ಮಿಲಾಗ್ರೆಸ್ ಕಾಲೇಜಿನಲ್ಲಿ ರಕ್ತದಾನ ಶಿಬಿರ
Friday, May 1, 2026
ಮಂಗಳೂರು: ಮಿಲಾಗ್ರೆಸ್ ಕಾಲೇಜಿನ ಯೂತ್ ರೆಡ್‌ಕ್ರಾಸ್, ರೆಡ್ ರಿಬನ್ ಕ್ಲಬ್ ಮತ್ತು ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್) ಘಟಕ ವತಿಯಿಂದ, ಲಯನ್ಸ್ ಕ್ಲಬ್ ಮಿಲಾಗ್ರೆಸ್ ಮಂಗಳೂರು ಹಾಗೂ ಬ್ಲಡ್ ಡೊನರ್ಸ್ ಮಂಗಳೂರು ಇವರ ಸಹಯೋಗದಲ್ಲಿ ಮಿಲಾಗ್ರೆಸ್ ಕಾಲೇಜು ಸಭಾಂಗಣದಲ್ಲಿ ರಕ್ತದಾನ ಶಿಬಿರವನ್ನು ಎ.28ರಂದು ನಡೆಯಿತು.
ರಕ್ತದಾನಕ್ಕೆ ವಿದ್ಯಾರ್ಥಿಗಳು, ಸಿಬ್ಬಂದಿಗಳು ಮತ್ತು ಸಾರ್ವಜನಿಕರಿಂದ ಅಪಾರ ಸ್ಪಂದನೆ ದೊರಕಿದ್ದು, ಒಟ್ಟು ೧೬೮ ಯೂನಿಟ್ ರಕ್ತ ಸಂಗ್ರಹವಾಗಿದ್ದು, ಇದು ಸ್ಥಳೀಯ ಆರೋಗ್ಯ ಸೇವೆಗಳಿಗೆ ಮಹತ್ತರ ನೆರವಾಗಲಿದೆ.
ಕಾರ್ಯಕ್ರಮವನ್ನು ಪ್ರಾಂಶುಪಾಲರು ಹಾಗೂ ಕ್ಯಾಂಪಸ್ ನಿರ್ದೇಶಕರಾದ ರೆ. ಡಾ. ಆಲ್ವಿನ್ ಸೆರಾವೋ ಉದ್ಘಾಟಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾಜಿ ಜಿಲ್ಲಾ ಗರ್ನರ್ ಜೆ.ಕೆ. ರಾವ್ ಹಾಗೂ ಕೆಎಂಸಿ ರಕ್ತ ಕೇಂದ್ರದ ಡಾ. ದೀಪಾ ಅಡಿಗ ಭಾಗವಹಿಸಿದ್ದರು.
ಎನ್‌ಎಸ್‌ಎಸ್ ಕಾರ್ಯಕ್ರಮ ಅಧಿಕಾರಿ ಜೋಯೆಲ್ ಮಸ್ಕರೆನ್ಹಸ್ ಹಾಗೂ ಬ್ಲಡ್ ಡೊನರ್ಸ್ ಮಂಗಳೂರು ಸಂಸ್ಥಾಪಕ ಅಧ್ಯಕ್ಷ ಸಿದ್ದಿಕ್ ಮಂಜೇಶ್ವರ ಉಪಸ್ಥಿತರಿದ್ದರು.
ಫಿಲಿಪ್ ಜೆ. ಪಿರೇರಾ ಅವರು ಸ್ವಾಗತಿಸಿದರು. ಉಪನ್ಯಾಸಕಿ ಶೈಲಾ ಮೊರಸ್ ವಂದಿಸಿ, ವಿದ್ಯಾರ್ಥಿನಿ ಅನುಷಾ ಕಾರ್ಯಕ್ರಮ ನಿರೂಪಿಸಿದರು.