ಹೆಚ್ ಪಿಸಿಎಲ್ ಬೊಟ್ಲಿಂಗ್ ಪ್ಲ್ಯಾಂಟ್ ಕಂಪನಿಯಲ್ಲಿ ಕಾರ್ಮಿಕರಿಗೆ ವೇತನ ನೀಡದೆ  ಅನ್ಯಾಯ: ಕಾರ್ಮಿಕರ ಹಠಾತ್ ಮುಷ್ಕರ

ಹೆಚ್ ಪಿಸಿಎಲ್ ಬೊಟ್ಲಿಂಗ್ ಪ್ಲ್ಯಾಂಟ್ ಕಂಪನಿಯಲ್ಲಿ ಕಾರ್ಮಿಕರಿಗೆ ವೇತನ ನೀಡದೆ ಅನ್ಯಾಯ: ಕಾರ್ಮಿಕರ ಹಠಾತ್ ಮುಷ್ಕರ


ಮಂಗಳೂರು: ಹೆಚ್‌ಪಿಸಿಎಲ್ ಬೊಟ್ಲಿಂಗ್ ಪ್ಲ್ಯಾಂಟ್ ಬಾಳ ಸುರತ್ಕಲ್ ಕಂಪನಿಯಲ್ಲಿ JUSTIN CLOBAL SERVICE LAXMI NAGAR DELHI ಕಂಪನಿಯು  ಗುತ್ತಿಗೆಯನ್ನು ಪಡೆದುಕೊಂಡಿದ್ದು ಕಾರ್ಮಿಕರಿಗೆ ತೊಂದರೆಯನ್ನು ನೀಡಿರುತ್ತದೆ.

ಕಾರ್ಮಿಕರ ಹಠಾತ್ ಮುಷ್ಕರ ಕಳೆದ ಡಿಸೆಂಬರ್ ತಿಂಗಳಿಂದ ಈ ಹೆಸರಿನ ಡೆಲ್ಲಿ ಕಂಪನಿಯು ಗುತ್ತಿಗೆಯನ್ನು ಪಡೆದಿದ್ದು ಕಾರ್ಮಿಕರಿಗೆ ವೇತನವನ್ನು ನೀಡಲು ಸತಾಯಿಸಿಕೊಂಡು ಬಂದಿದ್ದು ಕಾರ್ಮಿಕರು ಈಗ ಮುಷ್ಕರವನ್ನು ಮಾಡಿರುತ್ತಾರೆ ಕಾರ್ಮಿಕ ಇಲಾಖೆಯ ನೌಕರರಿಗೆ ತಿಂಗಳ 7 ತಾರೀಕಿನ ಒಳಗಡೆ ವೇತನವನ್ನು ನೀಡುವ ಕಾನೂನಿದ್ದು ಈ ಎಲ್ಲಾ ಕಾನೂನನ್ನು ಮೀರಿ ಇಲ್ಲಿ ಕಾರ್ಮಿಕರಿಗೆ ಅನ್ಯಾಯವನ್ನು ಎಸೆಗಲಾಗುತ್ತದೆ. ಪ್ರತಿ ತಿಂಗಳು 10-14 ತಾರೀಕಿಗೆ ವೇತನವನ್ನು ನೀಡುತ್ತಿದ್ದು ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. 

ಯಾರಾದರೂ ಇದರ ಬಗ್ಗೆ ಕಾರ್ಮಿಕ ಇಲಾಖೆಗೆ ದೂರನ್ನು ನೀಡಿದರೆ ಅಂತವರನ್ನು  ಗುರುತಿಸಿಕೊಂಡು ಕೆಲಸದ ಮೇಲೆ ಅವರಿಗೆ ತೊಂದರೆಯನ್ನು ಕೊಟ್ಟು ಕೆಲಸವನ್ನು ಬಿಟ್ಟು ಹೋಗುವಂತೆ ತೊಂದರೆಯನ್ನು ನೀಡುತ್ತಾರೆ. ಕಂಪನಿಯ ಸಂಬಂಧ ಪಟ್ಟ ಅಧಿಕಾರಿಗಳಿಗೆ ಈ ಹಿಂದೆಯೂ ಈ ವಿಚಾರದ ಬಗ್ಗೆ  ತಿಳಿಸಿದ್ದು ಗುತ್ತಿಗೆದಾರನ ಮೇಲೆ ಯಾವುದೇ ಕ್ರಮವನ್ನು ಈವರೆಗೆ ಕೈಗೊಂಡಿಲ್ಲ. 

ಈ ಒಂದು ಕೇಂದ್ರ ಸರಕಾರದ ಅಡಿಯಲ್ಲಿರುವ ಜಂ ಕಂಪನಿಯು ಟೆಂಡರ್ ಪ್ರಕ್ರಿಯೆಯನ್ನು ನಡೆಸುತ್ತಿದ್ದು ಈ ಮೂಲಕ ಹೊರ ರಾಜ್ಯದ ಗುತ್ತಿಗೆದಾರರು ಇಲ್ಲಿ ಬಂದು ಟೆಂಡರನ್ನು ಪಡೆದುಕೊಳ್ಳುತ್ತಿದ್ದು ಅವರು ಕಾರ್ಮಿಕರ ಸಂಪರ್ಕಕ್ಕೆ ಸಿಗದೇ ಈ ರೀತಿಯ ತೊಂದರೆಯನ್ನು ನೀಡುತ್ತಾರೆ ಕೇವಲ ಫೋನಿನ ಮುಖಾಂತರ ಅವರನ್ನು ಸಂಪರ್ಕಿಸುವ ವ್ಯವಸ್ಥೆಯನ್ನು ಅವರಿಗೆ ಇಲ್ಲಿ ಯಾವುದೇ ಕಚೇರಿಗಳು ಇರುವುದಿಲ್ಲ ಆದ್ದರಿಂದ ಸಂಬಂಧಪಟ್ಟ ಕಾರ್ಮಿಕ ಇಲಾಖೆ ಇದರ ತನಿಕೆಯನ್ನು ಮಾಡಿ ಕಾರ್ಮಿಕರಿಗೆ ನ್ಯಾಯ ಒದಗಿಸಬೇಕಾಗಿ ವಿನಂತಿಸಲಾಗಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article