ಎಸ್‌ಸಿಡಿಸಿಸಿ ಬ್ಯಾಂಕ್: ನಿವೃತ್ತ ಅಧಿಕಾರಿದ್ವಯರಿಗೆ ವಿದಾಯ
Friday, May 1, 2026
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಸಹಾಯಕ ಮಹಾಪ್ರಬಂಧಕ ಕರುಣಾಕರ ಹಾಗೂ ಕಿರಿಯ ಶಾಖಾ ನಿರೀಕ್ಷಕರಾದ ರಾಜಾರಾಮ ರಾವ್ ಡಿ. ಇವರು ಕರ್ತವ್ಯ ನಿವೃತ್ತಿಯನ್ನು ಹೊಂದಿದ್ದು ಇವರನ್ನು ಬೀಳ್ಕೊಡುವ ಸಮಾರಂಭವು ಬ್ಯಾಂಕ್ ಅಧ್ಯಕ್ಷರಾದ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆಯಿತು.
ಕರುಣಾಕರ ಅವರು 32 ವರ್ಷ ಬ್ಯಾಂಕ್‌ನಲ್ಲಿ ಕರ್ತವ್ಯ ಸಲ್ಲಿಸಿ ಸಹಾಯಕ ಮಹಾಪ್ರಬಂಧಕರಾಗಿ ನಿವೃತ್ತಿ ಹೊಂದುತ್ತಿದ್ದು ಮತ್ತು ರಾಜರಾಮ ರಾವ್ ಅವರು ಕೂಡಾ 32 ವರ್ಷ ಕರ್ತವ್ಯ ಸಲ್ಲಿಸಿ ಕಿರಿಯ ಶಾಖಾ ನಿರೀಕ್ಷಕರಾಗಿ ನಿವೃತ್ತಿ ಹೊಂದಿದ್ದಾರೆ.
ನಿವೃತ್ತಿ ಹೊಂದಿದ ಅಧಿಕಾರಿದ್ವಯರನ್ನು ಅಧ್ಯಕ್ಷರಾದ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರು ಹಾರ, ಶಾಲು ಹೊದಿಸಿ , ಫಲಪುಷ್ಪ , ಸ್ಮರಣಿಕೆಯ ಜೊತೆಗೆ ಸನ್ಮಾನಿಸಿದರು. ಈ ಸಂದರ್ಭದಲ್ಲಿ ನಿವೃತ್ತಿಯಾದ ಅಧಿಕಾರಿಗಳ ನಿವೃತ್ತ ಜೀವನವು ಆರೋಗ್ಯ ಪೂರ್ಣವಾಗಿ ಸುಖಮಯವಾಗಲಿ ಎಂದು ಶುಭ ಆಶಿಸಿದರು
ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋಪಾಲಕೃಷ್ಣ ಭಟ್, ಎಸ್‌ಸಿಡಿಸಿಸಿ ಬ್ಯಾಂಕ್ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಜೋವಿನ್ ಪ್ರಕಾಶ್ ಡಿ’ ಸೋಜಾ ಹಾಗೂ ಬ್ಯಾಂಕಿನ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.