ಸಂತ ಫಿಲೋಮಿನಾ ಕಾಲೇಜಿನಲ್ಲಿ ಐಡಿಯೇಶನ್ ಬೂಟ್ಕ್ಯಾಂಪ್-2026ಗೆ ಚಾಲನೆ
ಕಾರ್ಯಕ್ರಮದ ಮುಖ್ಯ ಅತಿಥಿ ಹಾಗೂ ಸಂಪನ್ಮೂಲ ವ್ಯಕ್ತಿಯಾಗಿ ಮೆಡೋರಾ ಸಂಸ್ಥೆಯ ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಹ್ಯೂಮನಾಯ್ಡ್ ಎಐ ಸಂಸ್ಥೆಯ ಸಹ-ಸ್ಥಾಪಕ ಉರೂಜ್ ಅಖ್ತರ್ ಖಾನ್ ಭಾಗವಹಿಸಿದರು. ಅವರು ಕೃತಕ ಬುದ್ಧಿಮತ್ತೆ, ರೋಬೋಟಿಕ್ಸ್, ಡಿಜಿಟಲ್ ಹೆಲ್ತ್ಕೇರ್ ಹಾಗೂ ಸ್ಟಾರ್ಟ್‌ಅಪ್ ಕ್ಷೇತ್ರಗಳಲ್ಲಿ ಉದಯೋನ್ಮುಖ ಅವಕಾಶಗಳ ಕುರಿತು ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕ ಉಪನ್ಯಾಸ ನೀಡಿದರು.
ಹೊಸ ಆಲೋಚನೆಗಳನ್ನು ಕಾರ್ಯರೂಪಕ್ಕೆ ತರುವ ಧೈರ್ಯ, ಸಮಸ್ಯೆಗಳನ್ನು ಗುರುತಿಸಿ ತಂತ್ರಜ್ಞಾನ ಆಧಾರಿತ ಪರಿಹಾರಗಳನ್ನು ರೂಪಿಸುವ ಮನೋಭಾವ ಹಾಗೂ ಉದ್ಯಮಶೀಲತೆಯ ಮಹತ್ವವನ್ನು ವಿವರಿಸಿದರು.
ಮೂರು ದಿನಗಳ ಕಾಲ ನಡೆಯಲಿರುವ ಬೂಟ್ಕ್ಯಾಂಪ್ನಲ್ಲಿ ವಿದ್ಯಾರ್ಥಿಗಳಿಗಾಗಿ ಐಡಿಯಾ ಪಿಚಿಂಗ್, ಮೆಂಟರಿಂಗ್, ಸ್ಟಾರ್ಟ್‌ಅಪ್ ಮಾರ್ಗದರ್ಶನ, ನವೀನತೆಯ ಕಾರ್ಯಾಗಾರಗಳು ಹಾಗೂ ಸಂವಾದಾತ್ಮಕ ಚಟುವಟಿಕೆಗಳನ್ನು ಆಯೋಜಿಸಲಾಗಿದೆ. ಬಿಸಿಎ, ಬಿಸಿಎ(ಎಐ & ಎಂಲ್), ಬಿಸಿಎ ಡೇಟಾ ಅನಲಿಟಿಕ್ಸ್ ಹಾಗೂ ಬಿಎಸ್ಸಿ ಡೇಟಾ ಸಯನ್ಸ್ ತರಗತಿಗಳ 100 ವಿದ್ಯಾರ್ಥಿಗಳು ಭಾಗವಹಿಸಿರುತ್ತಾರೆ.
ಕಾಲೇಜಿನ ಇನೋವೇಶನ್ ಮತ್ತು ಇನ್ಕ್ಯೂಬೇಷನ್ ಕೇಂದ್ರದ ಡಿಐಎ ಅಭಿಷೇಕ್ ಸುವರ್ಣ ಸ್ವಾಗತಿಸಿದರು. ನೈನ್ ಯೋಜನಾ ಸಂಯೋಜಕ ಡಾ. ವಿನಯಚಂದ್ರ ಮೂರು ದಿನಗಳ ಕಾಲ ನಡೆಯಲಿರುವ ವಿವಿಧ ಚಟುವಟಿಕೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
ಸ್ನಾತಕೋತ್ತರ ಕಂಪ್ಯೂಟರ್ ಅಪ್ಲಿಕೇಶನ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಶೋಧನ್ ಪಿ.ಜಿ. ವಂದಿಸಿದರು. ಇನ್ಕ್ಯೂಬೇಷನ್ ಕೇಂದ್ರದ ಎಂ.ಐ.ಎಸ್ ಕಾರ್ಡಿನೇಟರ್ ಡಾ. ಗೀತಾ ಪೂರ್ಣಿಮಾ ಕೆ. ಕಾರ್ಯಕ್ರಮ ನಿರೂಪಿಸಿದರು. ಸ್ನಾತಕೋತ್ತರ ಕಂಪ್ಯೂಟರ್ ಅಪ್ಲಿಕೇಶನ್ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಅಕ್ಷತಾ ಬಿ. ಹಾಗೂ ನೀಲಮ್ ಕುಟ್ಟಪ್ಪ ಸಹಕಾರ ನೀಡಿದರು.

