ಅಲೋಶಿಯಸ್ ಸಂಸ್ಥೆಗಳ ರೆಕ್ಟೆರ್ ಪದಗ್ರಹಣ
ವೈಸ್ ರೆಕ್ಟರ್ ರೆ. ಡಾ. ಮೆಲ್ವಿನ್ ಡಿಕುನ್ಹಾ ಎಸ್.ಜೆ. ಹೊಸ ರೆಕ್ಟರ್ ಅವರನ್ನು ಸ್ವಾಗತಿಸಿ, ಸಂಸ್ಥೆಗಳ ನಾಯಕತ್ವದ ಜವಾಬ್ದಾರಿಯನ್ನು ಅವರಿಗೆ ಹಸ್ತಾಂತರಿಸಿದರು.
ಅಧಿಕಾರ ಸ್ವೀಕರಿಸಿ ಮಾತನಾಡಿದ ಫಾ. ಬ್ರಾಯನ್, ಸಂಸ್ಥೆಯ ಪರಂಪರೆ ಮತ್ತು ದಿವಂಗತ ಫಾದರ್ ಮೆಲ್ವಿನ್ ಜೋಸೆಫ್ ಪಿಂಟೊ ಅವರ ಸಹಾನುಭೂತಿಯ ನಾಯಕತ್ವವು ಬೆಳೆಸಲು ಎಲ್ಲರ ಸಹಕಾರದ ಅಗತ್ಯವಿದೆ ಎಂದರು.
ಎಪ್ರಿಲ್ 10, 2026 ರಂದು ಮಾಜಿ ರೆಕ್ಟರ್ ರೆ. ಫಾ. ಮೆಲ್ವಿನ್ ಜೋಸೆಫ್ ಪಿಂಟೊ ಅವರ ಅಕಾಲಿಕ ಮರಣದ ನಂತರ ಈ ನೇಮಕಾತಿ ನಡೆದಿದ್ದು, ಸೊಸೈಟಿ ಆಫ್ ಜೀಸಸ್ನ ಸುಪೀರಿಯರ್ ಜನರಲ್ ರೆ. ಫಾ. ಆರ್ಟುರೊ ಅಬಾಸ್ಕಲ್ ಸೋಸಾ ರವರು ಫಾ. ಬ್ರಾಯನ್ ಪಿರೇರರನ್ನು ಹೊಸ ರೆಕ್ಟರ್ ಆಗಿ ನೇಮಿಸಿದ್ದರು.
ತಿರುಚಿಯ ಸಂತ ಜೋಸೆಫ್ಸ್ ಕಾಲೇಜಿನಿಂದ ರಸಾಯನಶಾಸ್ತ್ರದಲ್ಲಿ ಎಂ.ಎಸ್ಸಿ ಮತ್ತು ಅಮೆರಿಕದ ಮೇರಿಲ್ಯಾಂಡ್ನ ಲೊಯೊಲಾ ವಿಶ್ವವಿದ್ಯಾನಿಲಯದಿಂದ ಕೌನ್ಸೆಲಿಂಗ್ ನಲ್ಲಿ ಸ್ನಾತಕೋತ್ತರ ಪದವಿಯನ್ನು ಫಾ. ಬ್ರಾಯನ್ ಪಡೆದಿದ್ದಾರೆ. ಫಾ. ಬ್ರಾಯನ್ ಅವರು ಜೆಸ್ವಿಟ್ ಸಂಸ್ಥೆಗಳಲ್ಲಿ ಈಗಾಗಲೇ ಹಲವಾರು ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ್ದಾರೆ.