ಆರ್ಥಿಕಸಂಕಷ್ಟ: ಕೇಂದ್ರದಿಂದ ತುರ್ತು ಸಾಲ ಯೋಜನೆ
ತುರ್ತು ಕ್ರೆಡಿಟ್ ಲೈನ್ ಗ್ಯಾರಂಟಿ ಯೋಜನೆ ಕೇಂದ್ರ ಸರಕಾರ ಬೆಂಬಲಿತ ಕ್ರೆಡಿಟ್ ಗ್ಯಾರಂಟಿ ಕಾರ್ಯಕ್ರಮವಾಗಿದೆ. ಹಣಕಾಸು ಸಚಿವಾಲಯದ ಅಡಿಯಲ್ಲಿ ಕಾರ್ಯ ನಿರ್ವಹಿಸುವ ನ್ಯಾಷನಲ್ ಕ್ರೆಡಿಟ್ ಗ್ಯಾರಂಟಿ ಟ್ರಸ್ಟಿ ಕಂಪನಿ ಈ ಯೋಜನೆಯನ್ನು ನಿರ್ವಹಿಸುತ್ತದೆ. ಬ್ಯಾಂಕ್ ಮತ್ತು ಎನ್‌ಬಿಎಫ್‌ಸಿಗಳು ಅರ್ಹ ಸಾಲಗಾರರಿಗೆ ಮೇಲಾಧಾರವಿಲ್ಲದೆ ಹೆಚ್ಚುವರಿ ಕಾರ್ಯನಿರತ ಬಂಡವಾಳ ಸಾಲವನ್ನು ವಿಸ್ತರಿಸಲು ಈ ಯೋಜನೆಯ ಮೂಲಕ ಅವಕಾಶ ಕಲ್ಪಿಸಲಾಗುತ್ತಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
2026ರ ಮಾರ್ಚ್ 31ರ ವೇಳೆಗೆ ಅಸ್ತಿತ್ವದಲ್ಲಿರುವ ಕಾರ್ಯನಿರತ ಬಂಡವಾಳ ಮಿತಿ ಹೊಂದಿರುವ ಎಂಎಸ್‌ಎಂಇ ಹಾಗೂ ಇತರ ಸಂಸ್ಥೆಗಳು ಹಾಗೂ ಸಲ ಸೌಲಭ್ಯ ಹೊಂದಿರುವ ವಿಮಾನ ಯಾನ ಸಂಸ್ಥೆಗಳು ಈ ಯೋಜನೆಯ ಪ್ರಯೋಜನ ಪಡೆಯಬಹುದು. ಈ ಮೇಲಿನ ಅವಧಿಗೆ ಬ್ಯಾಂಕ್ ಸಾಲಖಾತೆಯನ್ನು ಪ್ರಮಾಣಿತ ಎಂದು ವರ್ಗೀಕರಿಸಿದ್ದಲ್ಲಿ ಈ ಸಾಲ ಯೋಜನೆ ಅನ್ವಯವಾಗಲಿದೆ. ಬಡ್ಡಿ ದರ ಬ್ಯಾಂಕ್‌ಗಳಲ್ಲಿ ಶೇ. 0.75ರಿಂದ ಗರಿಷ್ಠ ಶೇ. 9 ಹಾಗೂ ಎನ್‌ಬಿಎಫ್‌ಸಿಗಳಿಂದ ಗರಿಷ್ಠ ಶೇ. 13. ಒಂದು ವರ್ಷದ ಸಾಲ ಮರುಪಾವತಿಗೆ ವಿನಾಯಿತಿ (ಬಡ್ಡಿ ಪಾವತಿಸಬೇಕು)ಯೊಂದಿಗೆ ಸಾಲವನ್ನು ಒದಗಿಸಲಾಗುತ್ತದೆ. ಎಂದು ಅವರು ಹೇಳಿದರು.
ಸಾಲವನ್ನು 2027ರ ಮಾರ್ಚ್ 31ರೊಳಗೆ ಮಂಜೂರು ಮಾಡಿ, ಆ ವರ್ಷದ ಜೂ. 30ರೊಳಗೆ ವಿತರಿಸಬೇಕಿದೆ. ಇದಕ್ಕಾಗಿ ಬ್ಯಾಂಕ್‌ಗೆ ತೆರಳಬೇಕಿಲ್ಲ. ಉದ್ದಿಮೆದಾರರು ಈಗಲೇ ತಮ್ಮ ಅರ್ಜಿಯನ್ನು ‘ಜನ ಸಮರ್ಥ್’ ಪೋರ್ಟಲ್ ಮೂಲಕ ಸಲ್ಲಿಸಬಹುದು ಎಂದರು.
ರಾಜ್ಯ ಸರಕಾರಕ್ಕೆ ಒತ್ತಾಯ..
ಈ ಸಾಲಕ್ಕೆ ಕೇಂದ್ರ ಸರಕಾರ ಯಾವುದೇ ಗ್ಯಾರಂಟಿ ಶುಲ್ಕ, ದಸ್ತಾವೇಜು ಶುಲ್ಕ, ತಪಾಸಣೆ ಶುಲ್ಕ ವಿಽಸುತ್ತಿಲ್ಲ. ಆದರೆ,
ಕೇಂದ್ರದ ಸರಕಾರದ ಈ ತುರ್ತು ಸಾಲಕ್ಕೆ ರಾಜ್ಯ ಸರಕಾರ ಶೇ. 1ರಷ್ಟು ಮುದ್ರಾಂಕ ಶುಲ್ಕ ವಿಽಸುತ್ತಿದೆ. ದೇಶದ ಆರ್ಥಿಕ ಸಂಕಷ್ಟದ ಸಮಯದಲ್ಲಿ ಈ ಮುದ್ರಾಂಕ ಶುಲ್ಕ ಸಂಪೂರ್ಣ ವಿನಾಯಿತಿ ನೀಡಬೇಕು ಎಂದು ರಾಜ್ಯ ಸರಕಾರವನ್ನು ಒತ್ತಾಯಿಸಿದರು.
ಬಿಜೆಪಿ ಆರ್ಥಿಕ ಪ್ರಕೋಷ್ಠ ದ.ಕ. ಜಿಲ್ಲಾ ಸಹ ಸಂಚಾಲಕ ಯೋಗೀಶ್ ಪೈ, ಸದಸ್ಯರಾದ ರಾಜೇಶ್ ರಾವ್ ಎಂ., ವಸಂತ ಶೆಟ್ಟಿ, ಡಾ.ಎಸ್.ಎಂ. ಶಿವಪ್ರಕಾಶ್, ರಘುನಾಥ್ ಪೈ ಉಪಸ್ಥಿತರಿದ್ದರು.