ಹೊಸಂಗಡಿ-ಮಾರೂರಿನ ಶ್ರೀ ಗೋಪಾಲಕೃಷ್ಣ ದೇವರ ಬ್ರಹ್ಮಕಲಶಾಭಿಷೇಕ ಸಮಾಪ್ತಿ

ಹೊಸಂಗಡಿ-ಮಾರೂರಿನ ಶ್ರೀ ಗೋಪಾಲಕೃಷ್ಣ ದೇವರ ಬ್ರಹ್ಮಕಲಶಾಭಿಷೇಕ ಸಮಾಪ್ತಿ


ಮೂಡುಬಿದಿರೆ: ಒಂಭತ್ತು ಮಾಗಣೆಗಳ ಆರಾಧ್ಯ ದೇವರಾಗಿರುವ ಹೊಸಂಗಡಿ-ಮಾರೂರಿನ ಶ್ರೀ ಗೋಪಾಲಕೃಷ್ಣ ದೇವರಿಗೆ ಶುಕ್ರವಾರ ಬೆಳಿಗ್ಗೆ ಬ್ರಹ್ಮಕಲಶೋತ್ಸವ ನೆರವೇರಿತು. 

ಎಡಪದವು ಬ್ರಹ್ಮಶ್ರೀ ಮುರಳೀಧರ ತಂತ್ರಿವಯ೯ರ ನೇತೃತ್ವದಲ್ಲಿ ಮಾರೂರು ಖಂಡಿಗ ವೇದಮೂತಿ೯ ರಾಮದಾಸ ಅಸ್ರಣ್ಣ ಮತ್ತು ದೇವಸ್ಥಾನದ ಪ್ರಧಾನ ಅಚ೯ಕರಾದ ವೇದಮೂತಿ೯ ವೆಂಕಟರಾಜ ಅಸ್ರಣ್ಣರ ಪೌರೋಹಿತ್ಯದಲ್ಲಿ ವಿವಿಧ ಧಾಮಿ೯ಕ ವಿಧಿವಿಧಾನಗಳೊಂದಿಗೆ ಪೂವಾ೯ಹ್ನ 7.30ರ ವೃಷಭ ಲಗ್ನದಲ್ಲಿ ಶ್ರೀ ದೇವರಿಗೆ ಸಹಸ್ರ ಕುಂಭ ಬ್ರಹ್ಮಕಲಶಾಭಿಷೇಕವು ನ್ಯಾಸ ಪೂಜೆ, ಪ್ರತಿಜ್ಞಾ ವಿಧಿ, ಮಹಾಪೂಜೆ, ಆವಭೃತ ಬಲಿ, ಧ್ವಜರೋಹಣ, ಪಲ್ಲ ಪೂಜೆ, ಮಹಾ ಅನ್ನ ಸಂತಪ೯ಣೆಯೊಂದಿಗೆ ಸಮಾಪ್ತಿಗೊಂಡಿತು.

ದೇವಸ್ಥಾನದ ಆಡಳಿತ ಮೊಕ್ತೇಸರ ಹೊಸಂಗಡಿ ಅರಮನೆಯ ಸಂಪತ್ ಕುಮಾರ್ ಶೆಟ್ಟಿ, ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ, ಬ್ರಹ್ಮ ಕಲಶೋತ್ಸವ ಸಮಿತಿಯ ಕಾಯ೯ಧ್ಯಕ್ಷ  ಮಾರೂರು ಗುತ್ತು ಶಂಭು ಎನ್. ಶೆಟ್ಪಿ, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಎ. ಜೀವಾಂಧರ ಕುಮಾರ್, ಜೀಣೋ೯ದ್ಧಾರ ಸಮಿತಿಯ ಅಧ್ಯಕ್ಷ ಕೆ. ಶ್ರೀಪತಿ ಭಟ್,  ಮುಂಬಯಿ ಸಮಿತಿಯ ಅಧ್ಯಕ್ಷ ಮಾರೂರು ಗುತ್ತು ಬೋಜ ಎನ್. ಶೆಟ್ಟಿ, ಆಡಳಿತ ಮೊಕ್ತೇಸರರು  ಸಂಪತ್ ಕುಮಾರ್ ಶೆಟ್ಟಿ ,   ಪ್ರಧಾನ ಕಾಯ೯ದಶಿ೯ ರವಿಪ್ರಸಾದ್ ಕೆ. ಶೆಟ್ಟಿ, ಉಪಾಧ್ಯಕ್ಷರುಗಳಾದ ಶ್ರೀಪತಿ ಬಡಕೋಡಿ, ಮಿತ್ತೊಟ್ಟುಗುತ್ತು ಸುಧಾಕರ ಶೆಟ್ಟಿ, ಕಾಯ೯ದಶಿ೯ ಸುನಿಲ್ ಕುಮಾರ್ ಶೆಟ್ಟಿ ಮಾರೂರು, ಕೋಶಾಧ್ಯಕ್ಷ ಶಂಕರ ಎ. ಕೋಟ್ಯಾನ್,  ಸ್ವಾಗತ ಸಮಿತಿಯ ಅಧ್ಯಕ್ಷ ರಮೇಶ್ ಎಸ್. ಶೆಟ್ಟಿ, ಸೇರಿದಂತೆ   ಪದಾಧಿಕಾರಿಗಳು, ಸದಸ್ಯರು, ಒಂಭತ್ತು ಮಾಗಣೆಗಳಿಂದ ಆಗಮಿಸಿದ ಭಕ್ತರು ಈ ಸಂದಭ೯ದಲ್ಲಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article