ಮೂಡುಬಿದಿರೆ: ಆರೋಗ್ಯ ಸಮಿತಿ ಸದಸ್ಯರಾಗಿಆರು ಮಂದಿ ಆಯ್ಕೆ
Saturday, May 16, 2026
ಮೂಡುಬಿದಿರೆ: ಮೂಡುಬಿದಿರೆ ಸಮುದಾಯ ಆರೋಗ್ಯ ಕೇಂದ್ರದ ಆರೋಗ್ಯ ರಕ್ಷಾ ಸಮಿತಿಯ ಸದಸ್ಯರನ್ನು ನೇಮಕ ಮಾಡಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಅಧಿಸೂಚನೆ ಹೊರಡಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರ ಅನುಮೋದನೆಯಂತೆ ನೇಮಕಾತಿ ನಡೆದಿದೆ. ಸಮಿತಿಯ ಸಾಮಾನ್ಯ ವಿಭಾಗದ ಸದಸ್ಯರಾಗಿ ಸೂರಜ್ ಶಿತಾ೯ಡಿ, ಸುರೇಶ್ ಪ್ರಭು, ರಮೇಶ್ ಎಸ್. ಶೆಟ್ಟಿ, ಸುರೇಶ್ ದೇವಾಡಿಗ ನೇಮಕಗೊಂಡಿದ್ದಾರೆ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಕೋಟಾದಲ್ಲಿ ಕಿರಣ್ ಕುಮಾರ್ ಮತ್ತು ಮಹಿಳಾ ಪ್ರತಿನಿಧಿಯಾಗಿ ಸುಪ್ರಿಯಾ ಶೆಟ್ಟಿ ಅವರನ್ನು ಮುಂದಿನ ಆದೇಶದವರೆಗೆ ತಕ್ಷಣದಿಂದ ಜಾರಿಗೆ ಬರುವಂತೆ ನಾಮನಿರ್ದೇಶನ ಮಾಡಿ ಆದೇಶಿಸಲಾಗಿದೆ.