ಚೇಳೈರು ಖಂಡಿಗೆ ನಂದಿನಿ ನದಿ ಬಳಿಯಲ್ಲಿ ಸಾರ್ವಜನಿಕರಿಂದ ದಿಢೀರ್ ಪ್ರತಿಭಟನೆ

ಚೇಳೈರು ಖಂಡಿಗೆ ನಂದಿನಿ ನದಿ ಬಳಿಯಲ್ಲಿ ಸಾರ್ವಜನಿಕರಿಂದ ದಿಢೀರ್ ಪ್ರತಿಭಟನೆ


ಮಂಗಳೂರು: ಇತಿಹಾಸ ಪ್ರಸಿದ್ದ ಚೇಳೈರು ಖಂಡಿಗೆ ನಂದಿನಿ ನದಿಗೆ ಮುಂಚೂರು ವೆಟ್ ವೆಲ್ ನ ಹತ್ತಿರದ ಒಳಚರಂಡಿಯ ಕೊಳಚೆ ನೀರು ಕೊಡಿಪಾಡಿಯಲ್ಲಿ ನಿರ್ಮಾಣವಾಗಿರುವ ತ್ಯಾಜ್ಯ ಸಂಸ್ಕರಣಾ ಘಟಕದ ನೀರು, ಚೊಕ್ಕಬೆಟ್ಟು ಪರಿಸರದ ಮನೆಯ ತ್ಯಾಜ್ಯ ನೀರು, ಮುಕ್ಕದ ಖಾಸಗಿ ಅಸ್ಪತ್ರೆ, ಕಾಲೇಜು, ವಸತಿ ಗೃಹ ಮತ್ತು ಹೋಟೇಲ್ ಗಳ ತ್ಯಾಜ್ಯ ನೀರುಗಳನ್ನು ನಂದಿನಿ ನದಿಗೆ ಬೀಡುವುದರಿಂದ ನಂದಿನಿ ನದಿ ಸಂಪೂರ್ಣ ಕಲುಷಿತಗೊಂಡಿದೆ.

ಇದರಿಂದಾಗಿ ಚೇಳೈರು ಖಂಡಿಗೆ ಭಾಗದ ಅನೇಕ ಕೃಷಿಯನ್ನೆ ಅವಲಂಬಿತ ಕುಟುಂಬಗಳು ಕೃಷಿ ಮಾಡದ ಪರಿಸ್ಥಿತಿ ಎದುರಾಗಿದ್ದು , ಕುಡಿಯುವ ನೀರಿಗೂ ಸಮಸ್ಯೆಯಾಗಿದ್ದು ಬಾವಿಗಳು ಮಲೀನಗೊಂಡಿದೆ ಮಾತ್ರವಲ್ಲದೆ ಇತಿಹಾಸ ಪ್ರಸಿದ್ದ ಖಂಡಿಗೆ ದೈವಸ್ಥಾನದ ಮೀನು ಹಿಡಿಯುವ ವ ಜಾತ್ರೆ ನಿಲ್ಲುವಂತಾಗಿದೆ ಇಂದು ಖಂಡಿಗೆ ಜಾತ್ರೆಯ ಪ್ರಯುಕ್ತ ಮೀನು ಹಿಡಿಯಲು ಜನವೇ ಇಲ್ಲದಿರುವುದನ್ನು ಕಂಡು ನಂದಿನಿ ನದಿ ಹೋರಾಟ ಸಮಿತಿ ಮತ್ತು ಸಾರ್ವಜನಿಕರಿಂದ ಹಾಠಾತ್ ಪ್ರತಿಭಟನೆ ನಡೆಯಿತು ಪ್ರತಿಭಟನಾಕಾರರು ಜಿಲ್ಲಾಡಳಿತ, ಜನಪ್ರತಿನಿಧಿಗಳಿಗೆ ದಿಕ್ಕಾರ ಕೂಗಿದರು.


ಹೋರಾಟ ಸಮಿತಿಯ ಪ್ರಮುಖರಾದ ಸುಕೇಶ್ ಶೆಟ್ಟಿ ಖಂಡಿಗೆ  ಮಾತನಾಡಿ ನಂದಿನಿ ನದಿ ಉಳಿಸಿ ಎಂಬ ಹೋರಾಟ ಕೇವಲ ಇಂದು ಮಾತ್ರ ನಡೆಯದೇ ನಮ್ಮ ಸಮಸ್ಯೆ ಪರಿಹಾರ ಅಗುವವರೆಗೆ ಹೋರಾಟ ಮುಂದುವರಿಯಬೇಕು ಯಾರದೋ ಒತ್ತಡಕ್ಕೆ,ಹಣದ ಅಸೆಗೆ ಬಲಿಯಾಗಬಾರದು ಇದರ ಹಿಂದೆ ಎಷ್ಟೆ ಬಲಿಷ್ಟ ರಾಜಕೀಯ ಪ್ರೇರಿತ ವ್ಯಕ್ತಿ ಇದ್ದರು ಅತನ ವಿರುದ್ದ ನಾವು ಹೋರಾಡಬೇಕು ಎಂದರು.

ಚೇಳೈರು ಗ್ರಾಮ ಮಾಜಿ  ಪಂಚಾಯತ್ ಅಧ್ಯಕ್ಷ ಜಯಾನಂದ ಮಾತನಾಡಿ  ನಂದಿನಿ ನದಿ ಕಲುಷಿತಗೊಂಡಿರುವ ಬಗ್ಗೆ ಎರಡು ವರ್ಷಗಳಿಂದ ನಿರಂತರ ಹೋರಾಟ ಮತ್ತು ಸಂಬಂಧಿಸಿದ ಎಲ್ಲಾ ಇಲಾಖೆಗೆ, ಜನಪ್ರತಿನಿಧಿಗಳಿಗೆ ಮನವಿ ನೀಡಿದರು ಪ್ರಯೋಜನವಾಗಿಲ್ಲ ಹಾಗಾಗಿ ನದಿ ವಿಷಯುಕ್ತವಾಗಲು  ಜಿಲ್ಲಾಡಳಿತ ಮತ್ತು ನಗರಪಾಲಿಕೆ ಅಧಿಕಾರಿಗಳು ನೇರ ಹೊಣೆ ಎಂದರು.

ನಂದಿನಿ ಹೋರಾಟ ಸಮಿತಿ ಪ್ರಮುಖರಾದ ದಿವಾಕರ ಸಾಮಾನಿ  ಮಾತನಾಡಿ  ಮುಂಚೆ ನಂದಿನಿ ನದಿಯಲ್ಲಿ ಮೀನು ಹಿಡಿಯಲು ಸಾವಿರಾರು ಜನ ಸೇರುತ್ತಿದ್ದರು ಜನಜಂಗುಳಿ ಸೇರಿತ್ತಿದ್ದ ನದಿಯಲ್ಲಿ ಇಂದಿನ ದಿನ ಮೀನು ಹಿಡಿಯಲು ಬೆರಳೆಣಿಗೆ ಜನ ಇಳಿದಿರುವುದು ಬಹಳ ದು:ಖರಕ ವಿಷಯವಾಗಿದೆ ಕಳವಳಕಾರಿ ಸಂಗತಿಯಾಗಿದೆ ನಾವು ಫಲವತ್ತಾದ ಕೃಷಿ ಭೂಮಿಯನ್ನು ಜುಜುಬಿ ಹಣಕ್ಕೆ ಪ್ಲಾಂಟ್ ಗಳಿಗೆ  ನೀಡಿ  ಈಗ ಕಷ್ಟ ನಷ್ಟ ಅನುಭವಿಸುತ್ತಾ ಇದ್ದೇವೆ ದೊಡ್ಡ ದೊಡ್ಡ ಕಂಪೆನಿಗಳು, ಅಸ್ಪತ್ರೆಗಳು, ಖಾಸಗಿ ಪ್ಲಾಟ್ ಗಳು  ನಮ್ಮ ಊರಿಗೆ ಬಂದು ಅದರ ಕಲುಷಿತ ನೀರು ನಮ್ಮ ನದಿಗೆ ಬಿಡುವುದರಿಂದ ಪರಿಸರ ಜೊತೆಗೆ ನಮ್ಮ ಅರೋಗ್ಯಕ್ಕೆ ಹಾನಿಕರ ಈ ಬಗ್ಗೆ ನಾವು ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ಮುಂದೆ ದೊಡ್ಡ ಅಪಾಯ ಕಾದಿದೆ ಹಾಗಾಗಿ ನಿರಂತರ  ಹೋರಾಟದ ಅಗತ್ಯವಿದೆ  ಎಂದರು.  

ಧಾರ್ಮಿಕ ಮುಖಂಡರಾದ ಕಿರಣ್ ಶೆಟ್ಟಿ ಕೆರೆಮನೆ ಮಾತನಾಡಿ ನಾವು ಎಲ್ಲಾ ಪಕ್ಷದ ಜನಪ್ರತಿನಿಧಿಗಳಿಗೆ ನಮ್ಮ ಸಮಸ್ಯೆ ಬಗ್ಗೆ ಮನವಿ ನೀಡಿದ್ದೇವೆ ಅದರೆ ಯಾರು ಸ್ಪಂದನೆ ನೀಡದ ಕಾರಣ ಸಮಸ್ಯೆ ಸರಿಯಾಗುವ ತನಕ  ಮುಂದೆ  ಬರುವ ಎಲ್ಲಾ  ಚುನಾವಣೆಗೆ ಚೇಳೈರು ಗ್ರಾಮ ಪಂಚಾಯತ್ ವ್ಯಾಪ್ತಿಯ ಎಲ್ಲಾ ಗ್ರಾಮಗಳ ಗ್ರಾಮಸ್ಥರು ಮತದಾನ ಮಾಡದೇ  ಚುನಾವಣೆ ಬಹಿಷ್ಕಾರ ಮಾಡುತ್ತೇವೆ ಎಂದು ಎಚ್ಚರಿಸಿದರು.

ನಂದಿನಿ ನದಿ ಹೋರಾಟ ಸಮಿತಿಯ ನಿತಿನ್ ಶೆಟ್ಟಿ ಖಂಡಿಗೆ  ಮಾತನಾಡಿ ಇಂದಿನಿಂದ 6 ತಿಂಗಳ  ಒಳಗೆ ನಮ್ಮ ನಂದಿನಿ ನದಿಗೆ ಬರುವ ಖಾಸಗಿ ಅಸ್ಪತ್ರೆ, ಎಸ್ ಟಿ ಪಿ ಪ್ಲಾಂಟ್, ವೆಟ್ ವೆಲ್ ನೀರು, ಖಾಸಗಿ ವಸತಿ ಸಮುಚ್ಚಯದ ನೀರನ್ನು ಜಿಲ್ಲಾಡಳಿತ ಬಂದ್ ಮಾಡಬೇಕು ನಂತರ ನದಿಯಲ್ಲಿ ಬೆಳೆದಿರುವ ಕಲುಷಿತ ಗಿಡಗಳನ್ನು ತೆಗೆದು ನದಿಯನ್ನು ಸ್ವಚ್ಚಗೊಳಿಸಬೇಕು ಇದಕ್ಕೆ ಜಿಲ್ಲಾಡಳಿತ ಸರಿಯಾದ ಕ್ರಮ ಕೈಗೊಳ್ಳದಿದ್ದರೆ ಅಗುವ ಅನಾಹುತಗಳಿಗೆ ಜಿಲ್ಲಾಡಳಿತ ನೇರ ಹೊಣೆ ಮಾತ್ರವಲ್ಲದೇ ಮುಂದಿನ ದಿನ ಉಗ್ರವಾದ ಹೋರಾಟದ ಜತೆಗೆ ಪ್ಲಾಂಟ್ ಬಂದ್ ಮಾಡುವ ಎಚ್ಚರಿಕೆ ನೀಡಿದರು ಚೇಳೈರು ಗ್ರಾಮ ಪಂಚಾಯತ್, ಮಾಜಿ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ,ಮಾಜಿ ಸದಸ್ಯ ವಿನಯಕುಮಾರ್ ಶೆಟ್ಟಿ, ಗಂಗಾಧರ ಪೂಜಾರಿ ಚೇಳೈರು ಕಾಲನಿ ಉಪಸ್ಥಿತರಿದ್ದರು

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article