ಸುಳ್ಯ ಬ್ಲಾಕ್ ಕಾಂಗ್ರೆಸ್ ಸಮಿತಿ ನೂತನ ಪದಾಧಿಕಾರಿಗಳ ಘೋಷಣೆ
ಸುಳ್ಯ: ಸುಳ್ಯ ಬ್ಲಾಕ್ ಕಾಂಗ್ರೆಸ್ ಸಮಿತಿ ನೂತನ ಪದಾಧಿಕಾರಿಗಳ ಹೆಸರುಗಳನ್ನು ಘೋಷಣೆ ಮಾಡಲಾಗಿದೆ. ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು ನೂತನ ಪದಾಧಿಕಾರಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದರು.ಕೆಪಿಸಿಸಿ ಮಾರ್ಗಸೂಚಿಯಂತೆ ನೂತನ ಪದಾಧಿಕಾರಿಗಳ ನೇಮಕ ಮಾಡಲಾಗಿದ್ದು ಡಿಸಿಸಿ ಹಾಗೂ ಕೆಪಿಸಿಸಿ ಅನುಮತಿ ಮೇರೆಗೆ ಹೊಸ ಪದಾಧಿಕಾರಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗುತಿದೆ. ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳ ನೇಮಕದ ಬಳಿಕ ಮುಂದಿನ ಹಂತದಲ್ಲಿ ವಿವಿಧ ಘಟಕಗಳ, ಗ್ರಾಮ ಸಮಿತಿ, ಬೂತ್ ಸಮಿತಿಗಳ ನೇಮಕಾತಿ ನಡೆಯಲಿದೆ ಎಂದು ಅವರು ವಿವರಿಸಿದರು.
ನೂತನ ಬ್ಲಾಕ್ ಪದಾಧಿಕಾರಿಗಳು..
ಜಿಲ್ಲಾ ಪಂಚಾಯತ್ ಮತ್ತು ನಗರ ವ್ಯಾಪ್ತಿಗೆ ತಲಾ ಒಬ್ಬರಂತೆ 4 ಮಂದಿ ಉಪಾಧ್ಯಕ್ಷರು, ನಗರ ವ್ಯಾಪ್ತಿಯಲ್ಲಿ ಒಬ್ಬರು ಆಡಳಿತ ಪ್ರಧಾನ ಕಾರ್ಯದರ್ಶಿ, ತಾಲೂಕು ಪಂಚಾಯತ್ ಕ್ಷೇತ್ರಕ್ಕೆ ಒಬ್ಬರಂತೆ ಪ್ರಧಾನ ಕಾರ್ಯದರ್ಶಿ ಮತ್ತು ಕಾರ್ಯದರ್ಶಿ, ಪಂಚಾಯತ್ ವ್ಯಾಪ್ತಿ ಹಾಗೂ ನಗರ ವ್ಯಾಪ್ತಿ ಸೇರಿ ಒಟ್ಟು 61 ಮಂದಿ ಕಾರ್ಯಕಾರಿ ಸಮಿತಿ ಸದಸ್ಯರ ನೇಮಕ ಮಾಡಲಾಗಿದೆ ಎಂದು ಅವರು ವಿವರಿಸಿದರು.
ಉಪಾಧ್ಯಕ್ಷರು: ಸುರೇಶ್ ಎಂ.ಹೆಚ್, ಮಿತ್ರದೇವ ಮಡಪ್ಪಾಡಿ, ಅನಿಲ್ ರೈ ಚಾವಡಿಬಾಗಿಲು, ಕೆ.ಗೋಕುಲ್ ದಾಸ್
ಪ್ರಧಾನ ಕಾರ್ಯದರ್ಶಿಗಳು..
ಭವಾನಿಶಂಕರ ಕಲ್ಮಡ್ಕ, ಸತ್ಯಕುಮಾರ್ ಆಡಿಂಜ, ಎಸ್.ಕೆ ಹನೀಫ್ ಸಂಪಾಜೆ, ಪ್ರಸಾದ್ ರೈ ಮೇನಾಲ. ಪ್ರವೀಣ್ ಮುಂಡೋಡಿ, ಲೋಕೇಶ್ ಅಕ್ರಿಕಟ್ಟೆ, ರವಿಕುಮಾರ್ ಕಿರಿಭಾಗ
ಸಚಿನ್ ರಾಜ್ ಶೆಟ್ಟಿ, ಹಮೀದ್ ಹೆಚ್.ಎಂ, ಪವನ್ ಮುಂಡ್ರಾಜೆ, ತೀರ್ಥರಾಮ ಬಿ
ಕಾರ್ಯದರ್ಶಿಗಳು..
ಧರ್ಮಪಾಲ ಕೊಯಿಂಗಾಜೆ, ಅಶ್ರಫ್ ಗುಂಡಿ,ರಾಹುಲ್ ಅಡ್ಪಂಗಾಯ,ಹರ್ಷಿತ್ ಕೊರಂಬಟ,ವಿಜೇಶ್ ಹಿರಿಯಡ್ಕ, ದಿನೇಶ್ ಮಡ್ತಿಲ ಕೊಲ್ಲಮೊಗ್ರು.ಹರೀಶ್ ಹುದೇರಿ,ಪ್ರಶಾಂತ್ ರೈ ಮರುವಂಜ, ಕರುಣಾಕರ ಮಡ್ತಿಲ,ಇಕ್ಬಾಲ್ ಸುಣ್ಣಮೂಲೆ. ಶಿವಕುಮಾರ್ ಕಂದಡ್ಕ.
ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ.ಶಹೀದ್ ತೆಕ್ಕಿಲ್, ಸುಳ್ಯ ವಿಧಾನಸಭಾ ಕ್ಷೇತ್ರದ ಪ್ರಚಾರ ಸಮಿತಿ ಅಧ್ಯಕ್ಷ ದಿನೇಶ್ ಅಂಬೆಕಲ್ಲು, ಯುವ ಕಾಂಗ್ರೆಸ್ ಅಧ್ಯಕ್ಷ ಚೇತನ್ ಕಜೆಗದ್ದೆ, ನೂತನ ಬ್ಲಾಕ್ ಪ್ರಧಾನ ಕಾರ್ಯದರ್ಶಿ ಭವಾನಿಶಂಕರ ಕಲ್ಮಡ್ಕ, ಮಂಜುನಾಥ ಮಡ್ತಿಲ ಉಪಸ್ಥಿತರಿದ್ದರು.