ಮೂಡುಬಿದಿರೆ: ವಿದ್ಯಾಗಿರಿ-ಹಂಡೇಲು-ಪುತ್ತಿಗೆಯಲ್ಲಿ ಸ್ವಚ್ಛತಾ ಅಭಿಯಾನ-700ಕ್ಕೂ ಅಧಿಕ ಚೀಲಗಳಷ್ಟು ಕಸಕಡ್ಡಿ, ಪ್ಲಾಸ್ಟಿಕ್ ಸಂಗ್ರಹಿಸಿ ವಿಲೇವಾರಿ

ಮೂಡುಬಿದಿರೆ: ವಿದ್ಯಾಗಿರಿ-ಹಂಡೇಲು-ಪುತ್ತಿಗೆಯಲ್ಲಿ ಸ್ವಚ್ಛತಾ ಅಭಿಯಾನ-700ಕ್ಕೂ ಅಧಿಕ ಚೀಲಗಳಷ್ಟು ಕಸಕಡ್ಡಿ, ಪ್ಲಾಸ್ಟಿಕ್ ಸಂಗ್ರಹಿಸಿ ವಿಲೇವಾರಿ


ಮೂಡುಬಿದಿರೆ: ವಿದ್ಯಾಗಿರಿ-ಹಂಡೇಲು ಹಾಗೂ  ವಿದ್ಯಾಗಿರಿ-ಪುತ್ತಿಗೆ  ಪರಿಸರದ 5.5 ಕಿಮೀ ವ್ಯಾಪ್ತಿಯ ರಸ್ತೆಯ ಎರಡೂ ಇಕ್ಕೆಲಗಳಲ್ಲಿ  ಪ್ಲಾಸ್ಟಿಕ್ ಮತ್ತು ವಿವಿಧ ರೀತಿಯ ಕಸದ ರಾಶಿಯಿಂದ ತುಂಬಿಕೊಂಡು ಅಸಹ್ಯವಾಗಿ ಕಾಣುತ್ತಿದ್ದ ಪರಿಸರವನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಹಾಗೂ ವಿವಿಧ ಸಂಘ ಸಂಸ್ಥೆಗಳು ಸೇರಿ ಭಾನುವಾರ ‘ಸ್ವಚ್ಛ ಸಂಕಲ್ಪ’ ಸ್ವಚ್ಛತಾ ಅಭಿಯಾನವನ್ನು ಕೈಗೊಂಡಿತು.


ಉಡುಪಿ ಜಿಲ್ಲಾ ಅಮೆಚೂರ್ ಅಥ್ಲೆಟಿಕ್ ಅಸೋಸಿಯೇಷನ್‌ನ ಅಧ್ಯಕ್ಷ ಅಶೋಕ್ ಅಡ್ಯಂತಾಯ ಸ್ವಚ್ಛ ಸಂಕಲ್ಪವನ್ನು ಉದ್ದೇಶಿಸಿ ಮಾತನಾಡಿ, ಸ್ವಚ್ಛತೆ ಎನ್ನುವುದು ಆರೋಗ್ಯಕರ ಸಮಾಜದ ಅಡಿಪಾಯ. ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯೂ ಹೌದು. ಇದೇ ಉದ್ದೇಶವನ್ನು ಮನಗಂಡು  ಮೂಡುಬಿದಿರೆಯಲ್ಲಿ ವಿವಿಧ ಸಂಘ–ಸಂಸ್ಥೆಗಳು ಕೈಜೋಡಿಸಿ “ಸ್ವಚ್ಛ ಸಂಕಲ್ಪ” ಎಂಬ ಮಹತ್ವದ ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಂಡಿವೆ ಎಂದರು.


ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ,  ಆಳ್ವಾಸ್‌ನಿಂದ ಕಳೆದ 12 ವರ್ಷಗಳಿಂದ ಅಳಿವೆ ಪ್ರದೇಶದಲ್ಲಿ ನಿರಂತರವಾಗಿ ಸ್ವಚ್ಛತಾ ಅಭಿಯಾನ ನಡೆಸುತ್ತ ಬ ರಲಾಗಿದೆ.  ನಂದಿನಿ ಹಾಗೂ ಫಾಲ್ಗುಣಿ ನದಿಗಳು ಈ ಭಾಗದಲ್ಲಿ ಹರಿಯುತ್ತಿದ್ದು, ಅವುಗಳಿಗೆ ಸಂಪರ್ಕ ಹೊಂದಿರುವ ಚರಂಡಿಗಳ ಮೂಲಕ ತ್ಯಾಜ್ಯಗಳು ನದಿಗೆ ಸೇರುವ ಅಪಾಯವಿದೆ. ಮಳೆಗಾಲ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ರಸ್ತೆ ಬದಿಗಳು ಹಾಗೂ ಚರಂಡಿಗಳಲ್ಲಿ ಬಿದ್ದಿರುವ ಪ್ಲಾಸ್ಟಿಕ್ ಮತ್ತು ಇತರೆ ಕಸಕಡ್ಡಿಗಳು ಸುಲಭವಾಗಿ ಸಮುದ್ರ ಸೇರುವ ಸಾಧ್ಯತೆ ಇರುವುದರಿಂದ ಪರಿಸರ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ. 

ಪಶ್ಚಿಮಘಟ್ಟ ಹಾಗೂ ಸಮುದ್ರ ತೀರ ಪ್ರದೇಶಗಳ ಮಧ್ಯೆ ಇರುವ ಈ ಭಾಗ ಅತೀ ಸೂಕ್ಷ್ಮ ಪರಿಸರ ವಲಯವಾಗಿದ್ದು, ಪರಿಸರವನ್ನು ಕಾಪಾಡುವ ಹೊಣೆಗಾರಿಕೆಯನ್ನು ಪ್ರತಿಯೊಬ್ಬರೂ ಸಮಾನವಾಗಿ ಸ್ವೀಕರಿಸಬೇಕು. ನಮ್ಮ ಊರು–ನಮ್ಮ ಜವಾಬ್ದಾರಿ ಎಂಬ ಮನೋಭಾವದೊಂದಿಗೆ ಎಲ್ಲರೂ ಕೈಜೋಡಿಸಿದಾಗ ಮಾತ್ರ ಪರಿಸರ ಸಂರಕ್ಷಣೆ ಸಾಧ್ಯವೆಂದು ಹೇಳಿದರು.

ಅಭಿಯಾನದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ, ನಮ್ಮ ಮೂಡುಬಿದಿರೆ, ನೇತಾಜಿ ಬ್ರಿಗೇಡ್, ಜೆಸಿಐ, ಮೂಡುಬಿದಿರೆ ಬಂಟರ ಮಹಿಳಾ ಸಂಘದ ಸದಸ್ಯರು, ಆಳ್ವಾಸ್‌ನ 600ಕ್ಕೂ ಅಧಿಕ ವಿದ್ಯಾರ್ಥಿಗಳು, ಸಾವ೯ಜನಿಕರು ಸ್ವಚ್ಛತಾ ಕಾಯ೯ದಲ್ಲಿ ಪಾಲ್ಗೊಂಡಿದ್ದರು.

ರಾಮಕೃಷ್ಣ ಮಿಷನ್‌ನ ರಂಜನ್ ಬೆಳ್ಳರ್ಪಾಡಿ, ನಮ್ಮ ಮೂಡುಬಿದಿರೆಯ ಅಕ್ಷಯ ಜೈನ್, ನೇತಾಜಿ ಬ್ರಿಗೇಡ್ ರಾಹುಲ್,  ಬಂಟರ ಮಹಿಳಾ ಘಟಕದ ಶೋಭಾ ಹೆಗ್ಡೆ, ರ‍್ಯಾವರಣ ಗತಿವಿಧಿಯ ವೆಂಕಟೇಶ್, ಕೇಶವ, ಚಂದ್ರಹಾಸ, ಮಂಜುನಾಥ ಶೆಟ್ಟಿ ಹಾಗೂ ಪ್ರಮುಖರಾದ ಯಾಸಿರ್, ಸಂಪತ್  ಉಪಸ್ಥಿತರಿದ್ದರು.

ಸ್ವಚ್ಛತಾ ಕಾರ್ಯದ ವೇಳೆ 700ಕ್ಕೂ ಅಧಿಕ ಚೀಲಗಳಷ್ಟು ಕಸಕಡ್ಡಿಗಳನ್ನು ಸಂಗ್ರಹಿಸಿ ವಿಲೇವಾರಿ ಮಾಡಲಾಯಿತು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article