ಆಳ್ವಾಸ್ ವಿದ್ಯಾರ್ಥಿಗಳ ಮಾದರಿ ಕಾರ್ಯ: ‘ಚಿಣ್ಣರ ತಂಗುದಾಣ’ಕ್ಕೆ ನೆರವಿನ ಹಸ್ತ
ಈ ಸಂದರ್ಭದಲ್ಲಿ ಕೇರಳ ರಾಜ್ಯದ ವಿದ್ಯಾರ್ಥಿಗಳ ತಂಡವು ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಚಾಂಪಿಯನ್ ಪಟ್ಟವನ್ನು ತನ್ನದಾಗಿಸಿಕೊಂಡಿತ್ತು.
ಕೇವಲ ಸಾಂಸ್ಕೃತಿಕ ಸಂಭ್ರಮಕ್ಕೆ ಸೀಮಿತವಾಗದೆ, ಸಮಾಜದ ಒಳಿತಿಗೂ ಕೈಜೋಡಿಸುವ ಉದ್ದೇಶದಿಂದ ಆಹಾರ ಮೇಳದಿಂದ ಸಂಗ್ರಹವಾದ ಮೊತ್ತವನ್ನು ಪ್ರತೀ ವರ್ಷದಂತೆ ಸಮಾಜಮುಖಿ ಕಾರ್ಯಗಳಿಗೆ ಬಳಸಲು ನಿರ್ಧರಿಸಲಾಯಿತು. ಕಳೆದ ವರ್ಷದ ಟ್ರೆಡಿಷನಲ್ ಡೇ ಕಾರ್ಯಕ್ರಮದಲ್ಲಿ ಸಂಗ್ರಹಿಸಿದ ಸುಮಾರು ₹1 ಲಕ್ಷ ಮೊತ್ತವನ್ನು ಮಣಿಪುರ ಸಂಘರ್ಷದಿಂದ ಸಂಕಷ್ಟಕ್ಕೆ ಒಳಗಾದ ಕುಟುಂಬಗಳಿಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ನೆರವಿನ ರೂಪದಲ್ಲಿ ನೀಡಲಾಗಿತ್ತು.
ಅದೇ ಪರಂಪರೆಯನ್ನು ಮುಂದುವರಿಸಿಕೊಂಡು ಈ ಬಾರಿ ಮಂಗಳೂರಿನ ‘ಚಿಣ್ಣರ ತಂಗುದಾಣ’ಕ್ಕೆ ಭೇಟಿ ನೀಡಿ ಮಕ್ಕಳ ಅಗತ್ಯಗಳಿಗೆ ತಕ್ಕ ಸಾಮಗ್ರಿಗಳನ್ನು ವಿತರಿಸಲಾಯಿತು.
“ಶಿಕ್ಷಣವು ಕೇವಲ ಪಠ್ಯಜ್ಞಾನಕ್ಕೆ ಸೀಮಿತವಾಗಿರದೆ, ಸಮಾಜದ ನೋವಿಗೆ ಸ್ಪಂದಿಸುವ ಮನಸ್ಸನ್ನು ರೂಪಿಸಬೇಕು. ಸಂಪ್ರದಾಯ ದಿನಾಚರಣೆಯ ಮೂಲಕ ವಿದ್ಯಾರ್ಥಿಗಳು ಸಾಂಸ್ಕೃತಿಕ ವೈವಿಧ್ಯತೆಯನ್ನು ಅರಿತುಕೊಳ್ಳುವುದರ ಜೊತೆಗೆ ಸಮಾಜದತ್ತ ತಮ್ಮ ಹೊಣೆಗಾರಿಕೆಯನ್ನು ಕಾರ್ಯರೂಪದಲ್ಲಿ ತೋರಿಸಿದ್ದಾರೆ. ಈ ಮನೋಭಾವ ಯುವಜನರಲ್ಲಿ ಮಾನವೀಯತೆ, ಸಹಾನುಭೂತಿ ಹಾಗೂ ಸಾಮಾಜಿಕ ಬದ್ಧತೆಯನ್ನು ಬೆಳೆಸುತ್ತದೆ ಎಂದು ವಿವೇಕ್ ಆಳ್ವ ತಿಳಿಸಿದರು.
