ವೈದ್ಯರ ನಿರ್ಲಕ್ಷ್ಯ ಆರೋಪ: ಆಸ್ಪತ್ರೆ ವರಾಂಡದಲ್ಲಿ ರೋಗಿ ಸಾವು
ಮಂಗಳೂರು: ಬೆಳ್ತಂಗಡಿ :ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದ ರೋಗಿಯೊಬ್ಬರ ಮೃತದೇಹ ಆಸ್ಪತ್ರೆಯ ಹೊರ ವರಾಂಡದಲ್ಲಿ ಕಂಡುಬಂದಿದ್ದು, ಆಸ್ಪತ್ರೆಯಲ್ಲಿನ ನಿರ್ಲಕ್ಷ್ಯದಿಂದ ಆತ ಕುಸಿದು ಬಿದ್ದು ಮೃತಪಟ್ಟಿದ್ದಾನೆ ಎಂಬ ಆರೋಪ ಕೇಳಿಬರುತ್ತಿದೆ.
ಪುದುವೆಟ್ಟು ಗ್ರಾಮದ ಪೆಲತ್ತಾಜೆ ನಿವಾಸಿ ಅಚ್ಯುತ(42) ಮೃತಪಟ್ಟವರು.
ಹೊಟ್ಟೆನೋವಿನ ಹಿನ್ನೆಲೆಯಲ್ಲಿ ಇವರು ಮೇ 10 ರಂದು ಮಧ್ಯಾಹ್ನ ಬೆಳ್ತಂಗಡಿ ತಾಲೂಕು ಸಾರ್ವಜನಿಕ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರು ಇಂದು ಮುಂಜಾನೆ ಐದು ಗಂಟೆ ಸುಮಾರಿಗೆ ಆಸ್ಪತ್ರೆಯಿಂದ ಒಂಟಿಯಾಗಿ ಹೊರಗಡೆ ಹೋಗಿದ್ದು, ಆಸ್ಪತ್ರೆಯ ಹಿಂಭಾಗದ ಡಯಾಲಿಸಿಸ್ ಕೇಂದ್ರದ ಬಳಿ ಕುಸಿದು ಬಿದ್ದು ಮೃತಪಟ್ಟಿದ್ದಾರೆ.
ಚಿಕಿತ್ಸೆಯಲ್ಲಿದ್ದ ರೋಗಿಯೊಬ್ಬರು ಒಂಟಿಯಾಗಿ ಹೊರಹೋಗುವಂತೆ ಮಾಡಿ ಆಸ್ಪತ್ರೆಯ ಸಿಬ್ಬಂದಿ ಕರ್ತವ್ಯಲೋಪ ಎಸಗಿದ್ದಾರೆ. ಇದರಿಂದ ಅಚ್ಯುತ ಸಾವನ್ನಪ್ಪಿದ್ದಾರೆ ಎಂದು ಸಾರ್ವಜನಿಕರು ಆರೋಪಪಿಸಿದ್ದಾರೆ.. ಅಚ್ಯುತರ ಕುಟುಂಬ ಬಡತನದಲ್ಲಿದೆ., ಪತ್ನಿ ಕೂಲಿ ಕೆಲಸ ಮಾಡುತ್ತಿದ್ದು, ಇಬ್ಬರು ಮಕ್ಕಳನ್ನು ಹೊಂದಿದ್ದಾರೆ.