ. ಶಿಕ್ಷಣ ಸಚಿವರಂತು ದಿಕ್ಕುದಿಸೆ ಇಲ್ಲದ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಸರ್ಕಾರ ತಕ್ಷಣ ತನ್ನ ಹಿಜಾಬ್ ಬಗೆಗಿನ ಆದೇಶವನ್ನು ಹಿಂಪಡೆಯಬೇಕು ಎಂದು ಕುಂಪಲ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article